ಬೆಳಗಾವಿ- ಸಾಲ ಮನ್ನಾ ಕಬ್ಬಿನ ಬಾಕಿ ಬಿಲ್ ಪಾವತಿ, ಕಬ್ಬಿನ ದರ ನಿಗದಿ,ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಡಿಸಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಅಹೋರಾತ್ರಿ ಮುಂದುವರೆದಿದ್ದು ರಾತ್ರಿಯ ಊಟ ಮುಗಿಸಿ ಈಗ ಬೆಳಗಿನ ಉಪಹಾರಕ್ಕೆ ಕಾಲಿಟ್ಟಿದೆ
ಬೆಳಗಾವಿ,ಬಾಗಲಕೋಟೆ ಮುಧೋಳ.ಜಮಖಂಡಿ,ವಿಜಯಪೂರ,ಮಂಡ್ಯ ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಬೆಳಗಾವಿಯ ಡಿಸಿ ಕಚೇರಿಯತ್ತ ದೌಡಾಯಿಸುತ್ತಿದ್ದಾರೆ ಭಜನೆ.ವಾದ್ಯಮೇಳಗಳ ಸದ್ದಿನೊಂದಿಗೆ ರೈತರು ಏಕ ಧ್ವನಿಯಲ್ಲಿ ಸರ್ಕಾರದ ವಿರುದ್ಧ ಅವಾಜ್ ಹಾಕುತ್ತಿದ್ದಾರೆ
ಕಳೆದ ಒಂದು ತಿಂಗಳಿನಿಂದ ಕಬ್ಬು ಬೆಳೆಗಾರರ ಹೋರಾಟ ನಿರಂತರವಾಗಿ ನಡೆಯುತ್ತಿದೆ ಸಿಎಂ ಕುಮಾರಸ್ವಾಮಿ ರೈತ ನಾಯಕರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಸಂದಾನ ನಡೆಸಿದ್ರೂ ಸಂದಾನ ವಿಫಲವಾಗಿತ್ತು ಡಿಕೆ ಶಿವಕುಮಾರ್ ನಡೆಸಿದ ಸಂದಾನ ಸಫಲವಾಗಿ ರೈತರು ಪ್ರತಿಭಟನೆ ಕೈಬಿಟ್ಟರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎನ್ನುವದು ರೈತರ ಆಕ್ರೋಶವಾಗಿದೆ
ಈಗ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ ರೈತರಿಂದ ವಿನೂತನ ಪ್ರತಿಭಟನೆ ಆರಂಭವಾಗಿದೆ ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನಾ ನಿರತ ರೈತರಿಂದ ದೀಡ ನಮಸ್ಕಾರ.ಹಾಕಿ ಸರ್ಕಾರಕ್ಕೆ ದಿಕ್ಕಾರ ಹಾಕಲಾಗುತ್ತಿದೆ ರೈತರು ಬೆಳಗಾವಿ ಡಿಸಿ ಕಚೇರಿಯಿಂದ ಚೆನ್ನಮ್ಮ ವೃತ್ತದ ವರೆಗೂ ದೀಡ ನಮಸ್ಕಾರ.ಹಾಕುವ ಪ್ರತಿಭಟನೆ ಮುಂದುವರೆಸಿದ್ದಾರೆ
ಐದು ಜನರ ರೈತರಿಂದ ದೀಡ ನಮಸ್ಕಾರ ಹಾಕಿ ಆಕ್ರೋಶ. ವ್ಯಕ್ತಪಡಿಸಲಾಗುತ್ತಿದೆ
ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವಂತೆ ರೈತರ ಆಗ್ರಹಪಡಿಸಲಾಗಿದೆ