ಬೆಳಗಾವಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿ.ನಡೆಸು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭವಾಗಿ ೬ ತಿಂಗಳು ಕಳೆದಿದೆ.
ಹಿಂದುಳಿದ, ದಲಿತರು ನ್ಯಾಯ ಕೊಡಿಸಲು ಬ್ರಿಗೇಡ್ ಸ್ಥಾಪನೆ. ಮಾಡಲಾಗಿದೆ ಎಂದರು
ಜ.೨೬ ಕ್ಕೆ ಸಂಗೊಳ್ಳಿ ರಾಯಣ್ಣ ನೇಣಿಗೆ ಹಾಕಿದ ದಿನದಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ.
ಸಮಾವೇಶ ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಕಾರ್ಯಕರ್ತರು ಭಾಗಿಯಾಗುತ್ತಾರೆ
ಸಮಾವೇಶದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ.ಎಂದು ಈಶ್ವರಪ್ಪ ಮಾಹಿತಿ ನೀಡಿದರು
೨ ಲಕ್ಷ ಜನ ಸಮಾವೇಶದಲ್ಲಿ ಸೇರುವ ಸಾಧ್ಯತೆ ಇದೆ.
ಹಿಂದುಳಿದ ಜನರ ಜಾಗೃತಿಗಾಗಿ ಬ್ರಿಗೇಡ್ ಸ್ಥಾಪನೆ ಮಾಡಲಾಗಿದೆ.ದಲಿತ, ಹಿಂದುಳಿದ ಹಾಗೂ ಶೋಷಿತ ಜನರ ಬ್ರಿಗೇಡ್ ನಿರೀಕ್ಷೆ ಮೀರಿ ಬೆಂಬಲ ಸಿಗುತ್ತಿದೆ. ಬ್ರಿಗೇಡ್ ಗೆ ಹಾಗೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ.ಎಂದು ಈಶ್ವರಪ್ಪ ಸ್ಪಷ್ಠಪಡಿಸಿದರು
ಬಿ.ಎಸ್.ವೈ ಹಾಗೂ ನನ್ನ ನಡುವೆ ಸಭೆ ನಡೆದಿದೆ. ಬ್ರಿಗೇಡ್ ಮುಂದುವರಿಸಲು ಬಿಎಸ್ ವೈ ಈಗ ಯಾವುದೇ ವಿರೋಧವಿಲ್ಲ. ಈ ಮೊದಲು ಬ್ರಿಗೆಡ್ ಮೂಲಕ ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶ ಇತ್ತು. ಈಗ ಬಿ ಎಸ್ ವೈ ನಾನು ಅಧಿಕಾರಕ್ಕೆ ಬರಲು ಬ್ರಿಗೇಡ್ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಹೀಗಾಗಿ
ಇದೀಗ ರಾಯಣ್ಣ ಬ್ರಿಗೇಡ್ ಉದ್ದೇಶ ಬದಲಾಗಿದೆ.
ಹಿಂದುಳಿದ, ದಲಿತ ಹಾಗೂ ಶೋಷಿತ ವರ್ಗ ಅಭಿವೃದ್ಧಿಗೆ ಮಾತ್ರ ಬ್ರಿಗೇಡ್ ಹೋರಾಟ. ಮಾಡಲಿದೆ ಎಂದರು
ಯಡಿಯೂರಪ್ಪ ನವರೆ ಸ್ಟ್ರಾಂಗ್ ಅವರೆ ನಮ್ಮ ನಾಯಕ.ಮುಂದಿನ ಸಿಎಂ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ. ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಕೆ. ಎಸ್ ಈಶ್ವರಪ್ಪ ಹೇಳಿದರು
Check Also
ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….
ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …