Breaking News

ತಟ್ಟೆಯಲ್ಲಿ ಊಟ ಇಟ್ಕೊಂಡು ನೆಪ ಹೇಳಬೇಡಿ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್

ಬೆಳಗಾವಿ : ನರೇಗಾ ಯೋಜನೆಯಲ್ಲಿ ಸರಿಯಾಗಿ ಯೋಜನೆ ರೂಪಿಸದಿದ್ದರೆ ನಿಗಧಿತ ಸಮಯದಲ್ಲಿ ಗುರಿ ಮುಟ್ಟಲು ಸಾಧ್ಯವಿಲ್ಲ. ಉದ್ಯೋಗ ಖಾತ್ರಿ ಹಣ ಸರಿಯಾಗಿ ಬಳಸಿಕೊಂಡು ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ಇಲ್ಲಿನ ಜಿಪಂ ಸಭಾ ಭವನದಲ್ಲಿ ಜಿಪಂನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ದನದ ಕೊಟ್ಟಿಗೆ, ಅಂಗನವಾಡಿ ಕಟ್ಟಡ, ಸ್ಮಶಾನ ಕೌಂಪೌಡ, ಶಾಲಾ ಆವರಣ ಗೋಡೆಗಳ ನಿರ್ಮಿಸಲು ನೆಪ ಹೇಳದೆ ಸರಿಯಾಗಿ ಕೆಲಸ ಮಾಡಬೇಕು. ತಟ್ಟೆಯಲ್ಲಿ ಊಟ ಇಟ್ಟಕೊಂಡು ಪಿಡಿಒ ಇಲ್ಲ- ಸಮಸ್ಯೆ ಹೇಳೋದಲ್ಲ. ಸಿಬ್ಬಂದಿ ಇಲ್ಲ ಅನ್ನೋದು ನೆಪ ಆಗಬಾರದು. ಜನಪ್ರತಿನಿಧಿಗಳು ಹೀಗೆ ಹೇಳಬಾರದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ದೇಶದಲ್ಲಿ ಎರಡು ರಾಜ್ಯಗಳು ಮಾತ್ರ ಬಯಲು ಶೌಚ ಮುಕ್ತ ರಾಜ್ಯಗಳಾಗಿ ಘೋಷಿಸಲಾಗಿದೆ. ಬರುವ ಅಕ್ಟೋಬರ್ 2 ರೊಳಗಾಗಿ ರಾಜ್ಯವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆ ಎಲ್ಲ ರಂಗದಲ್ಲಿ ಮುಂದೆಯಿದೆ. ಶೌಚಾಲಯಗಳ ನಿರ್ಮಾಣದಲ್ಲಿ ಹಿಂದೆ ಬಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬೇರೆ ಕೆಲಸಗಿಗೆ ಬಳಕೆ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು. ಅಕ್ಟೋಬರ್ 2ರೊಳಗಾಗಿ ಬಯಲು ಶೌಚ ಮುಕ್ತ ಜಿಲ್ಲೆ ಮಾಡುವಂತೆ ಸಚಿವ ಭೈರೇಗೌಡ ಸೂಚನೆ ನೀಡಿದರು.

ಶಾಸಕರಾದ ಪಿ. ರಾಜೀವ್, ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡರ್, ಮಹಾದೇವಪ್ಪ ಯಾದವಾಡ, ಶ್ರೀಮಂತ ಪಾಟೀಲ, ಅಂಜಲಿ ನಿಂಬಾಳಕರ್, ಮಹೇಶ ಕುಮಟೋಳಿ,ವಿ.ಪ.ಸದಸ್ಯ ಮಹಾಂತೇಶ ಕವಟಗಿಮಠ, ಜಿಪಂ ಅಧÀ್ಯಕ್ಷೆ ಆಶಾ ಐಹೋಳಿ, ಜಿ.ಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತುಕ, ಆಯುಕ್ತ ಪ್ರಕಾಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
=================
ಏಕಾಂಗಿಯಾಗಿ ಕುಳಿತ ಶಾಸಕ ಮಹೇಶ
ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅಥಣಿ ಶಾಸಕ ಮಹೇಶ ಕುಮಟೊಳ್ಳಿ ಅವರನ್ನು ಜಿಪಂನ ಅಧಿಕಾರಿಗಳು ಕಡೆಗಣಿಸಿದ್ದರು. ಜಿಪಂನ ಕಾರ್ಯವೈಕರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಮೊದಲ ಸಾಲಿನಲ್ಲಿ ಜಿಲ್ಲೆಯ ಶಾಸಕರು ಕುಳಿತುಕ್ಕೊಂಡಿದ್ದರೆ, ನಾಲ್ಕನೆಯ ಸಾಲಿನಲ್ಲಿ ಶಾಸಕ ಮಹೇಶ ಕುಮಟೊಳ್ಳಿ ಏಕಾಂಗಿಯಾಗಿ ಕುಳಿತುಕೊಂಡಿದ್ದರು.
=====================
ಸಚಿವರ ಸಭೆ: ಇಂಗ್ಲೀಷ್ ಮೇಡಂ ಪಾಠ್
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಖಾನಾಪೂರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರು ಕನ್ನಡದಲ್ಲಿ ಮಾತು ಆರಂಭಿಸಿ, ಇಂಗ್ಲೀಷ್‍ನಲ್ಲಿ ಮಾತು ಮುಂದುವರೆಸಿ, ಮಳೆಗಾಲ ಆರಂಭವಾಗಿದೆ. ಜಾನುವಾರುಗಳಿಗೆ ಅವೈಜ್ಞಾನಿಕವಾಗಿ ಲಸಿಕೆ ನೀಡಲಾಗುತ್ತಿದೆ. ಮುಖ ಪ್ರಾಣಿಗಳು ಸಮಸ್ಯೆಗಳನ್ನು ಹೆಗೆ ಹೇಳಲು ಸಾಧ್ಯ. ನೀವು ಜಾಗೃತಿ ನಡೆಸದೆ ಲಸಿಕೆ ಹಾಕುತ್ತಿರುವುದು ಮಾರಕವಾಗಿ ಜಾನುವಾರುಗಳು ಸಾವನಪ್ಪುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿ, ಜಾನುವಾರುಗಳು ಸಾವನಪ್ಪಿ ಮೂರು ತಿಂಗಳಾದರು ಪರಿಹಾರ ವಿತರಣೆಯಾಗಿಲ್ಲ ಎಂದು ಸಚಿವ, ಸಿಇಒ ಹಾಗೂ ಅಧಿಕಾರಿಗಳಿದ್ದ ಸಭೆಯಲ್ಲಿ ಮುಖ ಪ್ರಾಣಿಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಮಹಾರಾಷ್ಟ್ರದವರಾದರು ಕನ್ನಡ ಸರಿಯಾಗಿ ಬರದಿದ್ದರು ಮೇಡಂ ಇಂಗ್ಲೀಷ್‍ನಲ್ಲಿ ಪಾಠ ಮಾಡಿದ್ದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.