Breaking News

ಬೆಳಗಾವಿ ಜಿಲ್ಲೆಯ 2016 ರ ಸಂಪೂರ್ಣ ಚಿತ್ರಣ..

 

ಜನವರಿ ತಿಂಗಳ ಪ್ರಮುಖ ಘಟನೆಗಳು
ಜನವರಿ 4

ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಇಂದು ಸಿಎಂ ಹಾಗೂ ಸಂಪುಟ ದರ್ಜೆ ಸಚಿವರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇಸಿದರು. ಬೆಳಗಾವಿ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಏತ ನೀರಾವರಿ ಯೋಜನೆ, ರಾಮದುರ್ಗಕ್ಕೆ ಕುಡಿಯವ ನೀರಿನ ಯೋಜನೆ, ವಸತಿ ಶಾಲೆಗಳು, ರಾಮದುರ್ಗ ಪಟ್ಟಣದ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡಿದರು. ವೀರಭದ್ರೇಶ್ವರ ಏತನೀರಾವರಿ ಯೋಜನೆಯಿಂದ ರಾಮದುರ್ಗ ತಾಲೂಕಿ 32 ಹಳ್ಳಿಗಳ ರೈತರಿಗೆ ಅನುಕುಲವಾಗಲಿದೆ. ರಾಮದುರ್ಗ ತಾಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಜನವರಿ 16
ಕುಂದಾ
ನಗರಿ ಬೆಳಗಾವಿಯಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭಗೊಂಡಿದೆ. ನಗರದ ನಾನಾವಾಡಿ ಅಂಗಡಿ ಕಾಲೇಜು ಮೈದಾನದಲ್ಲಿ ಉತ್ಸವಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದ್ರು. ಮಾಜಿ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ 6ನೇ ಗಾಳಿಪಟ ಉತ್ಸವ ಇದಾಗಿದೆ. ಇನ್ನೂ ಉತ್ಸವದಲ್ಲಿ ಬಣ್ಣ ಬಣ್ಣದ ವಿಭಿನ್ನ ಗಾಳಿಪಟವನ್ನು ಬಾನಂಗಳದಲ್ಲಿ ಹಾರಿ ಬಿಡಲಾಯಿತು. ಉತ್ಸವದಲ್ಲಿ ಆಸ್ಟ್ರೇಲಿಯಾ, ಯುಎಸ್ಎ, ರಶಿಯಾ, ಫ್ರಾನ್ಸ್ ಸೇರಿ ವಿವಿಧ ದೇಶಗಳ 20 ಜನ ಸರ್ಧಿಗಳು ಪಾಲ್ಗೊಂಡಿದ್ದರು.

ಜನವರಿ 26
ಬೆಳಗಾವಿ ಹಿಂಡಲಗಾ ಕಾರಾಗೃಹದಿಂದ 114 ಕೈದಿಗಳನ್ನು ಬಿಡುಗಡೆ ಗೊಳಿಸಲಾಯಿತು. ಕಾರಾಗೃಹದ ಒಳಗೆ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸನ್ನಢತೆ ಆಧಾರ ಮೇಲೆ ಬಿಡುಗಡೆಗೊಂಡ ಕೈದಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. 114 ಕೈದಿಗಳ ಪೈಕಿ 5 ಜನ ಮಹಿಳೆಯರು ಸೇರಿದ್ದಾರೆ. ಇನ್ನೂ ಹಿಂಡಲಗಾ ಜೈಲಿನಲ್ಲಿ ಒಟ್ಟು 127 ಜನರಿಗೆ ಬಿಡಗಡೆ ಭಾಗ್ಯ ಸಿಗಬೇಕಿತ್ತು. ಆದರೇ ಸರ್ಕಾರ ಕೇವಲ 114 ಕೈದಿಗಳ ಬಿಡುಗಡೆ ಮಾತ್ರ ಅವಕಾಶ ನೀಡಿದೆ.

ಜನವರಿ 26
ಕುಂದಾ ನಗರಿ ಬೆಳಗಾವಿಯಲ್ಲಿ ನಡೆದ ಐಕ್ಯಮತ ಕಾರ್ಯಕ್ರಮ ಏಕಕಾದಲ್ಲಿ 6 ವಿಶ್ವದಾಖಲೆಯನ್ನು ಚಿದ್ರಗೊಳಿಸಿದೆ. ನಗರದ ಮರಾಠ ಮಂಡಳ ಶಿಕ್ಷಣ ಸಂಸ್ಥೆ ಈ ಕಾರ್ಯಕ್ರಮವನ್ನು ಹಾಲಬಾವಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿತ್ತು. ಕಾಲೇಜಿನ 15,800 ವಿದ್ಯಾರ್ಥಿಗಳು ಏಕಸ್ವರದಲ್ಲಿ 5 ದೇಶಭಕ್ತಿ ಗೀತೆಗಳನ್ನು ಹಾಡಿದರು. ಇದು ಒಂದು ದಿನ ಹಿಂದೆ ಮಹರಾಷ್ಟ್ರದ ನಾಸಿಕ್ ನಲ್ಲಿ ನಡೆದ ದಾಖಲೆಯನ್ನು ಮುರಿಯಿತು. ನಾಸಿಕ್ ನಲ್ಲಿ 11 ಸಾವಿರ ವಿದ್ಯಾರ್ಥಿಗಳು ಸಾಮೂಹಕವಾಗಿ ಗಾಯನ ಕಾರ್ಯಕ್ರಮ ನಡೆಸಿದ್ದರು. ಈ ದಾಖಲೆ ನಂತರ ಕೇವಲ ಒಂದು ದಿನದಲ್ಲಿ ಬೆಳಗಾವಿಯಲ್ಲಿ ಐತಿಹಾಸ ದಾಖಲೆ ನಿರ್ಮಿಸಲಾಗಿದೆ.

ಜನವರಿ 27
ರಾಮದುರ್ಗದಲ್ಲಿ ಪಿಎಸ್ಐ ಮನೆಯಲ್ಲಿ ಕಳ್ಳತನ ನಡೆದಿದೆ. ಇದು ಠಾಣೆ ಪಕ್ಕದ ಸರ್ಕಾರಿ ಬಂಗಲೆಯಲ್ಲಿ ಕೃತ್ಯ ನಡೆದಿದೆ. ಬಸವರಾಜ್ ಕೊಳ್ಳಿ ಎಂಬುರವ ಮನೆಯಲ್ಲಿ ಘಟನೆ ನಡೆದಿದ್ದು. ಪಿಎಸ್ಐಗೆ ಸೇರಿದ ಸರ್ವೀಸ್ ರಿವಾಲ್ವಾರ್, 50 ಗ್ರಾಂ ಚಿನ್ನ ಹಾಗೂ 40 ಸಾವಿರ ನಗದು ಹಣವನ್ನು ದೋಚಲಾಗಿದೆ. ಸರ್ವೀಸ್ ರಿವಾಲ್ವರ್ ನಲ್ಲಿ 5 ಜೀವಂತ ಗುಂಡು ಇದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಜನವರಿ 28
ಕೇಂದ್ರದ ಮಹತ್ವಾಕಾಂಶೆಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕುಂದಾ ನಗರಿ ಬೆಳಗಾವಿ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಎರಡು ನಗರಗಳು ಈ ಯೋಜನೆ ಮೊದಲ ಹಂತದಲ್ಲಿ ಆಯ್ಕೆಯಾಗಿವೆ. ಕೇಂದ್ರಸರ್ಕಾರದ ಪಟ್ಟಿ ಹೊರ ಬಿಳುತ್ತಿದ್ದಂತೆ ನಗರದಲ್ಲಿ ಸಂಭ್ರಮ ಮನೆ ಮಾಡಿದೆ. ಪಾಲಿಕೆ ಮೇಯರ್ ಕಿರಣ್ ಸಾಯನಾಕ್ ಸೇರಿ ಅಧಿಕಾರಿಗಳು ಪಾಲಿಕೆ ಮುಂದೆ ಹಾಗೂ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಫೆಬ್ರವರಿ ತಿಂಗಳ ಪ್ರಮುಖ ಘಟನೆಗಳು
ಫೆಬ್ರವರಿ 5
ವಿವಾದಿತ ಮರಾಠಿ ಟೈಗರ್ ಚಿತ್ರದ ಬಿಡಗಡೆ ವಿಚಾರ ಮುಂದಿಟ್ಟುಕೊಂಟು ಗಡಿ ಭಾಗದಲ್ಲಿ ಶಿವಸೇನೆ ಮತ್ತು ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶಿಸಿದೆ. ಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಯಾವುದೇ ಚಿತ್ರ ಮಂದರಿಗಳು ಒಪ್ಪದ ಹಿನ್ನೆಲೆಯಲ್ಲಿ ಗಡಿ ಭಾಗದ ಶಿನ್ನೋಳ್ಳಿ ಗ್ರಾಮದಲ್ಲಿ ಟೆಂಟ್ ನಿರ್ಮಿಸಿ ಚಿತ್ರ ಪದರ್ಶಿಸಲಾಗಿದೆ. ಇನ್ನೂ ಚಿತ್ರ ತಂಡದ ಸದಸ್ಯರು ಶಿನ್ನೋಳಿ ಗ್ರಾಮಕ್ಕೆ ಭೇಟಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದೆ.

ಫೆಬ್ರವರಿ 12
ಜಿಲ್ಲೆಯ 90 ಕ್ಷೇತ್ರಗಳ ಪೈಕಿ 88 ಕ್ಷೇತ್ರಗಳಿಗೆ ಹಾಗೂ ತಾಲೂಕು ಪಂಚಾಯತನ 345 ಕ್ಷೇತ್ರಗಳ ಪೈಕಿ 335 ಕ್ಷೇತ್ರಗಳಿಗೆ ಮತದಾನ.

ಫೆಬ್ರವರಿ 16
ನಗರದ ಶಿವಾಜಿ ಗಾರ್ಡನ್ ಬಳಿಯ ಕಪಿಲೇಶ್ವರ ಕಾಲೋನಿಯಲ್ಲಿ ಮದ್ಯಾಹ್ನನ ಟಂಟಂ ವಾಹನದಲ್ಲಿ ಕೆಮಿಕಲ್ ಕೊಂಡ್ಯೊಯುತ್ತಿದ್ದ ವೇಳೆಯಲ್ಲಿ ಘಟನೆ ಸಂಭವಿಸಿದೆ. ಈ ಕೆಮಿಕಲ್ ಕ್ಲೋರಿನ್ ಗ್ಯಾಸ್ ಇರಬಹುದು ಎಂದು ಶಂಕಿಸಲಾಗಿದೆ. ಸ್ಪೋಟದ ರಭಸಕ್ಕೆ ಟಂಟಂ ವಾಹನ, ಮೂರು ಬೈಕ್ ಹಾಗೂ ಒಂದು ಕಾರ್ ಸುಟ್ಟು ಭಸ್ಮವಾಗಿದೆ. ಇನ್ನೂ ಆರ್.ಬಿ. ಪಾಟೀಲ್ ಇನ್ನೊಬ್ಬರು ಆಸ್ಪತ್ರೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಸ್ಪೋಟದ ತೀವ್ರತೆಯಿಂದ ಬಡಾವಣೆಯ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಹೊಗೆ ಆವರಿಸಿತ್ತು. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆಬ್ರವರಿ 20
ಬೆಳಗಾವಿ ನಗರದ ಕಾಂಗ್ರೆಸ್ ರಸ್ತೆಯಲ್ಲಿ ಟ್ಯಾಂಕರ್ ಹರಿದು ಸಹೋದರಿಯರು ಮೃತಪಟ್ಟ ದಾರುಣ ಘಟನೆ ಸಂಜೆ ನಡೆದಿದೆ. ಪ್ರತಿಕ್ಷಾ ಪುರೋಹಿತ್ (12), ಆಕಾಂಕ್ಷಾ ಪುರೋಹಿತ್ (10) ಮೃತ ಸಹೋದರಿಯರು. ಶಾಲೆ ಮುಗಿಸಿ ಟ್ಯೂಶನಗಾಗಿ ಹೋಂಡಾ ಆ್ಯಕ್ಟಿವಾ ಬೈಕ್ ನಲ್ಲಿ ಇಬ್ಬರು ಮನೆಯಿಂದ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಫೆಬ್ರವರಿ 23
ಬೆಳಗಾವಿ ಜಿಲ್ಲಾ ಪಂಚಾಯತ್ ಹಾಗೂ 10 ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟ. ರಾಜ್ಯದ ಅತಿದೊಡ್ಡ ಜಿಲ್ಲಾ ಪಂಚಾಯತ್ ಬೆಳಗಾವಿಯು ಈ ಭಾರೀ ಅತಂತ್ರವಾಗಿದೆ. ಜಿಪಂ 90 ಕ್ಷೇತ್ರಗಳ ಪೈಕಿ 88 ಕ್ಷೇತ್ರಗಳಿಗೆ ಫೆ.13ಕ್ಕೆ ಚುನಾವಣೆ ನಡೆದಿತ್ತು. ಇಂದು ಈ ಕ್ಷೇತ್ರಗಳ ಮತ ಎಣಿಕೆ ನಗರದ ಜ್ಯೋತಿ ಕಾಲೇಜಿನಲ್ಲಿ ನಡೆಯಿತು. ಕಾಂಗ್ರೆಸ್ – 4
ಮೇ 24
ತೀವ್ರ ಕುತೂಹಲ ಕರೆಳಿಸಿದ್ದ ಬೆಳಗಾವಿ ತಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಇಂದು ನಡೆಯಿತು. ತಾಪಂನಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಅಧಿಕಾರಿ ಹಿಡಿಯುವ ಮೂಲಕ ಇತಿಹಾಸ ಸೃಷ್ಠಿಸಿದೆ. ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಮಾರುತಿ ಸನದಿ ಆಯ್ಕೆಯಾದರು. ಬೆಳಗಾವಿ ತಾಪಂ ಒಟ್ಟು 45 ಸದಸ್ಯರ ಬಲ ಹೊಂದಿದೆ. ಈ ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್ – 22, ಬಿಜೆಪಿ- 9 ಹಾಗೂ ಎಂಇಎಸ್ -14 ಸ್ಥಾನಗಳನ್ನು ಗೆದ್ದಿದೆ.

ಮೇ 31
ಬೆಳಗಾವಿಯಲ್ಲಿ ಉದ್ಯಮಿಯೊಬ್ಬರನ್ನು ಕಣ್ಣಿಗೆ ಕಾರದ ಪುಡಿ ಎರಚಿ ಹತ್ಯೆ ಮಾಡಲಾಗಿದೆ. ನಗರದ ಸದಾಶಿವ ನಗರದಲ್ಲಿ ಜನಾರ್ಧನ ಭಟ್ (54) ಹತ್ಯೆಯಾದ ಉದ್ಯಮಿ. ಜನಾರ್ಧನ ಭಟ್ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿದೆ. ಭಟ ಸಿಸಿಟಿವಿ ಸಪ್ಲೆ ಮಾಡುತ್ತಿದ್ದರು.
2016ರ ಜುನ್ ತಿಂಗಳ ಹೈಲೈಟ್ಸ್ …

ಜುನ್ 01
ಸಚಿವ ಸಂಪುಟದಿಂದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕೈ ಬಿಡಲಾಗಿದೆ. ಈ ಬಗ್ಗೆ ಪ್ರಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ, ಪಕ್ಷದ ಹಿತದೃಷ್ಠಿಯಿಂದ ಸಿಎಂ ನಿರ್ಧಾರ ಕೈಗೊಂಡಿದ್ದಾರೆ. ಸಿಎಂ ನಿರ್ಧಾರಕ್ಕೆ ಬದ್ಧ ಎಂದರು. ನಾನು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಅಧಿಕಾರ ಇರಲಿ, ಬಿಡಲಿ ಸಮಾಜ ಸೇವೆ ಮಾಡುತ್ತೇನೆ. ಈ ಹಿಂದೆ ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಗೆಲುವಿಗೆ ಶ್ರಮಿಸಿದ್ದು ನಿಜ. ಆದರೇ ಅದಕ್ಕೂ ಈಗಿನ ರಾಜೀನಾಮೆ ಸಂಬಂಧವಿಲ್ಲ. ಸತೀಶ್ ಜಾರಕಿಹೊಳಿ ಕೈ ಬಿಟ್ಟು ಸಹೋದರ ರಮೇಶ್ ಜಾರಕಿಹೊಳಿಗೆ ಸಚಿವ ಸಂಪುಟದಲ್ಲಿ ಸ್ಥಾನ.

ಜುನ್ 23
ಬೆಳಗಾವಿಯಲ್ಲಿ ಇಂದು ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದ್ರು. ನಗರದ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರಾಗಿ ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ್, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಾಜಿ ಸಚಿವ ಶಶಿಕಾಂತ್ ನಾಯಿಕ್ ಹಾಗೂ ಬೆಳಗಾವಿ ನಗರದ ಅಧ್ಯಕ್ಷರಾಗಿ ಅನಿಲ್ ಬೆನಕೆ ಅಧಿಕಾರ ಸ್ವೀಕರಿಸಿದ್ರು. ಈ ವೇಳೆ ಜಿಲ್ಲೆ ಶಾಸಕರು, ಮಾಜಿ ಸಚಿವರು ಹಾಗೂ ಸಂಸದರು ಪಾಲ್ಗೊಂಡಿದ್ದರು

 ಜುಲೈ ತಿಂಗಳ ಪ್ರಮುಖ ಘಟನೆಗಳು

ಜುಲೈ 5
ಹಣಕ್ಕಾಗಿ ವ್ಯಕ್ತಿ ಅಪಹರಣ ಆರೋಪಕ್ಕೆ ಸಿಲುಕಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರುಗೋಡ ಗ್ರಾಮದ ಪತ್ನಿಯ ನಿವಾಸದಲ್ಲಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಅಪಹರಣ ಪ್ರಕರಣ ಬಯಲಾದ ನಂತರ ಕಲ್ಲಪ್ಪ ನಾಪತ್ತೆಯಾಗಿದ್ದರು. ಏಕಾಏಕಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ ಕಲ್ಲಪ್ಪರನ್ನು ಅವರ ಪತ್ನಿ ವಿದ್ಯಾ ಹಾಗೂ ಮಾವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ರು.

ಜುಲೈ 6
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕಾಗಿದೆ. ಪ್ರಕರಣದ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಇಂದು ಬೆಳಗಾವಿಯ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮಕ್ಕೆ ಭೇಟಿ ನೀಡಿದ್ರು. ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡ ಮನೆ, ಮುರುಗೋಡ ಪೊಲೀಸ್ ಠಾಣೆಗೆ ಸಿಐಡಿ ಡಿಐಜಿ ಸೋನಿಯಾ ನಾರಂಗ್, ಎಸ್ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಜುಲೈ 9
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಸರ್ಕಾರ ವಿರುದ್ಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯ ಸವದತ್ತಿ ತಾಲೂಕಿನ ಮುರುಗೋಡ ಗ್ರಾಮಕ್ಕೆ ಭೇಟಿ ನೀಡಿದ ಎಚ್ ಡಿಕೆ ಇಂದು ಭೇಟಿ ನೀಡಿದ್ರು. ಕಲ್ಲಪ್ಪ ಪತ್ನಿ ವಿದ್ಯಾ ಹಾಗೂ ಕುಟುಂಬಸ್ಥರ ಜತೆಗೆ ಮಾತುಕತೆ ನಡೆಸಿ ಸಾಂತ್ವಾನ ಹೇಳಿದ್ರು.

ಜುಲೈ 11
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನೂರು ವರ್ಷಗಳ ಹಳೆಯದಾದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಕುಸಿದು ಬಿದ್ದಿದೆ. ಬೆಳಗ್ಗೆ 10.30ಕ್ಕೆ ಮಕ್ಕಳು ಪ್ರಾರ್ಥನೆ ಮುಗಿಸಿ ಶಾಲೆಯ ಕೋಣೆಯಲ್ಲಿ ತಮ್ಮ ಪಾಡಿಗೆ ಪಾಠ ಪ್ರವಚದಲ್ಲಿ ತೊಡಗಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಸೋರುತ್ತಿದ್ದ ಕೋಣೆಯ ಗೋಡೆ ದೀಡೀಡ ಎಂದು ಕುಸಿದು ಬಿದ್ದಿದೆ. ಕಲ್ಲಿನ ನೋಡೆಯ ಕೆಳಗೆ ಸಿಕ್ಕು ಇಬ್ಬರು ವಿದ್ಯಾರ್ಥಿನಿಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಬಾಲಕಿರನ್ನು 5ನೇ ತರಗತಿಯ ಲಗಮವ್ವ ಕಟ್ಟಿಮನಿ, ಶೈಲಾ ಕೋಳಿ ಎಂದು ಗುರುತಿಸಲಾಗಿದೆ.

ಜುಲೈ 16
ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ ಬೆಳಗಾವಿ ಬಂದ್ ಕರೆ
ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕಳಸಾ ಬಂಡೂರಿ ಹೋರಾಟ ಮತ್ತೆ ಆರಂಭವಾಗಿದೆ. ಕಳಸಾ ಬಂಡೂರಿ ಯೋಜನೆ ಜಾರಿಯಾದ್ರೆ ನಾಲ್ಕು ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ 40 ವರ್ಷಗಳಿಂದ ಯೋಜನೆ ಜಾರಿಗೆ ಒತ್ತಾಯ ಕೇಳಿ ಬಂದಿದೆ. ಒಂದು ವರ್ಷದಿಂದ ಯೋಜನೆ ಜಾರಿಗೆ ಆಗ್ರಹಿಸಿ ನಿರಂತರ ಧರಣಿ ನಡೆಯುತ್ತಿದೆ. ಆದರೇ ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಈ ಬಗ್ಗೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆ ಬಂದ್ ಹಾಗೂ ಕರಾಳ ದಿನ ಆಚರಣೆ ರೈತ ಸೇನೆ ಕರ್ನಾಟಕ ಕರೆ ನೀಡಿತ್ತು. ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗೀತಗೊಂಡಿತ್ತು. ಇನ್ನೂ ರೈತರು ಬಸ್ ನಿಲ್ದಾಣದಲ್ಲಿ ಬಂದ್ ಸಹಕರಿಸುವಂತೆ ಮನವಿ ಮಾಡಿದ್ರು. ನಂತರ ನಗರದ ಚನ್ಮಮ್ಮ ವೃತ್ತದಲ್ಲಿ ಟೈಯರಗೆ ಬೆಂಕಿ ಹಚ್ಚಿ ರೈತರು ಪ್ರತಿಭಟನೆ ನಡೆಸಿದ್ರು. ಈ ವೇಳೆ ರೈತರು ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು.

ಜುಲೈ 16
ಪಿಎಸ್ಐಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳ್ಕರ್ ಅವಾಜ್..
ಮರಳು ಲಾರಿ ಹೇಗೆ ಹಿಡಿದಿದ್ದೀರಿ… ನಿಮ್ಮಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ… ಎಲ್ಲಿದ್ದೀರಿ ಮನೆಗೆ ಬನ್ನಿ. ಇದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎಸ್ಐ ಉದ್ದಪ್ಪ ಕಟ್ಟಿಕರಗೆ ಹಾಕಿದ ಅವಾಜ್. ಜೂನ್ 30ರಂದು ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರ ವರೆಗ ಮಾತ್ರ ಮರಳು ಸಾಗಾಣಿಕೆಗೆ ಅವಕಾಶ ನೀಡಬೇಕು ಎಂದು ಆದೇಶ ನೀಡಿದ್ದರು. ಇದರಂತೆ ಬೆಳಗಾವಿಯ ಸಿಸಿಐಬಿ ಪಿಎಸ್ಐ ಉದ್ದಪ್ಪ ಕಟ್ಟಿಕರ ರಾತ್ರಿ ಕಾರ್ಯಾಚರಣೆ ನಡೆಸಿದಿ 22 ಮರಳು ಲಾರಿ ವಶಕ್ಕೆ ಪಡೆದಿದ್ರು. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಇನ್ನೂ ನಂತರ ಲಕ್ಷ್ಮೀ ಹೆಬ್ಬಾಳ್ಕರ್ ಪಿಎಸ್ಐಗೆ ಫೋನ್ ಮಾಡಿ ಆವಾಜ್ ಹಾಕಿದ್ದಾರೆ. ಮರಳು ಲಾರಿ ಬಿಡುವಂತೆ ಒತ್ತಡ ಹೇರಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಜತೆಗೆ ಮಾತನಾಡಿದ ಪಿಎಸ್ಐ ಕಾನೂನಿನಂತೆ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಜುಲೈ 25, 26, 27
ರಾಜ್ಯಾದ್ಯಂತ ಸಾರಿಗೆ ನೌಕರರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇಂದು ಬಸ್ ಸಂಚಾರ ಸಂಪೂರ್ಣವಾಗಿ ಸ್ಥಬ್ಧವಾಗಿದೆ. ಕಳೆದ ಮೂರು ದಿನಗಳಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಪ್ರಯಾಣಕರು ಖಾಸಗಿ ಬಸ್ ಹಾಗೂ ವಾಹನಗಳ ಮೊರೆ ಹೋಗಿದ್ದರು. ಇನ್ನೂ ಬಸ್ ಬಂದ್ ಎಫೆಕ್ಟ್ ಹೂ ಹಾಗೂ ಇತರ ವ್ಯಾಪಾರಿಗಳಿಗು ತಟ್ಟಿದೆ.

ಜುಲೈ 26
ಗಡಿ ಜಿಲ್ಲೆ ಬೆಳಗಾವಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಆರು ತಿಂಗಳಲ್ಲಿ 56 ಪ್ರಕರಣ ಭೇದಿಸಿ, 152 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 1.26 ಕೋಟಿ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಕಳವು ಮಾಲಗಳನ್ನು ವಾರಸುದಾರರಿಗೆ ವಾಪಸ್ ನೀಡಿದ್ರು.

ಜುಲೈ 28
ಗಡಿ ಜಿಲ್ಲೆಯಲ್ಲಿ ಬೆಳಗಾವಿಯಲ್ಲಿ ಕಳಸಾ ಕಳಹೆ ಮೊಳಗಿತು. ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಹಲವಾರು ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟಿಸಿದವು. ರೈತ ಸಂಘ ನೀಡಿದ ಬಂದ್ ಕರೆಗೆ ಯೋಜನೆಯ ವ್ಯಾಪ್ತಿಯ ತಾಲೂಕುಗಳಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಜುಲೈ 29
ಮಹಾದಾಯಿ ಜುಲೈ 29
ಮಹದಾಯಿ ನ್ಯಾಯಾಧಿಕರಣದಲ್ಲಿ ರಾಜ್ಯಕ್ಕೆ ಅನ್ಯಾಯ ಹಿನ್ನಲೆ. ಕನ್ನಡಪರ ಸಂಘಟನೆಗಳಿಂದ ಇಂದು ಕರ್ನಾಟಕ ಬಂದ್ ಕರೆ. ಬೆಳಗಾವಿಯ ಬೆಳ್ಗಗ್ಗೆಯೆ ಬಸ್ ಸಂಚಾರ ಸ್ಥಗೀತ‌. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕರ್ನಾಟಕ- ಗೋವಾ ಬಸ್ ಸಂಚಾರ ಸ್ಥಗೀತ. ಬೆಳಗಾವಿ ಜಿಲ್ಲೆಯಾದ್ಯಂತ ಇಂದು ಶಾಲಾ- ಕಾಲೇಜು ರಜೆ ಘೋಷಣೆ. ಬಂದ್ ಗೆ ನೂರಾರು ಸಂಘಟನೆಯಿಂದ ಬೆಂಬಲ. ಜಿಲ್ಲೆಯ ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗದಲ್ಲಿ ತೀವ್ರ ಪ್ರತಿಭಟನೆ. ಗೋವಾಕ್ಕೆ ಇಂದು ಹಾಲು, ತರಕಾರಿ ಸಾಗಾಟ ಸ್ಥಗೀತ‌. ಸಾಗಾಟ ಮಾಡದಿರಲು ಲಾರಿ ಚಾಲಕ ಸಂಘ ನಿರ್ಧಾರ.
ಆಗಷ್ಟ್ ತಿಂಗಳ ಪ್ರಮುಖ ಘಟನೆಗಳು
ಆಗಷ್ಟ್ 01
ಇತನ ಹೆಸರು ಸುಬೇದಾರ ಬಸಪ್ಪ ಪಾಟೀಲ್. ವಯಸ್ಸು 48 ಇತ ಮದರಾಸೆ ರೆಜಿಮೆಂಟ್ ನ 21ನೇ ಬಟಾಲಿಯನ್ ನಲ್ಲಿ ಸುಬೇದಾರನಾಗಿ ಕೆಲಸ ಮಾಡುತ್ತಿದ್ದ ವೀರ ಯೋಧ.ಕಳೆದ ಜುಲೈ 29ರಂದು ಸಂಜೆ ಎಂದಿನಂತೆ ಜಮ್ಮುಕಾಶ್ಮೀರದ ಎಲ್ ಓಸಿ ಕಾರ್ಗಿಲ್ ಪ್ರದೇಶದಲ್ಲಿ ಸುಭೇದಾರ ಬಸಪ್ಪ ಪಾಟೀಲ್ ನೇತೃತ್ವದಲ್ಲಿ ಯೋಧರು ಗಸ್ತು ತಿರುಗುತ್ತಿದ್ದರ. ಆ ಸಂದರ್ಭದಲ್ಲಿ ನೆಲದಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್ ಆಕಸ್ಮಿಕ ಸ್ಪೂಟಗೊಂಡಿದೆ.ಇದರಿಂದಾಗಿ ಬಸಪ್ಪ ಪಾಟೀಲ್ ವೀರಮರಣವನ್ನಪ್ಪಿದ್ದಾರೆ. ಇವರ ಜೊತೆಗೆ ಇತರೆ ಯೋಧರು ಸಹ ವೀರಮರಣವನ್ನಪ್ಪಿದ್ದಾರೆ.ನಿನ್ನೆ ವೀರಮರಣವನ್ನಪ್ಪಿದ ಈ ಬಸಪ್ಪ ಪಾಟೀಲ್ ಗೆ ಜಮ್ಮುಕಾಶ್ಮೀರದಲ್ಲಿ ವಿಶೇಷ ಗೌರವ ಸಲ್ಲಿಸಿ ಬೀಳ್ಕೊಡಲಾಯಿತು. ಇವತ್ತು ಗೋವಾದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನ ಮೂಲಕ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನ ಇವತ್ತು 11ಗಂಟೆಗೆ ಅಂಬ್ಯುಲೆನ್ಸ್ ಮೂಲಕ ನೇರವಾಗಿ ಯೋಧನ ಹುಟ್ಟೂರು ಗೋಕಾಕ ತಾಲೂಕಿನ ಕನಗಾಂವ್ ಗೆ ತರಲಾಯಿತು.

ಆಗಷ್ಟ್ 6,7
ಮಹಾರಾಷ್ಟ್ರದ ಪಶ್ಚಿಮ ಪರ್ತವ ಶ್ರೇಣಿಯಲ್ಲಿ ಮಹಾ ಮಳೆಯಾಗುತ್ತಿದೆ. ಇದರ ಎಫೆಕ್ಟ್ ಬೆಳಗಾವಿ ಜಿಲ್ಲೆಯ ಜನರಿಗೆ ತಟ್ಟಿದೆ. ಜಿಲ್ಲೆಯು ಕೃಷ್ಣ, ವೇದಗಂಗಾ, ಧೂದಗಂಗಾ, ಮಲಪ್ರಭ ಹಾಗೂ ಘಟಪ್ರಭ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣ, ವೇದಗಂಗಾ ಹಾಗೂ ಧೂದಗಂಗಾ ನದಿಗೆ 1.52 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ತಾಲೂಕಿನ 7 ಹಾಗೂ ರಾಯಭಾಗ ತಾಲೂಕಿನ 2 ಸೇತುವೆಗಳು ಮುಳುಗಡೆಯಾಗಿವೆ. ನದಿ ಪಾತ್ರದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಮುಳುಗಡೆಯಾಗಿದೆ. ಮೆಕ್ಕೆ ಜೋಳ, ಕಬ್ಬು ಬೆಳೆ ನಷ್ಟು ಸಂಭವಿಸಿದೆ. ಇನ್ನೂ ಪ್ರತಿ ವರ್ಷವೂ ಚಿಕ್ಕೋಡಿ ತಾಲೂಕಿನಲ್ಲಿ ಇದೇ ರೀತಿಯ ಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನಾದರೂ ಸರ್ಕಾರ ಈ ಭಾಗದ ಸೇತುವೆ ಮೆಲ್ದರ್ಜೆಗೆ ಏರಿಸಬೇಕು. ಜತೆಗೆ ನಷ್ಟಗೊಂಡ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆಗಷ್ಟ್ 15
ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಜೈಲು ಹಕ್ಕಿಗಳಿಗೆ ಇಂದು ಬಿಡುಗಡೆ ಭಾಗ್ಯ ದೊರತಿದೆ. ಜೈಲಿನ 35 ಕೈದಿಗಳು ಇಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾರೆ. 35 ಜನ ಕೈದಿಗಳ ಪೈಕಿ ಇಬ್ಬರು ಮಹಿಳೆಯರು ಸೇರಿಕೊಂಡಿದ್ದಾರೆ. ಸನ್ನಡತೆ ಆಧಾರ ಮೇಲೆ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳ ಸಲಹಾ ಸಮಿತಿ 43 ಜನರ ಹೆಸರನ್ನು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸತ್ತು. ಆದರೇ ರಾಜ್ಯ ಸರ್ಕಾರ ಮಾತ್ರ 35 ಜನ ಕೈದಿಗಳ ಬಿಡುಗಡೆಗೆ ಆದೇಶ ನೀಡಿದೆ.
ಸೆಪ್ಟೆಂಬರ್ ತಿಂಗಳ ಪ್ರಮುಖ ಘಟನೆಗಳು
ಸೆಪ್ಟೆಂಬರ್ 2
ಕಾರ್ಮಿಕ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದು ಭಾರತ ಬಂದ್ ಕರೆ ನೀಡಲಾಗಿತ್ತು. ಆದರೇ ಬಂದ್ ಬೆಳಗಾವಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್ಆರ್ಟಿಸಿ ಸಾರಿಗೆ ನೌಕರರ ಸಂಘಟನೆಗೆಳು ಬೆಂಬಲ ನೀಡಿದ್ದವು. ನಗರದಲ್ಲಿ ಹೊರ ಸಾರಿಗೆ ಹಾಗೂ ನಗರ ಸಾರಿಗೆಯಲ್ಲಿ ಯಾವುದೆ ವ್ಯತ್ಯಯ ಉಂಟಾಗಲಿಲ್ಲ. ಜತೆಗೆ ನಗರದಲ್ಲಿ ಎಲ್ಲಿಯೂ ಬಂದ್ ವಾತಾವಾರಣ ಕಾಣಲಿಲ್ಲ.

ಸೆಪ್ಟೆಂಬರ್ 9
ತಮಿಳು ನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಇವತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಇದ್ದು, ನೆರೆಯ ಗೋವಾ-ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಬೇಕಿದ್ದ ಬಸ್ ಗಳು ಹಾಗೂ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ತೆರಳಬೇಕಿದ್ದ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಇನ್ನೂ ಖಾಸಗಿ ಬಸ್ ಸಂಚಾರ, ಅಟೋ ಸಂಚಾರದಲ್ಲೂ ಸಹ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ಇನ್ನೂ ಜಿಲ್ಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ಸಹ ರಜೆಯನ್ನು ನೀಡಿಲ್ಲ.

ಸೆಪ್ಟೆಂಬರ್ 15
ಕುಂದಾ ನಗರಿ ಬೆಳಗಾವಿಯಲ್ಲಿ ವಿಜೃಂಭಣೆಯ ಗಣೇಶ ಉತ್ಸವ ಆರಂಭವಾಗಿದೆ. ಇಂದು ಭಕ್ತರು ಮಾರುಕಟ್ಟೆಯಿಂದ ವಿಘ್ನ ನಿವಾರಕನನ್ನು ಮನೆಗೆ ತೆಗೆದುಕೊಂಡು ಹೋದ್ರು. ನಗರದ ಮಾರುಕಟ್ಟೆಯಲ್ಲಿ ಸಿದ್ದಪಡಿಸಿದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ವಾದ್ಯ ಮೇಳದೊಂದಿಗೆ ಕೊಂಡೊಯುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ ನಗರದಲ್ಲಿ 300ಕ್ಕೂ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಈಡಲಾಗುತ್ತದೆ. ಶೃಂಗಾರ ಮಾಡಿದ ಮಂಟಪಗಳಲ್ಲಿ ಗಣೇಶ ವಿಗ್ರಹವಿಟ್ಟು 5,9 ಹಾಗೂ 11 ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ. ಬೆಳಗಾವಿ ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇಲ್ಲಿ ಸ್ವತಃ ಬಾಲಗಂಗಾಧರ ತಿಲಕರೇ ಗಣೇಶ ಮಂಡಳ ಸ್ಥಾಪಿಸಿದ್ದು ವಿಶೇಷವಾಗಿದೆ. ಇನ್ನೂ ಗಣೇಶ ಉತ್ಸವ ಹಿನ್ನೆಲೆಯಲ್ಲಿ ಪೊಲೀಸರು ಬೀಗಿ ಭದ್ರತೆ ಕೈಗೊಂಡಿದ್ದಾರೆ. ಡಿಸಿಪಿ ಅಮರನಾಥ ರೆಡ್ಡಿ ನೇತೃತವಲ್ಲಿ 1500 ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಸೂಕ್ಷ್ಮ ಸ್ಥಳಗಳ್ಲಿ ಸಿಸಿಟಿವಿ ಕಣ್ಣಗಾವಲು ಹಾಕಲಾಗಿದೆ.

ಸೆಪ್ಟೆಂಬರ್ 19
ಮೋಜು, ಮಸ್ತಿಯ ಹೆಸರಲ್ಲಿ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆ ಹೋಗುವವರೆ ಎಚ್ಚರ. ಸ್ನೇಹಿತರ ಗುಂಪೊಂದು ಫಾಲ್ಸ್ ನೋಡು ನೋಡು ಹೋಗಿ ಫಜೀತಿ ಅನುಭವಿಸಿದೆ. 24 ನಾಲ್ಕು ಗಂಟೆಗಳ ಕಾಲ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ಮೂರು ಜನ ಸ್ನೇಹಿತರನ್ನು ಅರಣ್ಯ ಇಲಾಖೆಯ ಸಿಬ್ಬಂಧಿ, ಹಾಗೂ ಪೊಲೀಸರು ಕೊನೆಗೂ ರಕ್ಷಣೆ ಮಾಡಿದ್ದಾರೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದ್ದು ಎಂತೀರಾ ಈ ಸ್ಟೋರಿ ನೋಡಿ…

ಸೆಪ್ಟೆಂಬರ್ 27

ಬೆಳಗಾವಿ ನಗರದಲ್ಲಿ ದುಷ್ಕರ್ಮಿಗಳು ಎರಡು ಮೊಬೈಲ್ ಅಂಗಡಿಗಳನ್ನು ದರೋಡೆ ಮಾಡಿದ್ದಾರೆ. ನಗರದ ನೆಹರು ನಗರದ ಐ ಸಿಟಿ, ಸ್ಯಾಮಸಂಗ್ ಸ್ಟೈಲಿಶ್ ಸ್ಟೋರ್ ಮುಂಜಾನೆ ಕನ್ನ ಹಾಕಿದ್ದಾರೆ. ಸೆಟರ್ ಮುರಿದು ಒಳಗೆ ಪ್ರವೇಶಿಸಿದ ಕಳ್ಳ ಮುಖಕ್ಕೆ ಮಾಕ್ಸ್ ಧರಿಸಿ ಬಾಕ್ಸ್ ಗಳನ್ನು ಬಿಸಾಕಿ ಬೆಲೆ ಬಾಳುವ ಮೊಬೈಲ್ ಕದ್ದಿದ್ದಾನೆ. ಕೇವಲ ಸ್ಯಾಮಸಂಗ್ ಹಾಗೂ ಐ ಫೋನ್ ಗಳನ್ನು ಮಾತ್ರ ಕಳ್ಳತನ ಮಾಡಲಾಗಿದೆ. ಈ ಕಳ್ಳತನ ದೃಶ್ಯಗಳು ಅಂಗಡಿಯಲ್ಲಿ ಹಾಕಿದ್ದ ಸಿಸಿಟಿವಿಯಲ್ಲಿ ದಾಖಲಾಗಿವೆ. ಅಂದಾಜು 60 ಲಕ್ಷಕ್ಕೂ ಹೆಚ್ಚು ಮೌಲ್ಯದ ಮೊಬೈಲ್ ಕಳ್ಳತನ ಆಗಿದೆ ಎನ್ನಲಾಗಿದೆ.
ಅಕ್ಟೋಬರ್ ತಿಂಗಳ ಪ್ರಮುಖ ಘಟನೆಗಳು

ಅಕ್ಟೋಬರ್ 2
ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಆಧಾರಿಸಿ ಹೈಕಮಾಂಡ್ ಎಂಬ ಚಿತ್ರವನ್ನು ನಿರ್ಮಿಸುವುದಾಗಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ನೈಜ್ಯ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಿಸಲಾವುದು. ಈ ಚಿತ್ರಕ್ಕೆ ಹೈಕಮಾಂಡ್ ಎಂದು ನಾಮಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಇದೇ 16ರಿಂದ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಆಡೀಷನ್ ನಡೆಯುತ್ತದೆ.

