ಬೆಳಗಾವಿ- ಬೆಳಗಾವಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಯೂಸೂಫ್ ಕಚ್ಛಿ ನೇಮಕವಾಗುವದು ಬಹುತೇಕ ಖಚಿತವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಖಚಿತಪಡಿಸಿವೆ
ಶಾಸಕ ಫಿರೋಜ್ ಸೇಠ ಅವರ ಆಪ್ತ ಬೆಂಬಲಿಗರಾಗಿರುವ ಯೂಸೂಫ್ ಕಚ್ಛಿ ಅವರು ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ ಶಾಸಕ ಫಿರೋಜ್ ಸೇಠ ಅವರು ಬುಡಾ ಅಧ್ಯಕ್ಷರನ್ನಾಗಿ ಯೂಸುಫ್ ಕಚ್ಛಿ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವ ಹಿನ್ನಲೆಯಲ್ಲಿ ಅವರ ನೇಮಕ ಖಚಿತವೆಂದು ಹೇಳಲಾಗುತ್ತಿದೆ
ಬುಧವಾರ ನಿಗಮ ಮಂಡಳಿಗಳ ನೇಮಕ ಪಟ್ಟಿ ಹೊರಬರುವ ಸಾಧ್ಯತೆ ಇತ್ತು ಆದರೆ ಅಕ್ಟೋಬರ್ 28 ರಂದು ಸರ್ಕಾರ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು ಅಂದು ಬುಡಾ ಅಧ್ಯಕ್ಷರ ನೇಮಕದ ಆದೇಶ ಹೊರಬೀಳುವ ಸಾಧ್ಯತೆ ಇದೆ
ಯೂಸೂಫ್ ಕಚ್ಚಿ ಉದ್ಯಮಿಯಾಗಿದ್ದು ಶಾಸಕ ಫಿರೋಜ್ ಸೇಠ ಅವರ ಜತೆ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