Breaking News

ಪೇನಶನ್….ರೇಶನ್ ಇಲ್ವೇ…ಹಾಗಿದ್ರೆ ನೋ ಟೆನಶ್ಯನ್….!!!!

ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಸರಕಾರದ ವಿವಿಧ ಪಿಂಚಣಿ ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪವೇತನ, ಸಂದ್ಯಾ ಸುರಕ್ಷಾ, ಮನಸ್ವೀನಿ ವೇತನ ಹಾಗೂ ಪಡಿತರ ಚೀಟಿ ಹೊಂದಿರದ ಕುಟುಂಬಗಳ ನೋಂದಣಿ ಕಾರ್ಯಕ್ರಮ ಹಾಗೂ ಪೇನ್‍ಶೆನ್ ಅದಾಲತ್ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಮ್ಮಿಕೊಂಡಿದ್ದಾರೆ.

ದಿನಾಂಕ 26ರಂದು ಸಿಂದೋಳಿ, ಬಸರಿಕಟ್ಟಿ, ನಿಲಜಿ ಗ್ರಾಮಗಳ ನೋಂದಣಿ ಅಭಿಯಾನ ಮುಂಜಾನೆ 10 ಗಂಟೆಯಿಂದ ನಿಲಜಿ ಗ್ರಾಮದ ಶ್ರೀರಾಮ ಕಾಲೋನಿಯಲ್ಲಿರುವ ದುರ್ಗಾಮಾತಾ ಮಂಗಲಕಾರ್ಯಾಲಯದಲ್ಲಿ ನಡೆಯಲಿದೆ.

ದಿನಾಂಕ 27ರಂದು ಶುಕ್ರವಾರ ಬಾಳೇಕುಂದ್ರಿ ಕೆ.ಎಚ್.ಬಾಳೇಕುಂದ್ರಿ, ಬಿ.ಕೆ., ಮಾವಿನ ಕಟ್ಟಿ, ಹೊನ್ನಿಹಾಳ ಗ್ರಾಮಗಳ ನೋಂದಣಿ ಕಾರ್ಯಕ್ರಮ ಬಾಳೇಕುಂದ್ರಿಯ ಪಂಥ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಯವರೆಗೆ ನಡೆಯಲಿದೆ.
ದಿನಾಂಕ 28 ಶನಿವಾರ ಮುತಗಾ ಮತ್ತು ಸಾಂಬ್ರಾ ಗ್ರಾಮಗಳ ನೋಂದಣಿ ಕಾರ್ಯಕ್ರಮ ಸಾಂಬ್ರಾದ ದುರ್ಗಾದೇವಿ ಮಂದಿರದಲ್ಲಿ ಬೆಳಗ್ಗೆ 10ರಿಂದ ಆರಂಭವಾಗಲಿದೆ.

ದಿನಾಂಕ 29 ಭಾನುವಾರದಂದು ಮೊದಗಾ ಗ್ರಾಮದ ಚಿಂಚಣಿ ಹಾಗೂ ಪಡಿತರ ಚೀಟಿ ಅಭಿಯಾನ ಬೆಳಗ್ಗೆ 10 ಗಂಟೆಯಿಂದ ಮೊದಗಾ ಗ್ರಾಮದ ಬಸವೇಶ್ವರ ಗ್ರಾಮದಲ್ಲಿ ನಡೆಯಲಿದೆ.
ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿರುವ ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು ಸರಕಾರದ ಸೌಲತ್ತುಗಳನ್ನು ಪಡಯಬೇಕು. ವಿವಿಧ ಯೋಜನೆಗಳ ಸೌಲತ್ತಿಗಾಗಿ ಅರ್ಜಿ ಸಲ್ಲಿಸುವವರು ಅಭಿಯಾನಕ್ಕೆ ಬರುವಾಗ ನಾಲ್ಕು ಭಾವ ಚಿತ್ರಗಳು, ಆಧಾರ ಕಾರ್ಡ, ರೇಷನ್ ಕಾರ್ಡ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‍ಬುಕ್ ತರಬೇಕು.
ಗ್ರಾಮೀಣ ಕ್ಷೇತ್ರದ ಸಾರ್ವಜನಿಕರು ಸರಕಾರದ ಯಾವುದೇ ಸೌಲತ್ತುಗಳಿಂದ ವಂಚಿತರಾಗಬಾರದು. ಸರಕಾರದ ಯೋಜನೆಗಳು ಕ್ಷೇತ್ರದ ಮನೆಮಗೆಗೂ ತಲುಪಿಸುವ ಸದುದ್ದೇಶದಿಂದ ಕ್ಷೇತ್ರದಲ್ಲಿ ಪಿಂಚಣಿ ಅದಾಲತ್ ಹಾಗೂ ಪಡಿತರ ಚೀಟಿ ನೋಂದಣಿ ಅಭಿಯಾನ ಆರಂಭಿಸಲಾಗಿದ್ದು, ಹಂತ ಹಂತವಾಗಿ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಈ ಅಭಿಯಾನ ನಡೆಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ ಪ್ರಕಣೆಯಲ್ಲಿ ತಿಳಿಸಿದ್ದಾರೆ.

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *