ಬೆಳಗಾವಿ- ಪರಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಭೆಯಲ್ಲಿ ವ್ಯೆಯಕ್ತಿಕ ವಿಷಯಗಳನ್ನು ಚರ್ಚೆ ಮಾಡುವದು ಸರಿಯಲ್ಲ ಸಭೆಯಲ್ಲಿ ಸಮಾಜದ ಅಭಿವೃದ್ಧಿಗೆ ಸಂಬಂದಿಸಿದ ವಿಷಯಗಳನ್ನು ಚರ್ಚೆ ಮಾಡಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸರ್ಕಾರದ ಸವಲತ್ತುಗಳನ್ನು ಬಡ ದಲಿತ ಬಂಧುಗಳಿಗೆ ಕಲ್ಪಿಸುವ ಸೇತುವೆಯಾಗಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಜಯರಾಂ ಜಿಲ್ಲೆಯ ದಲಿತ ನಾಯಕರಿಗೆ ಕಿವಿಮಾತು ಹೇಳಿದರು
ಬುಧವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಸಮೀತಿಯ ಸಭೆಯಲ್ಲಿ ಕೆಲವರು ವ್ಯೆಯಕ್ತಿಕ ವಿಷಯಗಳನ್ನು ಪ್ರಾಸ್ತಾಪಿಸಿದಾಗ ಅದಕ್ಕೆ ಡಿಸಿ ಜಯರಾಂ ಈ ರೀತಿ ಉತ್ತರಿಸಿದರು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಲಾಭ ಸಮುದಾಯದ ಜನರಿಗೆ ಸಿಗಬೇಕು ಅದಕ್ಕಾಗಿ ದಲಿತ ಸಮಾಜದ ಮುಖಂಡರು ಮುತವರ್ಜಿ ವಹಿಸಬೇಕೆಂದರು
ಐದು ವರ್ಷದಲ್ಲಿ ಕೇವಲ ಐದು ದೌರ್ಜನ್ಯ ಪ್ರಕರಣಗಳಿಗೆ ಸಂಬಂದಿಸಿದಂತೆ ಆರೋಪಿಗಳಿಗೆ ಶಿಕ್ಷೆಯಾಗಿದೆ ಸಾಕ್ಷಿಗಳಿಗೆ ವಿಚಾರಣೆಯ ಮೊದಲು ಧೈರ್ಯ ತುಂಬುವ ಕೆಲಸ ಮಾಡಬೇಕು ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು
ಸಂಸದ ಸುರೇಶ ಆಂಗಡಿ ಮಾತನಾಡಿ ಬ್ಯಾಂಕಿನವರು ದಲಿತ ಸಮಾಜದ ಯುವಕರಿಗೆ ಸಾಲ ಕೊಡುತ್ತಿಲ್ಲ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯೆಕ್ತಪಡಿಸಿದರು