Breaking News

ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ- ಯಡಿಯೂರಪ್ಪ

ಬೆಳಗಾವಿ-ಬಿಜೆಪಿ ೫ ತಂಡಗಳನ್ನ ಮಾಡಿ ಬರಗಾಲದ ಬಗ್ಗೆ ಬರವಿಕ್ಷಣೆ ಮಾಡಿದೆ ನೂರು ತಾಲ್ಲೂಕುಗಳಲ್ಲಿ ಬರಗಾಲವಿದೆ ರಾಜ್ಯದಲ್ಲಿರುವ ರೈತ ವಿರೋಧಿ ಸರ್ಕಾರದ ಯಾವ ಮಂತ್ರಿಯೂ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ಕೊಟ್ಟಿಲ್ಲ ಸಿಎಂ ಕುಮಾರಸ್ವಾಮಿ ಅವರಿಗೆ ಒಂದು ಕ್ಷಣವೂ ನೈತಿಕತೆ ಇಲ್ಲ ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ

ಬೆಳಗಾವಿಯಲ್ಲಿ ನಾಳೆ ಬಿಜೆಪಿ ರೈತ ಯಾತ್ರೆ ಹಮ್ಮಿಕೊಂಡಿದ್ದು ಇದರ ಸ್ಥಳ ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಿ ಎಂ ಕುಮಾರಸ್ವಾಮಿ ಅವರು ಬಿಜೆಪಿ, ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಮಾದ್ಯಮ ಪ್ರತಿನಿದಿಗಳ ಬಗ್ಗೆ ಹಗುರವಾಗ ಮಾತನಾಡಿದ್ದಾರೆ, ರೈತ ಹೋರಾಟಗಾರರಿಗೆ ಗೂಂಡಾಗಳು ಎಂದು ಕರೆದಿದ್ದಾರೆ ದೋಸ್ತಿ ಸರಕಾರದ ವಿರುದ್ಧ ರಣತಂತ್ರ ರೂಪಿಸಿದ್ದೆವೆ. ಅದಿಕಾರವನ್ನು ಬಿಟ್ಟು ತೊಲಗಿ ಎಂಬ ಉದ್ದೆಶದಿಂದ ನಾಳೆ ಬೃಹತ್ ಸಮಾವೇಶವನ್ನು ಹಮ್ಮಿಕ್ಕೊಂಡಿದ್ದೇವೆ ಈ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ವು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು

ಕುಮಾರ ಸ್ವಾಮಿ ಸರಕಾರದ ಸಚಿವರುಗಳು ಯಾವುದೆ ಕ್ಷೆತ್ರಕ್ಕೆ ಬೆಟಿ ನಿಡದೆ ನಿರ್ಲಕ್ಷ ಮಾಡಿದೆ..
ರಾಜ್ಯದ ರೈತರ ಜ್ವಲಂತ ಸಮಸ್ಯಗಳ ಬಗ್ಗೆ ನಾವು ಚರ್ಚೆ ಮಾಡಲಿದ್ದೆವೆ,
ಸಮಾವೇಶದಲ್ಲಿ ಸರಕಾರದ ಗಮನವನ್ನ. ಸೆಳೆಯಲಿದ್ದೆವೆ.. ಯರಗಟ್ಟಿಯಲ್ಲಿ ೬ ಜನ ರೈತ ಮಹಿಳೆಯರು ಸತ್ತರೆ ಪರಿಹಾರವನ್ನ ನಿಡಿಲ್ಲ, ಬದಲಾಗಿ ಮಂಡ್ಯದಲ್ಲಿ ೩೦ ಜನರ ದುರ್ಮಣಕ್ಕೆ ಪರಿಹಾರ ನಿಡಿದ್ದಾರೆ.. ಇಷ್ಟರ ಮೆಲೆ ಗೊತ್ತಾಗುತ್ತೆ ಉತ್ತರ ಕರ್ನಾಟಕ್ಕೆ ಯಾವ ರೀತಿ ಮಲತಾಯಿ ದೊರಣೆ ತೋರಿದ್ದಾರೆ ಎಂಬುದು

ಮಂಡ್ಯದಲ್ಲಿ ಬತ್ತ ಕಟಾವು ಮಾಡಿದ್ದು ಕೆವಲ ಶೋಕೊಸ್ಕರ…ಎಂದು ಸಿ ಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಅವರು ಸಿ ಎಂ ಕುಮಾರಸ್ವಾಮಿ ಅವರು ಎಲ್ಲವನ್ನು ಬಿಟ್ಟು ನಿಂತಿದ್ದಾರೆ.. ಕೆವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿಮಿತವಾಗಿದ್ದಾರೆ
ಸುಳ್ಳು ಭರವಸೆಯನ್ನ ಕೊಡುತ್ತಿದ್ದಾರೆ ಸಿ ಎಂ ಕುಮಾರಸ್ವಾಮಿ ಅವರಿಗೆ ರೈತರ ಹಿಡಿಶಾಪ ತಟ್ಟುತ್ತದೆ ಎಂದರು

ದೊಡ್ಡ ಪ್ರಮಾಣದಲ್ಲಿ ರೈತರು ಸೇರಬೇಕು ಎಂದು ರೈತರಿಗೆ ಮನವಿ ಮಾಡಿದ ಬಿ ಎಸ್ ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು

Check Also

ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ

ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 …

Leave a Reply

Your email address will not be published. Required fields are marked *