ಬೆಳಗಾವಿ
ಬೆಳಗಾವಿ ನಗರ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿಯಾಗಿರುವ ಈ ರಿಕ್ಷಾಗಳು ಹೆಚ್ಚೆಚ್ಚು ಪ್ರಯಾಣಿಕರನ್ನು ಸೆಳೆಯುತ್ತಿವೆ. 
ನಗರದಲ್ಲಿ ಕೇವಲ ಒಂದು ರಿಕ್ಷಾ ಓಡಾಡುತ್ತಿದೆ. ಇದನ್ನು ತಯಾರಿಸಿದ ಕಂಪೆನಿ ಒಂದೇ ರಿಕ್ಷಾ ಬೆಳಗಾವಿಗೆ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಟ್ಟಿದೆ.ಈ ರಿಕ್ಷಾದ ವಿಶೇಷತೆ ಏನೆಂದರೆ ಪ್ರಯಾಣಿಕರಿಗೆ ಕುಳಿತುಕೊಳಲು ಸುಸಜ್ಜಿತ ಆಸನಗಳ ವ್ಯವಸ್ಥೆ ಇದೆ.
ಈ ರಿಕ್ಷಾ 3 ಗಂಟೆ ಚಾರ್ಜಿಂಗ್ ಮಾಡಿದರೆ 80 ಕಿಮಿ ದೂರ ಕ್ರಮಿಸುತ್ತದೆ.ಬೇರೆ ರಿಕ್ಷಾಗಳಿಗಿಂತ ಕಡಿಮೆ ಶುಲ್ಕ ವಿಧಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರು ಆಕರ್ಷಿತರಾಗುತ್ತಿದ್ದಾರೆ.
ಬಸವನ ಕುಡಚಿಯ ವಿಜಯ ವಸ್ತ್ರದ ಎಂಬಾತ ಇಲೆಕ್ಟ್ರಿಕ್ ರಿಕ್ಷಾ ನಗರದಲ್ಲಿ ಓಡಿಸುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಿರ್ವಹಣೆಯ ವೆಚ್ಚ ಅತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಕಡಿಮೆ ಮೊತ್ತದಲ್ಲಿ ಬಹಳ ೂರ ಕ್ರಮಿಸಬಹುದಾಗಿದೆ ಎನ್ನುತ್ತಾರೆ ವಿಜಯ ವಸ್ತ್ರದ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