ಬೆಳಗಾವಿ-ರಾಜಕೀಯ ನಿರಾಶ್ರಿತರು ರಾಜ್ಯದಲ್ಲಿ ಶಿವಸೇನೆ ಕಟ್ಟಲು ಮುಂದಾದ್ರೆ ಕಲ್ಲು ತಗೊಂಡು ಹೊಡಿತಿವಿ ಅಂತಾ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭೀಮಾಶಂಕರ, ಕೆಲವರು ರಾಜಕೀಯ ತೆವಲಿಗಾಗಿ ನಾಡವಿರೋಧಿ ಶಿವಸೇನೆ ಪಕ್ಷವನ್ನ ರಾಜ್ಯದಲ್ಲಿ ಕಟ್ಟಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿ ಗಡಿ ವಿಚಾರವನ್ನ ಶಿವಸೇನೆ ಸದಾ ಜೀವಂತವಿಟ್ಟಿದೆ.
ಅಂತಾ ಶಿವಸೇನೆ ಪಕ್ಷ ನಾಡಿನಲ್ಲಿ ಕಟ್ಟಲು ಕೆಲವರು ಹೊರಟ್ಟಿದ್ದಾರೆ. ಶಿವಸೇನೆ ಪಕ್ಷ ಕಟ್ಟಲು ಹೊರಟವರ ಮೈಯಲ್ಲಿ ಕನ್ನಡದ ರಕ್ತಾ ಹರಿಯುತ್ತಾ?.. ರಾಜಕೀಯ ನಿರಾಶ್ರಿತರು ಶಿವಸೇನೆ ಕಟ್ಟಲು ನಾವು ಅವಕಾಶ ನೀಡುವುದಿಲ್ಲ. ಶಿವಸೇನೆ ಕಟ್ಟುವವರಿಗೆ ಕರ್ನಾಟಕ ನವ ನಿರ್ಮಾಣ ಸೇನೆ ವಿರೋಧಿಸುತ್ತದೆ. ಶಿವಸೇನೆ ಅಸ್ತಿತ್ವಕ್ಕೆ ಅವಕಾಶವಿಲ್ಲ ನೀಡುವುದಿಲ್ಲ. ಜತೆಗೆ ಶಿವಸೇನೆ ಕಟ್ಟುವವರಿಗೆ ಕಲ್ಲು ತಗೊಂಡು ಹೊಡೆಯುತ್ತೆವೆ ಎಂದು ಭೀಮಾಶಂಕರ ಎಚ್ಚರಿಕೆ ನೀಡಿದ್ದಾರೆ.ಜತೆಗೆ ಬೆಳಗಾವಿ ಚಳಿಗಾಲ ಅಧಿವೇಶನ ಸಂಪೂರ್ಣ ವಿಫಲವಾಗಿದೆ.
ಬೆಳಗಾವಿ ಸೌಧ ರಾಜಕಾರಣಿಗಳಿಗೆ ಪಿಕ್ನಿಕ್ ಸ್ಪಾಟ್ ಆಗಿದೆ. ಐದು ಅಧಿವೇಶನದಲ್ಲಿ ಗಡಿ ವಿಚಾರ ಪ್ರಸ್ತಾಪವಾಗಿಲ್ಲ.
ಅದೇ ಮಹಾರಾಷ್ಟ್ರ ಸರ್ಕಾರ ಸದನದಲ್ಲಿ ಗಡಿ ವಿಚಾರವನ್ನ ಠರಾವು ಪಾಸ್ ಮಾಡಲಾಗುತ್ತೆ, ಆ ಠರಾವು ಅನ್ನ ಸುಪ್ರೀಂ ಕೋರ್ಟ್ ಗೆ ಕಳಿಸುತ್ತಾರೆ.
ಸರ್ಕಾರ ರಣಹೇಡಿಗಳ ಓಲೈಕೆ ಮಾಡಬಾರದು.
ಬೆಳಗಾವಿ ಒಂದಿಂಚು ಮಣ್ಣು ಮುಟ್ಟಲು ಶಿವಸೇನೆ ಗೆ ನೀಡುವುದಿಲ್ಲ. ಉದ್ಧವ ಠಾಕ್ರೆ ರಾಜಕೀಯ ತೆವಲುಗಾಗಿ ಗಡಿ ವಿಚಾರ ಕೆದಕದಂತೆ ಎಚ್ಚರಿಕೆ ನೀಡಿದ್ರು.ಶಿವಾಜಿ ಸುಂಟಕರಗೆ ಬಿಜೆಪಿ ಪಕ್ಷದಿಂದ ಹೊರಹಾಕಬೇಕು.
ಬಿಎಸವೈ ತಕ್ಷಣವೇ ಸುಂಟಕರನನ್ನ ಪಕ್ಷದಿಂದ ವಜಾ ಮಾಡಲು ಆಗ್ರಹಿಸಿದ್ದಾರೆ.