ಬೆಳಗಾವಿ- ಗಣೇಶ ಉತ್ಸವದ ಪೋಲೀಸ್ ಬಂದೋಬಸ್ತಿಯ ವಿಕ್ಷಣೆಗಾಗಿ,ಹಾಗೂ ಗಣೇಶ ಮಂಡಲಗಳ ಅಹವಾಲುಗಳನ್ನು ಆಲಿಸಲು ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಅವರು ನಗರದಲ್ಲಿ ಬುಲೆಟ್ ರೌಂಡ್ಸ್ ಹಾಕಿದ್ರು.
ಪ್ರಥಮವಾಗಿ ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ರೋಹನ್ ಜಗದೀಶ್,ಮಾಳಮಾರುತಿ ಸಿಪಿಐ ಕಾಲಿಮಿರ್ಚಿ,ಪಿ ಎಸ್ ಐ ಹೊನ್ನಪ್ಪ ತಳವಾರ,ಶ್ರೀಶೈಲ ಗುಳಗೇರಿ, ಹಾಗೂ ಮಾಳಮಾರುತಿ ಠಾಣೆಯ ಪೇದೆಗಳು ಠಾಣಾ ವ್ಯಾಪ್ತಿಯಲ್ಲಿ ಬೈಕ್ ರೌಂಡ್ಸ್ ಹಾಕುವ ಮೂಲಕ ಗಣೇಶ ದರ್ಶನದ ಜೊತೆಗೆ ಮಂಡಲಗಳ ಸದಸ್ಯರ ಜೊತೆ ಮಾತನಾಡಿ ಅವರ ಅಹವಾಲು ಆಲಿಸುವ ಮೂಲಕ ಎಲ್ಲರ ಗಮನ ಸೆಳೆದ್ರು
ಇಂದು ಸಂಜೆ ಬೆಳಗಾವಿಯ ಆಂಜನೇಯ ನಗರದ ಗಣೇಶ ಮಂಟಪಕಕ್ಕೆ ಬುಲೆಟ್ ಮೇಲೆ ಆಗಮಿಸಿದ ರೋಹನ್ ಜಗದೀಶ್ ಹಾಗೂ ಮಾಳಮಾರುತಿ ಠಾಣೆಯ ಪೋಲೀಸರನ್ನು ಆಂಜನೇಯ ನಗರದ ಗಣೇಶ ಮಂಡಲದವರು ಹಾಗೂ ಸ್ಥಳೀಯ ನಿವಾಸಿಗಳು ಪುಷ್ಪವೃಷ್ಠಿ ಮಾಡುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಡಿಸಿಪಿ ಅವರು ಗಣೇಶ ದರ್ಶನ ಮಾಡಿ,ಆರತಿಯಲ್ಲಿ ಪಾಲ್ಗೊಂಡು ಪುನೀತರಾದರು.ಗಣೇಶ ಮಂಡಲದವರು ಡಿಸಿಪಿ ರೋಹನ್ ಜಗದೀಶ್ ಅವರು ಸತ್ಕರಿಸಿದರು.
ರೋಹನ್ ಜಗದೀಶ್ ಅವರು ಪ್ರಥಮವಾಗಿ ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ ಬುಲೆಟ್ ರೌಂಡ್ಸ್ ಹಾಕಿದ್ದು ಇದೇ ಮಾದರಿಯಲ್ಲಿ ನಗರದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಡಿಸಿಪಿ ಸಿಟಿ ರೌಂಡ್ಸ್ ಹಾಕ್ತಾರೆ ಎಂದು ತಿಳಿದು ಬಂದಿದೆ.