ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಮುರುಗೋಡ ಶಾಖೆಯಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವ ದರೋಡೆ ನಡೆದಿದೆ.ನಾಲ್ಕು ಕೋಟಿ ಕ್ಯಾಶ್ ಬ್ಯಾಂಕಿನಲ್ಲಿ ಅಡವಿಟ್ಡ ಗೋಲ್ಡ್ ಸೇರಿದಂತೆ ಒಟ್ಟು ಆರು ಕೋಟಿಯಷ್ಟು ಲೂಟಿಯಾಗಿದ್ದು ದರೋಡೆಕೋರರು ಸಸಿಟಿವ್ಹಿ ಕ್ಯಾಮರಾದ ಡಿವ್ಹಿಆರ್ ಹೊತ್ಕೊಂಡು ಹೋಗಿದ್ದಾರೆ.ಕೀಲಿ ಮುರಿಯದೇ ನಕಲಿ ಕೀ ಬಳಿಸಿ,ವ್ಯೆವಸ್ಥಿತವಾಗಿ ದರೋಡೆ ಮಾಡಲಾಗಿದ್ದು ನಿನ್ನೆ ನಡೆದಿರುವ ಈ ಘಟನೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದರೋಡೆ- ಹಲವು ಅನುಮಾನಗಳಿಗೆ ಕಾರಣವಾದ ಪ್ರಕರಣ
ಬೆಳಗಾವಿ(ಮಾರ್ಚ್,6)- ಬೆಳಗಾವಿಯ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮಹತ್ವದ ಸಹಕಾರಿ ಬ್ಯಾಂಕ್ ಆಗಿದೆ. ಬಿಡಿಸಿಸಿ ಬ್ಯಾಂಕ್ ಎಂದ್ರೇ ಸಾಕು ಇಲ್ಲಿನ ರಾಜಕಾರಣಿಗಳ ಮೇಲಾಟ ಎಂದಿಗೂ ನೆನಪಿಗೆ ಬರುತ್ತದೆ. ಆದರೇ ಬಿಡಿಸಿಸಿ ಬ್ಯಾಂಕ್ ಒಂದು ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದರೋಡೆಯಾಗಿದೆ. ಅಪಾರ ಪ್ರಮಾಣದ ಹಣದ ಜೊತೆಗೆ ಬಂಗಾರದ ಆಭರಣ ಸಹ ಕಳ್ಳತವಾಗಿದೆ. ಈ ಪ್ರಕರಣ ಸದ್ಯ ಸಂಚಲನ ಮೂಡಿಸಿದ್ದು, ಪ್ರಕರಣ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದೆ. ನಿನ್ನೆ ತಡರಾತ್ರಿ ದರೋಡೆ ನಡೆದಿದ್ದು, ಇಂದು ಬೆಳಗ್ಗೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಅನುಮಾನಸ್ಪವಾಗಿದ್ದು, ಈಗಾಗಲೇ ಪೊಲೀಸರು ದೂರು ದಾಖಲಿಸಿಕೊಂಡು ಬೆನ್ನು ಹತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಸದವತ್ತಿ ತಾಲೂಕಿನ ಮುರುಗೋಡ ಗ್ರಾಮದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ನಡೆದ ದರೋಡೆಯಲ್ಲಿ ಬರೋಬ್ಬರಿ 4.37 ಕೋಟಿ ರೂಪಾಯಿ ಹಣ ಹಾಗೂ 1.65 ಕೋಟಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಬೆಳರಚ್ಚು ತಜ್ಞರು, ಶ್ವಾನ ದಳ ಹಾಗೂ ಮುರಗೋಡು ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್ ಶಾಖೆಯನ್ನು ಸಂಪೂರ್ಣವಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಯಾರೊಬ್ಬರನ್ನು ಸಹ ಒಳಗೆ ಪ್ರವೇಶ ನೀಡಿಲ್ಲ.
ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯ ಮ್ಯಾನೆಜರ್ ಪ್ರಮೋದ ಯಲಿಗಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬ್ಯಾಂಕ್ ನಲ್ಲಿ ಕಳೆದ ಒಂದು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೇ ಬ್ಯಾಂಕ್ ನಲ್ಲಿ ಮ್ಯಾನೆಜರ್, ಕ್ಯಾಶರ್ ಹಾಗೂ ಸಿಬ್ಬಂದಿ 6 ಜನ ಕೆಲಸ ನಿರ್ವಹಣೆ ಮಾಡುತ್ತಿದ್ದೇವೆ. ನಿನ್ನೆ ಬ್ಯಾಂಕ್ ನಲ್ಲಿ 4.41 ಕೋಟಿ ರೂಪಾಯಿ ಹಣ ನಗದು ಹಾಗೂ ಚಿನ್ನಾಭರಣ ಅಡಮಾನವಾಗಿ ಇಟ್ಟು ಸಾಲ ಕೊಟ್ಟಿದ್ದ 3.93 ಕೆಜಿ ಚಿನ್ನಾಭರಣ ಸಹ ಇತ್ತು. ಇಂದು ಬೆಳಗ್ಗೆ ಈ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಶೆಟರ್ ಕೀ ಹಾಗೂ ಸ್ಟ್ರಾಂಗ್ ರೂಂ ಕೀ ಎರಡು ಸೆಟ್ಟು ಇತ್ತು. ಸ್ಟ್ರಾಂಗ್ ರೂಂ ಒಡೆದಿಲ್ಲ, ಬದಲಾಗಿ ಕೀ ಬಳಸಿ ಓಪನ್ ಮಾಡಲಾಗಿದೆ. ಇನ್ನೂ ಸಿಸಿಟಿವಿ ಡಿವಿಆರ್ ಸಹ ಕಳ್ಳತನ ಮಾಡಲಾಗಿದೆ ಎಂದು ಮ್ಯಾನೆಜರ್ ಪ್ರಮೋದ ಯಲಿಗಾರ್ ದೂರು ನೀಡಿದ್ದಾರೆ.
ಈ ಕಳ್ಳತನ ಪ್ರಕರಣ ಹಿಂದೆ ಹಲವು ಅನುಮಾನಗಳು ಸದ್ಯ ವ್ಯಕ್ತವಾಗಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಹಾಗೂ ಮುರಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಸಿಬ್ಬಂದಿಯನ್ನು ಕರೆದು ವಿಚಾರಣೆಯನ್ನು ಆರಂಭಿಸಿದ್ದಾರೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರಸವೆಯಲ್ಲಿ ಪೊಲೀಸರು ಇದ್ದಾರೆ. ಮರಗೋಡು ಚಿಕ್ಕ ಶಾಖೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.
—