Breaking News

ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ 110 ಕೋಟಿಯ ಮಕ್ಮಲ್ ಟೋಪಿ

ಬೆಳಗಾವಿ-ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ ಝುಲ್ಫಿ ಎಂಬ ವ್ಯಕ್ತಿ ಬರೋಬ್ಬರಿ 110 ಕೋಟಿಯ ಮಕ್ಮಲ್ ಟೋಪಿ ಹಾಕಿದ್ದು ಬೆಳಗಾವಿಯ ಮರಿ ಕುಳಗಳು ಝುಲ್ಫಿ ಕೊಟ್ಟ ಶಾಕ್ ನಿಂದ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ
ಬಡವರಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿ ನೂರು ರೂ ಬಾಂಡ್ ಮೇಲೆ ಪ್ಲಾಟ್ ಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂ ಹಣ ಸಂಪಾದಿಸಿದ್ದ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಝುಲ್ಫಿ ಮಾಡಿದ ಮೋಡಿಗೆ ಮರುಳಾಗಿ 110 ಕೋಟಿಗೂ ಅಧಿಕ ಮೊತ್ತದ ಮಕ್ಮಲ್ ಟೋಪಿ ಹಾಕಿಸಿಕೊಂಡಿದ್ದಾರೆ
ಝುಲ್ಫಿ ಎಂಬ ವ್ಯಕ್ತಿ ಬೆಳಗಾವಿಯ ಕೆಲವು ನಗರ ಸೇವಕರು ಸೇರಿದಂತೆ ರಿಯಲ್ ಎಸ್ಟೇಟ್ ಡಾನ್ ಗಳಿಗೆ ಮೋಡಿ ಮಾಡಿದ್ದಾನೆ ಹೊಸ ಆಡಿ ಕಾರಿನಲ್ಲಿ ಬಾಡಿಗಾಡ್ ಗಳೊಂದಿಗೆ ಬೆಳಗಾವಿಯಲ್ಲಿ ಸುತ್ತಾಡಿದ ಈ ಝುಲ್ಫಿ ತಾನೊಬ್ಬ ಕೋಟ್ಯಾಧೀಶ ಎನ್ನುವ ರೀತಿಯಲ್ಲಿ ಹೈಟೆಕ್ ಫೋಸ್ ಕೊಟ್ಟಿದ್ದಾನೆ
ಇತನ ಕಾರು ಸೂಟು ಬೂಟು ನೋಡಿದ ಕೆಲವರು ಇತನ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ ಈ ಝುಲ್ಫಿ ಬೆಳಗಾವಿಯ ಸುವರ್ಣ ಸೌಧದ ಬಳಿ ಹೈಟೆಕ್ ಸಿಟಿ ನಿರ್ಮಿಸುವ ಪ್ರಪೋಜಲ್ ಮುಂದಿಟ್ಟದ್ದಾನೆ ಇದರ ಜೊತೆಗೆ ತನ್ನ ಗೋಲ್ಡ ಬಿಜನೆಸ್ ಕೂಡಾ ಇದ್ದು ಈ ವ್ಯೆವಹಾರದಲ್ಲಿ ಹಣ ಹೂಡಿದವರಿಗೆ ಬಂಪರ್ ಲಾಭ ಸಿಗುತ್ತದೆ ಎಂದು ಹಣ ಹೂಡಿದ ಕೆಲವು ನಗರ ಸೇವಕರಿಗೆ ಹಣ ಸಂದಾಯ ಮಾಡಿ ಅವರ ವಿಶ್ವಾಸ ಗಳಿಸಿದ್ದಾನೆ
