Breaking News

ಕಳ್ಳಬಟ್ಟಿ ರೇಡ್…ಆರೋಪಿಗೆ ಬೆನ್ನಟ್ಟಿದ ಪೋಲೀಸರು ,ಬಾವಿಗೆ ಬಿದ್ದು ಆರೋಪಿ ಸಾವು

ಬೆಳಗಾವಿ-
ಮಾಡಬಾರದ್ದನ್ನ ಮಾಡಿದ್ರೆ.. ಆಗಬಾರದ್ದು ಆಗುತ್ತೆ ಅನ್ನೊ ಹಾಗೆ ಜನರ ಜೀವ ಹಿಂಡುವ ಕಳ್ಳಬಟ್ಟಿ ಸರಾಯಿ ದಂಧೆಯಲ್ಲಿ ತೊಡಗಿದ್ದ ಯುವಕನೋರ್ವ ಅದೇ ಕಳ್ಳಬಟ್ಟಿ ದಂಧೆಯಿಂದ ಸಾವಿನ ಮನೆಯ ಕದ ತಟ್ಟಿದ್ದಾನೆ. ಬೆಳಗಿನ ಜಾವ ಟಾಯರ್ ಟ್ಯೂಬಿನಲ್ಲಿ ಕಳ್ಳಬಟ್ಟಿ ಸರಾಯಿ ಸಾಗಿಸುತ್ತಿದ್ದಾಗ ಅಬಕಾರಿ ಪೊಲೀಸರ ದಾಳಿಗೆ ಬೆಚ್ಚಿ, ತಪ್ಪಿಸಿಕೊಳ್ಳುವಾಗ ಕಾಣದ ಬಾವಿಗೆ ಬಿದ್ದು ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರು ಕೊಲೆ ಆರೋಪ ಮಾಡ್ತಿದಾರೆ.

ಜನರ ಜೀವ ಹಿಂಡುವ ಈ ಕಳ್ಳಬಟ್ಟಿ ದಂಧೆಯನ್ನ ಮಟ್ಟ ಹಾಕಲಿಕ್ಕೆ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನ ಅನುಸರಿಸಿದ್ರು, ಗಡಿನಾಡು ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ಇದನ್ನೆ ಕುಲ ಕಸುಬಾಗಿಸಿಕೊಂಡ ಬಹುತೇಕ ಕುಟುಂಬಗಳು ಮಾತ್ರ ಈ ದಂಧೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿವೆ. ಇಂದು ಸಹ ಅಕ್ರಮವಾಗಿ ಕಳ್ಳಬಟ್ಟಿ ಸಾಗಟ ಮಾಡುತ್ತಿದ್ದವರನ್ನ ಖಚಿತ ಮಾಹಿತಿ ಮೇರೆಗೆ ಬೆನ್ನಟ್ಟಿ ಅಬಕಾರಿ ಪೊಲೀಸರು ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಕತ್ತಲಲ್ಲಿ ಕಾಣದೇ ಬಾವಿಗೆ ಬಿದ್ದು ಅಡಿವೇಪ್ಪ ಎಂಬ 24 ವರ್ಷದ  ಯುವಕ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ. ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಯುವಕನ ಮನೆಯವ್ರು ಮತ್ತು ಗ್ರಾಮಸ್ಥರು ಮಾತ್ರ ಅಬಕಾರಿ ಪೊಲೀಸರೇ ಅಡಿವೇಪ್ಪನನ್ನ ಹೊಡೆದು ಕೊಂದಿದ್ದಾರೆಂಬ ಆರೋಪ ಮಾಡುತ್ತ, ಬೆಳಗಾವಿ ಅಬಕಾರಿ ವಾಹನ ಸೇರಿದಂತೆ ಕಚೇರಿಯನ್ನ ಜಖಂ ಮಾಡಿದರು. ನಂತರ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಇದೆ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಕೈಯಲ್ಲಿ ಕಲ್ಲನ್ನ ಹಿಡಿದು ಅಬಕಾರಿ ಇಲಾಖೆ ಮುತ್ತಿಗೆ ಹೊರಡುವಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ರು.

ಇನ್ನು ಮೃತ ಯುವಕ ಇಂದುಬೆಳಗಿನಜಾವ ಕಳ್ಳಭಟ್ಟಿ ತಗೆದುಕೊಂಡು ಹೋಗುವಾಗ ಅಬಕಾರಿ ಪೊಲೀಸರು ಸಿನಿಮಿಯ ರೀತಿಯಲ್ಲಿ ಬೆನ್ನಟ್ಟಿದ್ದಾಗ ಈ ಅವಘಡ ಸಂಭವಿಸಿದೆ. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಸೋನಟ್ಟಿ ಗ್ರಾಮದ ಜನರು ಅಡಿವೆಪ್ಪನನ್ನು ಕೊಲೆ ಮಾಡಿ ಅಬಕಾರಿ ಇಲಾಖೆಯವರು ಬಾವಿಗೆ ಹಾಕಿದ್ದಾರೆ ಎಂದುಆರೋಪಿಸುತ್ತಿದ್ದು, ಯುವಕನ ಸಂಬಂಧಿಕರು ಅಬಕಾರಿ ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಈ ವೇಳೆ ಏಕನಾಥ್ ಎಂಬ ಅಬಕಾರಿ ಪೊಲೀಸ್ ಮೇಲೆ ಹಲ್ಲೆ ಮಾಡಿ ಅಬಕಾರಿ ಪೊಲೀಸರ ಕಾರು ಜಖಂ ಮಾಡಿದ್ದಾರೆ. ಈ ಕುರಿತು ಅಬಕಾರಿ ಪೊಲೀಸರು ಕಳ್ಳಬಟ್ಟಿ ಸಾಗಾಟ ಮಾಡುತ್ತಿದ್ದ ಮೂವರ ವಿರುದ್ದ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಶವಾಗಾರಕ್ಕೆ ಬೇಟಿ ನೀಡಿದ ನಗರ ಡಿಸಿಪಿ ಸೀಮಾ ಲಾಟ್ಕರ್, ಯುವಕ ತಪ್ಪಿಸಿಕೊಂಡು ಹೋಗುವಾಗ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಕುರಿತು ಮೃತನ ಮನೆಯವ್ರು ಏನು ದೂರು ನೀಡಿದ್ರು ದಾಖಲಿಸಿಕೊಂಡು ತನಿಖೆ ನಡೆಸ್ತಿವಿ ಅಂದಿದ್ದಾರೆ

ಒಟ್ನಲ್ಲಿ ಬೆಳಗಾವಿ ಜಿಲ್ಲೆಯ ಕೆಲವೆಡೆ ಈ ಕರಾಳ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಸಂಬಂಧಪಟ್ಟವ್ರು ಕಳ್ಳಬಟ್ಟಿನೇ ಜೀವನ ಅಂದ್ಕೊಂಡವರ ಮನ ಪರಿವರ್ತನೆ ಮಾಡಿ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸೊ ಮೂಲಕ ಈ ದಂಧೆಗೆ ಕಡಿವಾಣ ಹಾಕಬೇಕಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *