ಬೆಳಗಾವಿ-ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ ಈ ಜಿಲ್ಲೆಯನ್ನು ಎರಡು ಶೈಕ್ಷಣಿಕ ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ,ಈ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಇಂದಿನಿಂದ SSLC ಪರೀಕ್ಷೆಗಳು ಅತ್ಯಂತ ವ್ಯವಸ್ಥಿತವಾಗಿ ಆರಂಭವಾಗಿವೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 124 ಪರೀಕ್ಷಾ ಕೇಂದ್ರಗಳಿವೆ,ಈ ಕೇಂದ್ರಗಳ ಮುಖ್ಯ ದ್ವಾರಗಳಲ್ಲಿ ಮಾರ್ಕಿಂಗ್ ಮಾಡುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್,ಸೈನಿಟೈಸಿಂಗ್,ಮಾಡಲಾಗುತ್ತಿದೆ.ಮಾಸ್ಕ್ ಕಡ್ಡಾಯ ಮಾಡಲಾಗಿದ್ದು ,ಮಾಸ್ಕ ಇಲ್ಲದ ವಿಧ್ಯಾರ್ಥಿಗಳಿಗೆ ಮಾಸ್ಕ ನೀಡಲಾಗುತ್ತಿದೆ.
9 ಬಸ್, 45 ಖಾಸಗಿ ವಾಹನಗಳನ್ನು ಶಿಕ್ಷಣ ಇಲಾಖೆ ಬುಕ್ ಮಾಡಿದೆ. ಕಂಟೈನಮೆಂಟ್ ಝೋನ್ ನಿಂದ ಬರೋ ಮಕ್ಕಳಿಗೆ ಪ್ರತ್ಯೇಕವಾಗಿ ವಾಹನದ ವ್ಯವಸ್ಥೆ ಮಾಡಿದೆ. ಕಂಟೈನ್ಮೆಂಟ್ ಝೋನ್ ನಿಂದ ಬರುವ ವಿಧ್ಯಾರ್ಥಿಗಳಿಗೆ ಎನ್ 95 ಮಾಸ್ಕ್ ಗಳನ್ನು ಶಿಕ್ಷಣ ಇಲಾಖೆ ನೀಡಿದೆ.
ಮೂರು ಜನ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳದಿದ್ದಾರೆ. ಕಿತ್ತೂರಿನ ಓರ್ವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೆ ಸೋಂಕು ತಗಲಿದೆ
ಕ್ವಾರಂಟೈನ್ ಸೆಂಟರ್ ನಲ್ಲಿ ಇರೋ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿ ಸಿಕ್ಕಿಲ್ಲ ಆದರೆ, ಈ ಮೂವರು ವಿಧ್ಯಾರ್ಥಿಗಳಿಗೆ ಮುಂದಿನ ತಿಂಗಳು ನಡೆಯುವ ಪೂರಕ ಪರೀಕ್ಷೆಯಲ್ಲಿ ವಿಶೇಷ ಅವಕಾಶ ಸಿಗಲಿದೆ.ಎಂದು ಡಿಡಿಪಿಐ ಪುಂಡಲೀಕ ತಿಳಿಸಿದ್ದಾರೆ.
ಕೊರೊನಾ ಭೀತಿ ನಡೆವೆಯೇ ಬೆಳಗಾವಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳು ಯಾವುದೇ ತೊಂದರೆ,ಆತಂಕವಿಲ್ಲದೇ ಆರೋಗ್ಯಕರ ವಾತಾವರಣದಲ್ಲಿ ಎಕ್ಸಾಂ ಬರೆಯುತ್ತಿದ್ದಾರ
ಹೊರ ರಾಜ್ಯದ 49, ಹೊರ ಜಿಲ್ಲೆಯ 735 ವಿದ್ಯಾರ್ಥಿಗಳು ಸೇರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ 74,424 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 33,590, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 40,834 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 271 ಪರೀಕ್ಷಾ ಕೇಂದ್ರಗಳಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 124, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 147 ಕೇಂದ್ರಗಳನ್ನು ತೆರೆಯಲಾಗಿದೆ. ತುರ್ತು ಪರಿಸ್ಥಿತಿ ಅನುಕೂಲಕ್ಕಾಗಿ 33 ಹೆಚ್ಚುವರಿ ಪರೀಕ್ಷಾ ಕೇಂದ್ರಗಳ ಸ್ಥಾಪಿಸಲಾಗಿದೆ.
ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳಿಗೆ 1,56,541 ಮಾಸ್ಕ್, 955 ಥರ್ಮಲ್ ಸ್ಕ್ಯಾನರ್‌ಗಳ, 1136 ಲೀಟರ್ ಸ್ಯಾನಿಟೈಸರ್ ವಿತರಿಸಲಾಗಿದೆ.
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿಕೊಟ್ಟಿದೆ.
ಪರೀಕ್ಷೆ ಬರೆಯಲು ಕಾಲ್ನಡಿಗೆ ಮೂಲಕ 20,441 ವಿದ್ಯಾರ್ಥಿಗಳು, ಸೈಕಲ್‌ಗಳಲ್ಲಿ 831 ವಿದ್ಯಾರ್ಥಿಗಳು, ಸ್ವಂತ ವಾಹನಗಳಲ್ಲಿ 39,490, ಶಾಲಾ ವಾಹನಗಳಲ್ಲಿ 1466, ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ 12,043 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದಾರೆ.
ಹೊರ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 735 ಹಾಗೂ ಬೇರೆ ಜಿಲ್ಲೆಗಳಲ್ಲಿ ಬೆಳಗಾವಿಯ 976 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮಹಾರಾಷ್ಟ್ರದ 49 ವಿದ್ಯಾರ್ಥಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದು,ಅವರಿಗೆ ವಿಶೇಷ ಪಾಸ್ ನೀಡಲಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಪ್ಪಂದದ ಮೇರೆಗೆ 188 ಕೆಎಸ್‌ಆರ್‌ಟಿಸಿ ಬಸ್, 132 ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ 271 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 4029 ಪರೀಕ್ಷಾ ಕೊಠಡಿಗಳ ಸ್ಥಾಪಿಸಲಾಗಿದೆ. 247 ಮುಖ್ಯ ಅಧೀಕ್ಷಕರು, 69 ಉಪ ಮುಖ್ಯ ಅಧೀಕ್ಷಕರು, 5256 ಕೊಠಡಿ ಮೇಲ್ವಿಚಾರಕರು, 94 ಮಾರ್ಗಾಧಿಕಾರಿಗಳು, 273 ಸ್ಥಾನಿಕ ಜಾಗೃತ ದಳ – 131 ಜಿಲ್ಲಾ ಮಟ್ಟದ ವೀಕ್ಷಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರಗಳು ಕ್ವಾರಂಟೈನ್ ಸೆಂಟರ್‌ಗಳಲ್ಲಿ ಇಲ್ಲ ಎಂದು ಬೆಳಗಾವಿ ಡಿಡಿಪಿಐ ಪುಂಡಲೀಕ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸ್ಥಾಪಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ,ಗದ್ದಲ, ಗೊಂದಲವಿಲ್ಲದೇ ವಿಧ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆಯುತ್ತಿದ್ದಾರೆ.ಇಂದು ಪರೀಕ್ಷೆ ಎಷ್ಟು ಜನ ವಿಧ್ಯಾರ್ಥಿಗಳು ಗೈರಾಗಿದ್ದರು ಎನ್ನುವ ಅಂಕಿ ಅಂಶಗಳು ಸಂಜೆ ಗೊತ್ತಾಗಲಿವೆ.