ಅಕ್ಟೋಬರ್ 3, 4
ಬೆಳಗಾವಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ. ಬಿ.ಎಸ್. ಯಡಿಯೂರಪ್ಪ ಸೇರಿ ಹಲವು ಪ್ರಮುಖರು ಕಾರ್ಯಕಾರಣಿಯಲ್ಲಿ ಭಾಗಿ

ಅಕ್ಟೋಬರ್ 8
ಕುಂದಾ ನಗರಿ ಬೆಳಗಾವಿಯಲ್ಲಿ ಇಂದು ದೊಡ್ಮನೆ ಹುಡುಗನ ಅಬ್ಬರ ಜೋರಾಗಿತ್ತು. ದೊಡ್ಮನೆ ಚಿತ್ರದ ನಟ ಪುನಿತರಾಜಕುಮಾರ್, ಚಿತ್ರದ ನಿರ್ದೇಶಕ ಸೂರಿ ಹಾಗೂ ವಿನಯ್ ರಾಜಕುಮಾರ್ ನಗರಕ್ಕೆ ಭೇಟಿ ನೀಡಿದ್ರು. ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳ ನಡುವೆ ಆಗಮಿಸಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ್ರು. ಪುನಿತ್ ಪರ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳ ಕಡೆ ಕೈ ಬಿಸಿದರು. ನಂತರ ಚನ್ನಮ್ಮ ವೃತ್ತದಿಂದ ನಿರ್ಮಲಾ- ಸಂತೋಷ ಚಿತ್ರದ ಮಂದಿರದ ವರೆಗೆ ಒಪನ್ ಜೀಪ ನಲ್ಲಿ ಮೆರವಣಿಗೆ ನಡೆಯಿತು. ದೊಡ್ಮನೆ ಚಿತ್ರಕ್ಕೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿತ್ತು.

ಅಕ್ಟೋಬರ್ 11
ಆತ ಬೆಳಗಾವಿ ತುಂಬೆಲ್ಲಾ ದೊಡ್ಡ ಚರ್ಮದ ವ್ಯಾಪಾರಿ.ಇತ ಚರ್ಮವನ್ನ ಬೇರೆ ಬೇರೆ ಕಡೆಗಳಿಗೆ ಕಳುಹಿಸುತ್ತಿರಬಹುದೆಂದು ಜನರು ಅಂದುಕೊಂಡಿದ್ದರು. ಆದ್ರೆ ಆತ ದನದ ಚರ್ಮದ ಹೆಸರಿನಲ್ಲಿ ಮಾಡುತ್ತಿದ್ದ ದಂಧೆಯೇ ಬೇರೆಯಾಗಿತ್ತು. ಚೀನಾ, ವಿಯಟ್ನಾಂ ದೇಶಗಳಿಗೆ ಆನೆ ದಂತ, ಚಿಗರೆ, ಸಾರಂಗದ ಕೊಂಬುಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ. ಇವತ್ತು ಆತನ ಬೆಳಗಾವಿ ಮನೆ ಮೇಲೆ ದಾಳಿ ನಡೆಸಿದ್ದಾಗ ಸಿಕ್ಕಿದ್ದು ರಾಶಿ ರಾಶಿ ಕೊಂಬು, ದಂತ, ಚಿಪ್ಪುಗಳು.ಇವುಗಳ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 5ಕೋಟಿ ಅಂತಾ ಅಂದಾಜಿಸಲಾಗಿದೆ.

ಅಕ್ಟೋಬರ್ 11
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭಿಸಿ ನಾಲ್ವರು ಮೃತಪಟ್ಟ ಧಾರುಣ ಘಟನೆ ನಡೆದಿದೆ. ತಾಲೂಕಿನ ಮಚ್ಚೆ ಗ್ರಾಮದ ಬಳಿಯಲ್ಲಿ ಸಂಜೆ ವೇಳೆಯಲ್ಲಿ ಬೈಕ್ ಹಾಗೂ ಸ್ಕಾರ್ಪಿಯೋ ವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೈಕನಲ್ಲಿದ್ದ ದಂಪತಿ ಸೇರಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತರು ಫಕೀರಪ್ಪ ಕುರಿ, ಗಂಗವ್ವ, ರಾಧಿಕಾ ಹಾಗೂ ನಿಲಕಂಠೇಶ್ವರ ಎಂದು ಗುರಿತಿಸಲಾಗಿದೆ.

ಅಕ್ಟೋಬರ್ 14
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇಂದು ಮರಣ ದಂಡನೆ ವಿಧಿಸುವ ಪ್ರಕ್ರಿಯೆ ತಾಲೀಮು ನಡೆಸಲಾಯಿತು. ಈಗಾಗಲೇ ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿಗೆ ನೇಣು ಕುಣಿಕೆ ಸಿದ್ಧವಾಗಿದೆ. ಇನ್ನೂ ಉಮೇಶ್ ರೆಡ್ಡಿ ಸುಪ್ರೀಂ ಕೋರ್ಟ್ ನಲ್ಲಿ ಗಲ್ಲು ಶಿಕ್ಷೆ ಪ್ರಶ್ನಿಸಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಲೇವಾರಿ ಇನ್ನು ಆಗಿಲ್ಲ. ಆದ್ರು ಹಿಂಡಲಗಾ ಜೈಲಿನ ಅಧಿಕಾರಿಗಳು ಗಲ್ಲಿಗೆ ಏರಿಸಲು ಸಿದ್ಧತೆ ಆರಂಭಿಸಿದ್ದಾರೆ.

ಅಕ್ಟೋಬರ್ 15
ಕಳಸಾ ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮದ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಕಣಕುಂಬಿಯಲ್ಲಿ ಇಂದು ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ಮಲಪ್ರಭ ನದಿ ಉಗಮ ಸ್ಥಾನ ಕಣಕುಂಬಿಯಲ್ಲಿ ವಾಟಾಳ್ ನಾಗರಾಜ್, ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ, ನಿರ್ಮಾಪಕ ಸಾ.ರಾ.ಗೋವಿಂದ ಧರಣಿ ನಡೆಸಿದ್ರು. ಕಣಕುಂಬಿ ಮುಖ್ಯದ್ವಾರದಲ್ಲಿಯೇ ಹೋರಾಟಗಾರರನ್ನು ತಡೆದ ಪೊಲೀಸರು ಬಂಧಿಸಿದ್ರು.

ಅಕ್ಟೋಬರ್ 17
ಬೆಳಗಾವಿಯ ಕರಡಿಗುದ್ದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಕಾರ್, ಲಾರಿ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾಕತಿ ಗ್ರಾಮದ ಒಂದೇ ಕುಟುಂಬದ ನಾಗರಾಜ್ ಅಮ್ಮಣಗಿ, ಮಲ್ಲಮ್ಮ ಅಮ್ಮಣಗಿ, ಶಶಿಕಾಂತ ಅಮ್ಮಣಗಿ, ಒಂದುವರೆ ವರ್ಷದ ಶ್ರಾವಣಿ ಅಮ್ಮಣಗಿ ಮೃತಪಟ್ಟಿದ್ದಾರೆ. ಇನ್ನೂ ಘಟನೆಯಲ್ಲಿ 3 ಗಂಭೀರವಾಗಿ ಗಾಯಗೊಂಡಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನವೆಂಬರ್ ತಿಂಗಳ ಪ್ರಮುಖ ಘಟನೆಗಳು
ನವೆಂಬರ್ 01
ಬೆಳಗಾವಿಯಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ. ಎಂಇಎಸ್ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ.
ಕರಾಳ ದಿನ ಆಚರಣೆಯಲ್ಲಿ ಮೇಯರ್ ಸರಿತಾ ಪಾಟೀಲ್, ಉಪಮೇಯರ್ ಸಂಜಯ ಶಿಂಧೆ ಭಾಗಿ. ಕರಾಳ ದಿನ ಆಚರಣೆಯ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬ ಬಂದೂಕಿ ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ಓಡಾಡಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು.

ನವೆಂಬರ್ 06
ಬೆಳಗಾವಿ ಇತ್ತೀಚಿಗೆ ಸ್ಕೇಟಿಂಗ್ ವಿಶ್ವದಾಖಲೆಗಳ ಮೇಲೆ ಮಾಡುವ ಮೂಲಕ ರಾಷ್ಟ್ರ, ರಾಜ್ಯದ ಗಮನ ಸೆಳೆಯುತ್ತಿದೆ. ಅದರಲ್ಲಿ ಇಲ್ಲಿನ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ದಾಖಲೆ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ ನಿರಂತರವಾಗಿ 661 ಸ್ಪರ್ಧಿಗಳು ರಿಲೆ ಸ್ಕೆಟಿಂಗ್ ನಲ್ಲಿ ಪಾಲ್ಗೊಲ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂತಹದೊಂದು ದಾಖಲೆಗೆ ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ಮೈದಾನ ಸಾಕ್ಷಿಯಾಗಿದೆ.

ನವೆಂಬರ್ 7
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ತೀವ್ರಗೊಂಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಇಂದು ದುಷ್ಕರ್ಮಿಗಳು ಕನ್ನಡ ಶಾಲೆಯೊಂದಕ್ಕೆ ದ್ವಂಸಗೊಳಿಸಿದ್ದಾರೆ. ಕನ್ನಡ ಶಾಲೆ ಧ್ವಂಸ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.‌

ನವೆಂಬರ್ 13
ಕುಂದಾ ನಗರಿ ಬೆಳಗಾವಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮೇನಿಯಾ ನಡೆಯಿತು. ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮೋ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಮಾತನಾಡಿದ ಮೋದಿ 500,1000 ರೂಪಾಯಿ ಮುಖ ಬೆಲೆಯ ನೋಟು ನಿಷೇಧ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ರು. 60 ವರ್ಷಗಳ ಕಾಲ ಲೂಟಿ ಮಾಡಿದ ಹಣವನ್ನು 60 ದಿನಲ್ಲಿ ಸ್ವಚ್ಛ ಮಾಡುವುದು ಹೇಳಿದ್ರು.

ನವೆಂಬರ್ 21
ಇದೇ 21 ರಿಂದ 10 ದಿನ ಚಳಿಗಾಲದ ಅಧಿವೇಶನ ಸುವರ್ಣ ಸೌಧದಲ್ಲಿ ನಡೆಯಿತು.

ಡಿಸೆಂಬರ್ ತಿಂಗಳ ಪ್ರಮುಖ ಘಟನೆಗಳು

ಡಿಸೆಂಬರ್ 6
ಇದೇ ಡಿ.6ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನವನ್ನು ಪರಿವರ್ತನಾ ದಿನವನ್ನಾಗಿ ಆಚರಣೆ ಮಾಡಲು ಶಾಸಕ ಸತೀಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ. ನಗರದ ಸದಾಶಿವ ನಗರದ ರುದ್ರಭೂಮಿಯಲ್ಲಿ ಸತತ 24 ಗಂಟೆಗಳ ವಿವಿಧ ಮೂಢನಂಬಿಕೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಸತತ ಮೂರು ವರ್ಷಗಳಿಂದ ಈ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಗದಗದ ತೋಂಟದಾರ್ಯ ಸಂಸ್ಥಾನದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಜೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಡಿಸೆಂಬರ್ 6
ಸಂಗೊಳ್ಳಿ ರಾಯಣ್ಣ ಬ್ರೀಗೆಡ್ ಶಕ್ತಿ ಪ್ರದರ್ಶನ ಇಂದು ಬೆಳಗಾವಿಯ ನಂದಗಢದಲ್ಲಿ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷರ ವಿರೋಧದದ ನಡುವೆಯು ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ಈ ಮೂಲಕ ಬಿಜೆಪಿಯಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಡುವೆ ಸಂಘರ್ಷ ಆರಂಭವಾಗಿದೆ. ಬಿ.ಎಸ್. ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಬ್ರೀಗೆಡ್ ವೇದಿಕೆಯಲ್ಲಿ ಕಾಣಿಸಿಕೊಂಡು ಯಡಿಯೂರಪ್ಪಗೆ ಸೆಡ್ಡು ಹೊಡೆದಿದ್ದಾರೆ.
ಡಿಸೆಂಬರ್ 13
ಕುಡಿಯೋಕೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಗನನ್ನು ತಂದೆಯೆ ಹತ್ಯೆ ಮಾಡಿದ ವಿಕೃತ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ನಯಾನಗರದಲ್ಲಿ ತಂದೆ ವಿಠ್ಠಲ ಗುಂಡು ಹಾರಿಸಿದ್ದು, ಮಗ ಈರಣ್ಣ ಸ್ಥಳದಲ್ಲಿಯೇ ಮೃತಟ್ಟಿದ್ದು, ಪತ್ನಿ ಅನುಸೂಯಾ, ಮಗಳು ಪ್ರೀತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಠ್ಠಲ್ ಪತ್ನಿಗೆ ನಿತ್ಯ ಹಣ ಕೊಡುವಂತೆ ಪೀಡಿಸುತ್ತಿದ್ದನು.

ಡಿಸೆಂಬರ್ 17

ಕುಂದಾ ನಗರಿ ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಿತು. ಕೇಂದ್ರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿರುದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ನೋಟ್ ಬ್ಯಾನ್ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರದ ವೈಫಲ್ಯವನ್ನು ಜನರ ಬಳಿಗೆ ಕೊಂಡ್ಯೊಯುವ ಯತ್ನ ಮಾಡಿದ್ರು. ಕಾಂಗ್ರೆಸ್ ರ್ಯಾಲಿಗೆ 70 ಸಾವಿರಕ್ಕೂ ಹೆಚ್ಚು ಜನಸ್ತೋಮ ಸೇರಿತ್ತು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *