ಬಳಗಾವಿ – ನಿನ್ನೆ ಮದ್ಯರಾತ್ರಿ ನಗರದ ಕಶಲೇಜು ರಸ್ತೆಯ ಸನ್ಮಾನ ಹೊಟೇಲ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಖಡಕ್ ಗಲ್ಲಿಯ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಮದ್ಯರಾತ್ರಿ ಎರಡು ಘಂಟೆಗೆ ನಡೆದಿದೆ
ಖಡಕ್ ಗಲ್ಲಿಯ ಸ್ಮೀತಾ ಜಾಧವ ಮತ್ತು ಇವಳ ಪತಿ ಗಜಾನನ ಜಾಧವ ಅವರು ರಾತ್ರಿ ಸಮಂಧಿಕರ ಮನೆಯಿಂದ ಕಾರ್ಯಕ್ರಮ ಮುಗಿಸಿ ಖಡಕ್ ಗಲ್ಲಿಯ ಮನೆಗೆ ಮರಳುತ್ತಿರುವಾಗ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಬೈಕ ಸವಾರ ಸ್ಮೀತಾ ಜಾಧವ ಗೆ ತೆಲೆಗೆ ಗಂಭೀರ ಗಾಯವಾದ ಕಾರಣ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಸ್ಮೀತಾ ಜಾಧವ ಮೃತಪಟ್ಟಿದ್ದು ಗಜಾನನ ಜಾಧವ ಚಿಕಿತ್ಸೆ ಪಡೆಯುತ್ತಿದ್ದಾನೆ
ಇದೊಂದು ಹಿಟ್ ಆ್ಯಂಡ್ ರನ್ ಕೇಸ್ ಆಗಿದ್ದು ಟ್ರಾಫಿಕ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವ್ಹಿ ಪೋಟೇಜ್ ಪರಶೀಲಿಸಿ ಕಾರು ಚಾಲಕನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ
