ಬೆಳಗಾವಿ – ಧಾರವಾಡ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಯಾಗಿದ್ದ ನಾರಾಯಣ ಭರಮಣಿ ಅವರನ್ನು ಬೆಳಗಾವಿ ಮಹಾನಗರ ಡಿಸಿಪಿ (ಕಾನೂನು ಸೂವ್ಯವಸ್ಥೆ) ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು ಬೆಳಗಾವಿಗೆ ಸಿಂಗಮ್ ರಿಟರ್ನ್ ಆಗಿದ್ದಾರೆ.
ಬೆಳಗಾವಿಯಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಎಸಿಪಿಯಾಗಿ ಕಾರ್ಯನಿರ್ವಹಿಸಿ ಬೆಳಗಾವಿ ಸಿಂಗಮ್ ಎಂದೇ ಖ್ಯಾತನಾಮರಾಗಿದ್ದ ಭರಮಣಿ ಅವರನ್ನು ಸರ್ಕಾರ ಬೆಳಗಾವಿ ಡಿಸಿಪಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.