ಬೆಳಗಾವಿ- ಬೆಳಗಾವಿ ಜಿಲ್ಲಾಸ್ಪತ್ರೆಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯ ನ್ನು ಕಂಡು ದಂಗಾದರು
ಬೆಳಗಾವಿ ಜಿಲ್ಲಾ ಆಸ್ಪತ್ರೆ ವಿಪರೀತ ಮಳೆಯಿಂದಾಗಿ ಸೋರುತ್ತಿದ್ದು ಕೂಡಲೇ ಆಸ್ಪತ್ರೆಯ ಛಾವಣಿ ಸೋರದಂತೆ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು
ಆಸ್ಪತ್ರೆಗೆ ಸೋಲಾರ್ ಅಳವಡಿಸುವ ಸಂಧರ್ಭದಲ್ಲಿ ಛಾವಣಿಯನ್ನು ಡ್ರೀಲ್ ನಿಂದ ಕೊರೆಯಿಸಿ ಸೋಲಾರ್ ಅಳವಡಿಸಿದ್ದರಿಂದ ಆಸ್ಪತ್ರೆಯ ಅಧಿಕಾರಿಗಳು ಸಬೂಬು ಹೇಳಿದಾಗ ಅದಕ್ಕೆ ಆಕ್ರೋಶ ವ್ಯೆಕ್ತ ಪಡಿಸಿದ ಡಿಸಿ ಜಿಯಾವುಲ್ಲಾ ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡ ರೋಗಿಗಳು ಬರುತ್ತಾರೆ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ.ಈ ವಿಷಯದಲ್ಲಿ ಅಧಿಕಾರಿಗಳು ಮಾನವೀಯತೆಯ ದೃಷ್ಠಿಯಿಂದ ಪ್ರಾಮಾಣಿಕ ಸೇವೆ ಮಾಡಬೇಕು ಸಾರ್ವಜನಿಕರಿಂದ ದೂರುಗಳು ಬಾರದ ಹಾಗೆ ಸಮನ್ವಯತೆ ಯಿಂದ ಕೆಲಸ ಮಾಡಬೇಕು ಎಂದು ಜಿಯಾವುಲ್ಲಾ ತಾಕೀತು ಮಾಡಿದ್ರು
ಭೀಮ್ಸ ಮತ್ತು ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಪರಸ್ಪರವಾಗಿ ಸಮನ್ವಯತೆ ಯಿಂದ ಕೆಲಸ ಮಾಡಬೇಕು ಆಸ್ಪತ್ರೆಯ ಡ್ರಿನೇಜ್ ದುರಸ್ಥಿ ಸೇರಿದಂತೆ ಆಸ್ಪತ್ರೆ ಸೋರದಂತೆ ಛಾವಣಿ ದುರಸ್ಥಿ ಮಾಡುವ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಕಟ್ಟುನಿಟ್ಟಿನ ಸೂಚನೆ ನೀಡಿದರು
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೀಮ್ಸ ಅಧಿಕಾರಿಗಳು ಉಪಸ್ಥಿತರಿದ್ದರು