ಝುಲ್ಫಿ ಮೋಸಗಾರನಲ್ಲ ಎನ್ನುವದು ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿ,ಮತ್ತು ಕೆಲವು ನಗರ ಸೇವಕರಿಗೆ ಖಾತ್ರಿಯಾಗಿದೆ.ಎಲ್ಲರೂ ಝುಲ್ಫಿ ಜೊತೆ ದೋಸ್ತಿ ಮಾಡಿಕೊಂಡಿದ್ದಾರೆ ನಂತರ ಈ ಚಾಲಾಕಿ ಝುಲ್ಫಿ ಎಲ್ಲರನ್ನು ಥೈಲ್ಯಾಂಡ ಹಾಗು ಮಲೇಶಿಯಾ ಪ್ರವಾಸಕ್ಕೆ ಕರೆದೊಯ್ದು ಅವರಿಗೆ ಎಂಜಾಯ್ ಮಾಡಿಸಿದ್ದಾನೆ ಝುಲ್ಪಿ ಮಾಡಿಸಿದ ವಿದೇಶಿ ಪ್ರವಾಸದಿಂದ ಸ್ವರ್ಗ ಲೋಕದ ಸುಖ ಅನುಭವಿಸಿದ ಬೆಳಗಾವಿಯ ರಿಯಲ್ ಎಸ್ಟೇಟ ಕುಳಗಳು ಝುಲ್ಫಿಯ ಮೇಲೆ ಫಿದಾ ಆಗಿದ್ದಾರೆ
ಫಾರೇನ್ ಟೂರು ಮಾಡಿಸಿದ ಬಳಿಕ ಈ ಝುಲ್ಫಿ ಗೋಲ್ಡ ಬಿಜನೆಸ್ ನಲ್ಲಿ ದೊಡ್ಡ ಆಫರ್ ಇದೆ ಎಂಬ ಪ್ರಸ್ತಾವನೆ ಮುಂದಿಟ್ಟಿದ್ದಾನೆ ಇದಕ್ಕೆ ಮರುಳಾದ ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳು ಹಿಂದೆ,ಮುಂದೆ ವಿಚಾರ ಮಾಡದೇ ಒಬ್ಬ ನಗರ ಸೇವಕ ಹತ್ತು ಕೋಟಿ,ಇನ್ನೊಬ್ಬ ನಗರ ಸೇವಕ ಏಳು ಕೋಟಿ ಹೀಗೆ ಎಲ್ಲರೂ ಸೇರಿ ಬರೋಬ್ಬರಿ 110 ಕೋಟಿ ಇನ್ವೆಸ್ಟ ಮಾಡಿದ್ದಾರೆ
ಎಲ್ಲರೂ ಹಣ ಇನ್ವೆಸ್ಟ ಮಾಡಿದ ಬಳಿಕ ಬೆಳಗಾವಿಯ ಈ ಝುಲ್ಫಿ ಅಮೇರಿಕಾದಲ್ಲಿ ಮೀಟಿಂಗ್ ಇದೆ ಅಂತ ಸುಳ್ಳು ಹೇಳಿ ಗೋವಾ ಕಡಲ ಕಿನಾರೆಯಲ್ಲಿ ಠಿಖಾನಿ ಹೂಡಿದ್ದಾನೆ ಒಂದು ತಿಂಗಳು ಗೋವಾದಲ್ಲಿಯೇ ಮಜಾ ಮಾಡಿದ ಝುಲ್ಫಿ ಒಂದು ತಿಂಗಳ ನಂತರ ತನಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಈ ಚಾಲಾಕಿ ಝುಲ್ಫಿ ಬೆಳಗಾವಿಗೆ ಮೆಸೇಜ್ ಕಳುಹಿಸುತ್ತಾನೆ ಸುದ್ಧಿ ತಿಳಿದ ಬೆಳಗಾವಿಯ ರಿಯಲ್ ಎಸ್ಟೇಟ ಕುಳಗಳು ಗೋವಾಕ್ಕೆ ದೌಡಾಯಿಸುತ್ತಾರೆ.ಆಸ್ಪತ್ರೆಯಲ್ಲಿ ಹತ್ತಕ್ಕೂ ಹೆಚ್ಚು ಬಾಡಿಗಾಡ್ ಗಳು ಝುಲ್ಫಿಗೆ ಭದ್ರತೆ ಒದಗಿರಿಸುತ್ತಾರೆ,ಝುಲ್ಫಿ ಅವರ ಪರಿಸ್ಥಿತಿ ಗಂಭೀರವಾಗಿದೆ ಅವರ ಜೊತೆ ಮಾತುಕತೆ ಸಾಧ್ಯವಿಲ್ಲ ಅಂತ ಈ ಬಾಡಿಗಾಡ್ ಗಳು ಬೆಳಗಾವಿಯ ಕುಳಗಳಿಗೆ ಹೆದರಿಸಿ ಕಳುಹಿಸುತ್ತಾರೆ
ಇದರಿಂದ ಕಂಗಾಲಾದ ಬೆಳಗಾವಿಯ ಇನ್ವೆಸ್ಟರ್ ಗಳು ಹಾಸಿಗೆ ಹಿಡಿಯುತ್ತಾರೆ ತಮ್ಮ ವೇದನೆ ಯಾರ ಮುಂದೆಯೂ ಹೇಳಲಿಕ್ಕಾಗದೇ ಚಡಪಡಿಸುತ್ತಾರೆ
ಎರಡು ವಾರದ ಬಳಿಕ ಈ ಝುಲ್ಫಿ ಗೋವಾ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೆಳಗಾವಿಗೆ ಬರುತ್ತಾನೆ,ಎಲ್ಲರೂ ಆತನನ್ನು ಭೇಟಿಯಾಗುತ್ತಾರೆ ನಾನು ಗೋಲ್ಡ ಬಿಜನೆಸ್ ನಲ್ಲಿ ಹಣ ಹೂಡಲು ಅಮೇರಿಕಾ ಹೋಗಲು ಗೋವಾ ವಿಮಾನ ನಿಲ್ಧಾಣಕ್ಕೆ ಹೋದ ಸಂಧರ್ಭದಲ್ಲಿ ಗೋವಾ ಕಸ್ಟಂ ಅಧಿಕಾರಿಗಳು ತಪಾಸಣೆ ಮಾಡಿದ ಸಂಧರ್ಭದಲ್ಲಿ ನನ್ನ ಬಳಿ ಇದ್ದ “ಆಕ್ರಮ’ಹಣ ಸಿಕ್ಕಿತು ನಾನು ಹೆದರಿ ನಿಮ್ಮ ಹಣ ಗೋವಾ ಕಸ್ಟಂ ಅಧಿಕಾರಿಗಳ ಹತ್ತಿರ ಬಿಟ್ಟು ಓಡಿ ಬಂದೇ ಎಂದು ಈ ಝುಲ್ಫಿ ಕಥೆ ಕಟ್ಟುತ್ತಾನೆ
ಈತ ತಮಗೆ ಮೋಸ ಮಾಡಿದ್ದಾನೆ ಎನ್ನುವದು ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮತ್ತು ಕೆಲವು ನಗರ ಸೇವಕರಿಗೆ ಖಾತ್ರಿಯಾಗುತ್ರದೆ ಎಲ್ಲರೂ ಸೇರಿಕೊಂಡು ಝುಲ್ಫಿಗೆ ಮನ ಬಂದಂತೆ ಥಳಿಸುತ್ತಾರೆ
ಈಗ ಸದ್ಯಕ್ಕೆ ಝುಲ್ಫಿ ಬಚಾವ್ ಆಗಿದ್ದಾನೆ,”ಆಕ್ರಮ’ಹಣವನ್ನು ಇನ್ವೆಸ್ಟ ಮಾಡಿದ ಬೆಳಗಾವಿಯ ಕುಳಗಳು ಪೋಲೀಸರಿಗೆ ದೂರು ನೀಡದೇ ಈಗ ಹಾಸಿಗೆ ಹಿಡಿದಿದ್ದಾರೆ
ಇಷ್ಡೊಂದು ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆಯನ್ನು ಪೋಲೀಸರು ಕೇಳಬಹುದು.ನಮ್ಮ ಆಕ್ರಮ ವ್ಯೆವಹಾರ ಬಹಿರಂಗವಾಗಬಹು ಎಂದು ಹೆದರಿ ಮೋಸ ಹೋದವರು ಕಂಗಾಲಾಗಿದ್ದಾರೆ
ಝುಲ್ಫಿ ಕೊಟ್ಟ ಶಾಕ್ ನಿಂದ ಬೆಳಗಾವಿಯ ರಿಯಲ್ ಇಸ್ಟೇಟ್ ಉದ್ಯಮ ಬೆಚ್ಚಿಬಿದ್ದಿದೆ ಹಣ ಕಳೆದುಕೊಂಡವರು ದೂರು ಕೊಡಲಿಕ್ಕಾಗದೇ,ತಮಗಾದ ವೇದನೆಯನ್ನು ಇನ್ನೊಬ್ಬರ ಮುಂದೆ ಹೇಳಲಿಕ್ಕಾಗದೇ 110 ಕೋಟಿಯ ಟೋಪಿ ಹಾಕಿಸಿಕೊಂಡು ಮನೆ ಹಿಡಿದಿದ್ದಾರೆ
ಬೆಳಗಾವಿಯ ಕೋಣೆ ಕೋಣೆಯಲ್ಲಿ ಏ..ಝುಲ್ಫಿ.ಏ ಜಾದೂ..ಕಯಾಮತ.ಕಯಾಮತ..ಎನ್ನುವ ಚರ್ಚೆ ನಡೆದಿದೆ ಎಲ್ಲಿ ನೋಡಿದಲ್ಲಿ ಝುಲ್ಫಿ ಬಗ್ಗೆಯೇ ಗುಸು..ಗುಸು ಚರ್ಚೆ ಶುರುವಾಗಿದೆ
ಥೈಲ್ಯಾಂಡ್ ಮಾಲೀಶ್ ಇಷ್ಟೊಂದು ತುಟ್ಟಿ ಬೀಳಬಹುದು ಎಂದು ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿಗಳು ಭಾವಿಸಿರಲಿಲ್ಲ ಹಿಂದೆ ಮುಂದೆ ವಿಚಾರ ಮಾಡದೇ ಹಣ ಇನ್ವೆಸ್ಟ ಮಾಡುವವರಿಗೆ ಝುಲ್ಫಿ ಮಾಡಿದ ಮೋಸವೇ ಪಾಠ

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *