ಬೆಳಗಾವಿ-ಜಿಲ್ಲೆಯ ರೈತರ ಹೆಮ್ಮೆಯಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ ಶತಮಾನೋತ್ಸವದ ಸಂಬ್ರಮದಲ್ಲಿದೆ ಶತಮಾನ ಕಂಡಿರುವ ಬ್ಯಾಂಕಿನ ಹಳೆಯ ಕಟ್ಟಡವನ್ನು ಡೆಮಾಲಿಶ್ ಮಾಡಿ ಹೊಸ ಕಟ್ಟಡ ನಿಮಾಣ ಮಾಡಲು ಬ್ಯಾಂಕಿನ ಆಡಳಿತ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ
ಇತ್ತಿಚಿಗೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಹಳೆಯ ಕಟ್ಟಡ ಡೆಮಾಲಿಶ್ ಮಾಡಿ ಇದೇ ಸ್ಥಳದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಏಳು ಅಂತಸ್ತಿನ ಆಕರ್ಷಕ ಕಟ್ಟಡ ಕಟ್ಟಲು ನಿರ್ಧರಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಬೆಳಗಾವಿ ಸುದ್ದಿ ಡಾಟ್ ಕಾಮ್‍ಗೆ ತಿಳಿಸಿದ್ದಾರೆ
ಶತಮಾನೋತ್ಸವದ ಅಂಗವಾಗಿ ಜಿಲ್ಲೆಯ 814 ಕೃಷಿ ಪತ್ತಿನ ಸಂಘಗಳಿಗೆ ಕಂಪ್ಯುಟರೀಕಣ ಮಾಡಿಕೊಳ್ಳಲು ತಲಾ ಒಂದು ಲಕ್ಷ ರೂಪಾಯಿ ನೀಡಲು ನೊರ್ಧರಿಸಲಾಗಿದೆ ಜೊತೆಗೆ ಜ5ಲ್ಲೆಯ ರೈತರಿಗೆ ಪೈಪ್ ಲೈನ್ ಮಾಡಿಕೊಳ್ಳಲು ಒಂದು ಎಕರೆಗೆ 40 ಸಾವಿರ ರೂಪಾಯಿಯಂತೆ 10 ಲಕ್ಷದವರೆಗೆ ಮೂರು ರೂಪಾಯಿ ಬಡ್ಡಿ ದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದೆ ಎಮದು ರಮೇಶ ಕತ್ತಿ ತಿಳಿಸಿದ್ದಾರೆ
ರಮೇಶ ಕತ್ತಿ ಬ್ಯಾಂಕಿನ ಅದ್ಯಕ್ಷರಾದಾಗಿನಿಂದ ಹತ್ತು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು ಡಿಸಿಸಿ ಬ್ಯಾಂಕನ್ನು ಹೈಟೆಕ್ ಮಾಡುತ್ತಿದ್ದಾರೆ
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …