ಬೆಳಗಾವಿ- ಬೆಳಗಾವಿ ಜಿಲ್ಲೆ ಅತೀ ಸೂಕ್ಷ್ಮ ಜಿಲ್ಲೆ ಇದು ಕರ್ನಾಟಕದ ಜೇಣು ಗೂಡು ಇದರ ವಿಭಜನೆಯ ಮೊಂಡುತನಕ್ಕೆ ಕೈ ಹಾಕಿದ್ರೆ ಇದು ರಾಜ್ಯ ವಿಭಜನೆಗೂ ದಾರಿಯಾದೀತು ಹುಷಾರ್
ಬೆಳಗಾವಿ ಜಿಲ್ಲೆಯಲ್ಲಿ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಪ್ರಾಬಲ್ಯವಿದೆ ಇಬ್ಬರು ಎಂಈಎಸ್ ಶಾಸಕರು ಜೊತೆಗೆ ಎಂಟರಿಂದ ಹತ್ತು ಜಿಪಂ ಸದಸ್ಯರು ಬಹುಮತ ಸಾಭೀತು ಪಡಿಸುವಷ್ಟು ಬೆಳಗಾವಿ ತಾಲೂಕಾ ಪಂಚಾಯತ್ ಸದಸ್ಯರು ಎಂಈಎಸ್ ನವರೇ ಚುನಾಯಿತರಾಗುತ್ತಾರೆ ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಗಡಿನಾಡು ದುರ್ಬಲ ವಾಗುವದರಲ್ಲಿ ಸಂದೇಹವೇ ಇಲ್ಲ
ಇವೆಲ್ಲ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲರು ಬೆಳಗಾವಿ ಜಿಲ್ಲೆಯ ವಿಭಜನೆಯನ್ನು ಕೈ ಬಿಟ್ಟಿದ್ದರು
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಅವರು ಒಂದು ಹೆಜ್ಜೆ ಮುಂದಿಟ್ಟು ಗಡಿಯನ್ನು ಗಟ್ಟಿ ಮಾಡುವ ಸದುದ್ದೇಶದಿಂದ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶ ನಡೆಸಿದ್ರು ಬೆಳಗಾವಿಯಲ್ಲೇ ವಿಶ್ವ ಕನ್ನಡ ಸಮ್ಮೇಳನ ನಡೆಸಿ,ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧ ನಿರ್ಮಿಸಿ ಬೆಳಗಾವಿ ನಮ್ಮ ನೆಲ ಎನ್ನುವ ಸ್ಪಷ್ಠ ಸಂದೇಶವನ್ನು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸುವಲ್ಲಿ ಯಶಸ್ವಿ ಯಾಗಿದ್ದರು
ರಾಜ್ಯಕ್ಕೆ ಅನೇಕ ಭಾಗ್ಯಗಳನ್ನು ಕರುಣಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿಕ್ಕೋಡಿ ಜಿಲ್ಕೆಯ ರಾಜಕೀಯ ಪ್ರಭಾವಕ್ಕೆ ಶರಣಾಗಿ ಗಡಿ ಗಟ್ಟಿಗೊಳಿಸುವ ನಿರ್ಧಾರ ಕೈಗೊಳ್ಳುವ ಬದಲು ಬೆಳಗಾವಿ ಅಧಿವೇಶನದಲ್ಲಿ ಜೇಣುಗೂಡಿಗೆ ಕಲ್ಲು ಎಸೆದು ಹೋಗಿದ್ದಾರೆ
ಬೆಳಗಾವಿ ಕ್ರಾಂತಿಯ ನೆಲ ಈ ನೆಲ ಅನೇಕ ಕ್ರಾಂತಿಗಳಿಗೆ ಸೂತ್ರಧಾರಿಯಾಗಿದೆ ರೈತಕ್ರಾಂತಿ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ,ಕನ್ನಡ ಹೋರಾಟದ ಕ್ರಾಂತಿಗೆ ಕಾರಣಿಭೂತವಾದ ನೆಲವನ್ನು ವಿಭಜಿಸುವ ದುಸ್ಸಹಾಸಕ್ಕೆ ಸಿಎಂ ಸಿದ್ರಾಮಯ್ಯ ಕೈ ಹಾಕಿದ್ದು ಸಿದ್ರಾಮಯ್ಯನವರ ಜಿಲ್ಲಾ ವಿಭಜನೆಯ ಭಜನೆ ರಾಜ್ಯ ವಿಭಜನೆಗೂ ಕಾರಣ ಆಗುವ ದರಲ್ಲಿ ಎರಡು ಮಾತಿಲ್ಲ
ಜೆ ಹೆಚ್ ಪಟೇಲರು ಬೆಳಗಾವಿಯ ರಾಜಕೀಯ ಪ್ರಭಾವಕ್ಕೆ ಮಣಿದು ಜಿಲ್ಲಾ ವಿಭಜನೆ ಮಾಡುವ ನಿರ್ಧಾರ ಕೈಗೊಂಡಾಗ ಬೈಲಹೊಂಗಲ ತಾಲೂಕಿನ ಹೋರಾಟಗಾರರು ಜಿಲ್ಲಾ ವಿಭಜನೆಗೆ ತೀವ್ರವಾಗಿ ವಿರೋಧಿಸಿದರು ಅಂದಿನ ದಿನಗಳಲ್ಲಿ ಅತ್ಯಂತ ಬಲಿಷ್ಠವಾಗಿದ್ದ ರೈತ ಸಂಘ ಅವರಿಗೆ ಸಾಥ್ ನೀಡಿತ್ತು ಅಂದಿನ ರೈತ ಸಂಘದ ಪ್ರಭಾವಿ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಜಿಲ್ಲಾ ವಿಭಜನೆಯನ್ನು ವಿರೋಧಸಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು
ಬೈಲಹೊಂಗಲದಲ್ಲಿ ಹೊತ್ತಿದ ಕಿಡಿ ಇನ್ನಿತರ ತಾಲ್ಲೂಕುಗಳಲ್ಲಿ ವ್ಯಾಪಿಸಿ ಬೆಳಗಾವಿ ನೆಲದ ವಿಭಜನೆ ಬೇಡ ಅಂತಾ ಒಕ್ಕರುಲಿನ ಹೋರಾಟ ನಡೆಸಿದ ಕಾರಣ ಗಡಿನಾಡ ಕನ್ನಡಿಗರ ಭಾವನೆಗಳನ್ಮು ಮನವರಿಕೆ ಮಾಡಿಕೊಂಡ ಜೆ ಹೆಚ್ ಪಟೇಲ್ ಬೆಳಗಾವಿ ಜಿಲ್ಲಾ ವಿಭಜನೆಯ ನಿರ್ಧಾರವನ್ನು ವಾಪಸ್ ಪಡೆದುಕೊಂಡು ಗಡಿನಾಡಿನ ಇತಿಹಾಸದಲ್ಲಿ ಉಳಿದುಕೊಂಡರು
ಚಿಕ್ಕೋಡಿ ತಾಲ್ಲೂಕಿನ ಜನ ಚಿಕ್ಕೋಡಿ ಜಿಲ್ಲೆ ಆಗಬೇಕಂತಾರೆ ಇವರು ಹೋರಾಟ ಶುರು ಮಾಡಿಕೊಂಡ ಬೆನ್ನಲ್ಲಿಯೇ ಗೋಕಾಕ ತಾಲ್ಲೂಕಿನವರು ಗೋಕಾಕ್ ಜಿಲ್ಲೆ ಆಗಬೇಕೆಂದು ಹೋರಾಟ ಶುರು ಮಾಡ್ತಾರೆ ಯಾವ ತಾಲ್ಲೂಕು ಜಿಲ್ಲೆ ಆಗಬೇಕು ಅನ್ನೋದರ ಬಗ್ಗೆ ಒಮ್ಮತ ಮೂಡಿಲ್ಲ ಇಂತಹ ಗೊಂದಲಗಳ ಸಮಯದಲ್ಲಿ ಸಿಎಂ ಸಿದ್ರಾಮಯ್ಯ ಬೆಳಗಾವಿ ಜಿಲ್ಲಾ ವಿಭಜನೆಯ ಮಾತುಗಳನ್ನಾಡಿದ್ದು ಎಷ್ಟು ಸರಿ ಅನ್ನೋದು ಈಗ ಅನೇಕ ಚರ್ಚೆಗಳಿಗೆ ಕಾರಣವಾಗಿದೆ
ಅಭಿವೃದ್ಧಿ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವದಾದರೆ ಕರ್ನಾಟಕ ವನ್ನು ವಿಭಜಿಸಿ ಪ್ರತ್ಯೇಕ ಉತ್ತರ ಕರ್ನಾಟಕವನ್ನು ಏಕೆ ರಚಿಸಬಾರದು ಎನ್ನುವ ಪ್ರಶ್ನೆ ಈಗ ಗಡಿನಾಡ ಕನ್ನಡಿಗರದ್ದಾಗಿದೆ
ಮುಖ್ಯಮಂತ್ರಿ ಸಿದ್ರಾಮಯ್ಯ ಮೊಂಡು ನಿರ್ಧಾರವನ್ನು ವಾಪಸ್ಸು ಪಡೆದು ರಾಜ್ಯದ ಐಕ್ಯತೆಗೆ ಏಕತೆಗೆ ನಾಂದಿ ಹಾಡಲಿ ಅನ್ನೋದು ನಮ್ಮ ಉದ್ದೇಶ ಮತ್ತು ಆಶಯ ಇದ್ದಕ್ಕೂ ಮೀರಿ ಸಿದ್ರಾಮಯ್ಯ ಹಠಮಾರಿ ಧೋರಣೆ ಕೈಗೊಂಡರೆ ಜಿಲ್ಲಾ ವಿಭಜನೆಯ ಜೊತೆಗೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುವ ಕಾಲ ದೂರ ಉಳಿದಿಲ್ಲ