ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆ ಮಹಾದಾಯಿ ಯೋಜನೆಯ ಅನುಷ್ಠಾನ, ರೈತರ ಸಾಲ ಮನ್ನಾ ಸೇರಿದಂತೆ ಹಲವಾರು ಬೇಡಿಕೆಗಳ ಇಡೇರಿಕೆ ಆಗ್ರಹಿಸಿ ರೈತ ಸಂಘ ಹಾಗು ಹಸಿರು ಸೇನೆ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸೆಪ್ಟೆಂಬರ್ ಎರಡು ಶುಕ್ರವಾರದಂದು ಒಂದು ವರ್ಷ ಪೂರ್ಣಗೊಳ್ಳಲಿದ್ದು ರೈತರು ವಿನೂತನವಾಗಿ ಪ್ರತಿಭಟಿಸಲಿದ್ದಾರೆ
ಶುಕ್ರವಾರದಂದು ರೈತರು ಪ್ರದಾನಿ ಹಾಗು ಮುಖ್ಯಮಂತ್ರಿಗಳ ಭಾವಚಿತ್ರಗಳಿಗೆ ತಿಪ್ಪೆ ಎಸೆದು ಬಾರಕೋಲ್ ಚಳವಳಿ ನಡೆಸಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ
ಈ ಕುರಿತು ಪೂರ್ವಭಾವಿ ಸಭೆ ನಡೆಸಿರುವ ರೈತ ಮುಖಂಡರು ಶುಕ್ರವಾರ ಹೋರಾಟಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನಲೆಯಲ್ಲಿ ವಿಭಿನ್ನ ಶೈಲಿಯಲ್ಲಿ ಪ್ರತಿಭಟಿಸಿ ಸಕಾರದ ಗಮನ ಸೆಳೆಯಲಿದ್ದಾರೆ
