ಬೆಳಗಾವಿ: ಬೌವ್..ಬೌವ್.. ಅದಾಕ್ಷಣ ಹೇದರಬೇಡಿ. ಏಕೆಂದರೆ ಇದು ಕಚ್ಚುವ ಬೌವ್…ಬೌವ್ ಅಲ್ಲವೇ ಅಲ್ಲ. ಇದು ಶೋಕಿಗಾಗಿ ಸಾಕಿದ ಸಾಕಿದ ಬೌವ್… ಬೌವ್ ಗಳು. ಅದು ಹೇಗೆ ಎಲ್ಲಿ ಅಂತೀರಾ. ಬೆಳಗಾವಿ ಸುದ್ದಿ ನೋಡಿ ಮಜಾಮಾಡಿ.
ದೇಶದಲ್ಲಿರುವ ಎಲ್ಲಾ ಜಾತಿಯ ನಾಯಿಗಳು ಇಂದು ಬೆಳಗಾವಿಗೆ ಬಂದಿದೆ.ಏಕೆಂದರೆ ಬೆಳಗಾವಿಯಲ್ಲಿ ಇಂದು ರಾಷ್ಟ್ರಮಟ್ಟದ ಡಾಗ್ ಶೋ ನಡೆಯುತ್ತಿದೆ. ಬೆಳಗಾವಿಯ ಶಗುನ್ ಗಾರ್ಡನಲ್ಲಿ ಎಲ್ಲ ಜಾತಿಯ ನಾಯಿಗಳು ಸದ್ದು ಮಾಡುತ್ತಿವೆ. ಅದನ್ನು ನೋಡಲು ಶ್ವಾನ ಪ್ರಿಯರು ಶಗುನ್ ಗಾರ್ಡನಗೆ ಲಗ್ಗೆ ಇಟ್ಟಿದ್ದಾರೆ.
ಡಾಗ್ ಶೋಗೆ ಬಂದಿರುವ ನಾಯಿ ಮಾಲೀಕರು ತಮ್ಮ ನಾಯಿಯ ಕೆಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಪ್ರತಿಯೊಂದು ಜಾತಿಯ ನಾಯಿಯೂ ಒಂದೊಂದು ಬಗೆಯ ಕಲೆಯನ್ನು ಪ್ರದರ್ಶನ ಮಾಡುತ್ತಿವೆ. ಇದನ್ನು ನೋಡಿದ ಶ್ವಾನ ಪ್ರೀಯರು ನಾಯಿಗಳ ಬಗೆ ಬಗೆಯ ಆಟ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಡಾಗ್ ಶೋಗೆ ಬಂದಿರುವ ಜರ್ಮನ್ ಶಪಡ್೯, ಪಮೋರಿಯನ್, ಮುಧೋಳ ನಾಯಿ, ಜೂಲಿ ನಾಯಿ, ಬ್ಲ್ಯಾಕ್ ಡಾಗ್, ಡಾಬರ್ ಮನ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ತಳಿಗಳ 250ಕ್ಕೂ ಹೆಚ್ಚು ಶ್ವಾನಗಳು ಡಾಗ್ ಶೋನಲ್ಲಿ ಭಾಗವಹಿಸಿ ಬೌವ್.. ಬೌವ್… ಸದ್ದಿನ ಮೂಲಕ ಎಲ್ಲರನ್ನು ಆಕರ್ಷಿಸುತ್ತಿವೆ.
ಮುಂಬೈ, ಪೂಣಾ, ಚನೈ, ಗೋವಾ, ಮಹಾರಾಷ್ಟ್ರ, ಬೆಂಗಳೂರು, ಮುಧೋಳ, ವಿಜಯಪುರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ವಿವಿಧ ಬಗೆಯ ಬಣ್ಣಬಣ್ಣದ ಶ್ವಾನಗಳು ಬೆಳಗಾವಿಗೆ ಮುತ್ತಿಗೆ ಹಾಕಿದ್ದು ಎರಡು ದಿನಗಳ ಕಾಲ ಬೆಳಗಾವಿಯ ಶಗುನ್ ಗಾರ್ಡನಲ್ಲಿ ಬೌವ್…ಬೌವ್.. ಎನ್ನುವ ಸದ್ದು ಮುಂದುವರಿಸಲಿವೆ.
ಡಾಗ್ ಶೋನಲ್ಲಿ ಭಾಗವಹಿಸಿರುವ ಡಾಬರ್ ಮನ್ ಸದ್ದು ಮಾಡದೆ ಹೆಜ್ಜೆ ಹಾಕಿದರೆ, ಮುಧೋಳಿನ ಲಂಬೂ ಛಲಾಂಗ್ ಹೊಡೆಯುತ್ತಿದೆ. ಜರ್ಮನ್ ಶಪಡ್೯ ನಾನು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಎಲ್ಲರನ್ನು ಸೈಡ್ ಹೊಡೆಯುತ್ತಿದೆ. ಜೂಲಿ ನಾಯಿಗೆ ಎಲ್ಲ ನಾಯಿಗಳು ಲೈನ್ ಹೊಡೆಯುತ್ತಿದ್ದು, ಯಾವ ನಾಯಿ ಯಾರಿಗೆ LOVE ಮಾಡುತ್ತೋ. ಯಾರಿಗೆ ಕೈಕೊಡುತ್ತೋ. ಈ ಶೋನಲ್ಲಿ ಯ್ಯಾರ್ಯರಿಗೆ ಪ್ಯಾರ ಧೋಖಾ ಆಗುತ್ತೋ ಕಾದು ನೋಡಬೇಕು.
ಬೆಳಗಾವಿ ಶೆನೈನ್ ಅಸೋಸಿಯೇಷನ್ ಈ ಡಾಗ್ ಶೋವನ್ನು ಆಯೋಜಿಸಿದ್ದು, ಮಕ್ಕಳ ಸಮೇತ ಶಗುನ್ ಗಾರ್ಡನ್ ಗೆ ಹೋಗಿ ಶ್ವಾನಗಳ ಚಲ್ಲಾಟ ನೋಡಿ ಮಜಾ ಮಾಡಿ..