ಬೆಳಗಾವಿ – SSLC ಪರೀಕ್ಷೆ ಕೊನೆಯ ಕ್ಷಣದಲ್ಲಿ ರದ್ದಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಬೆಳಗಾವಿಯ SSLC ವಿದ್ಯಾರ್ಥಿನಿಯೊಬ್ಬಳು ನಿನ್ನೆ ತಡರಾತ್ರಿ ಪರೀಕ್ಷೆ ನಡೆಯೋದು ಖಾತ್ರಿಯಾದ ಬಳಿಕ,ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ನಗರದ ವಡಗಾವಿ ಪ್ರದೇಶದ,ಕಲ್ಮೇಶ್ವರ ರಸ್ತೆಯ ನಿವಾಸಿ,ಸುಜಾತಾ ಸುಭಾಷ್ ಢಗೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ
ನಿನ್ನೆ ತಡರಾತ್ರಿಯವರೆಗೂ ಪರೀಕ್ಷೆ ರದ್ದಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಸುಜಾತಾ ಪರೀಕ್ಷೆ ನಡೆಯುತ್ತವೆ ಎಂದು ಖಾತ್ರಿಯಾದ ಬಳಿಕ ನಿನ್ನೆ ರಾತ್ರಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಹಾಪೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.