ಬೆಳಗಾವಿ- ಬೆಳಗಾವಿಯ ಹಳೇಯ ಗಾಂಧೀ ನಗರದಲ್ಲಿರುವ ಮನೆಯೊಂದು ಹೈ ವೋಲ್ಟೇಜ್ ನಿಂದಾಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಮನೆಯಲ್ಲಿನ ಎಲ್ಲ ಸಾಮುಗ್ರಿಗಳು ಬೆಂಕಿಗಾಹುತಿಯಾಗಿವೆ
ಹಳೆಯ ಗಾಂಧಿನಗರದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು ಜಾಂಬಳೆ ಕುಟುಂಬಕ್ಕೆ ಸೇರಿದ ಈ ಮನೆಯಲ್ಲಿ ಬುಧವಾರ ಮದ್ಯರಾತ್ರಿ ಶಾರ್ಟ ಸರ್ಕ್ಯುಟ್ ನಿಂದಾಗಿ ಮನೆಗೆ ಬೆಂಕಿ ತಗಲಿ ಮನೆಯಲ್ಲಿ ಬೆಂಕಿ ವ್ಯಾಪಿಸಿದಾಗ ನಿದ್ರೆಗೆ ಜಾರಿದ್ದ ಜಾಂಬಳೆ ಕುಟುಂಬ ತಕ್ಷಣ ಎಚ್ಚರವಾಗಿ ಮನೆಯಲ್ಲಿದ್ದ ಎರಡು ತುಂಬಿದ ಸಿಲೆಂಡರ್ ಗಳನ್ನು ಮನೆಯಿಂದ ಹೊರಗೆ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದೆ
ಅಷ್ಟರಲ್ಲಿ ಮನೆಯಲ್ಲಿದ್ದ ಬಟ್ಟೆ,ಟಿವ್ಹಿ,ಪ್ರಿಡ್ಜು,ಸೇರಿದಂತೆ ಮನೆಯಲ್ಲಿದ್ದ ಎಲ್ಲ ಸಾಮುಗ್ರಿಗಳು ಸುಟ್ಟು ಭಸ್ಮವಾಗಿವೆ. ರಾತ್ರಿ ಹನ್ನೆರಡು ಘಂಟೆಗೆ ಹೊತ್ತಿದ ಬೆಂಕಿ ಬೆಳಗಿನ ಜಾವದವರೆಗೂ ಹೊತ್ತಿ ಉರಿದಿದೆ.
ಬೆಂಕಿ ಆವಘಡದಿಂದಾಗಿ ಹಳೆಯ ಗಾಂಧೀ ನಗರದಲ್ಲಿ ಇಡೀ ರಾತ್ರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ನಂತರ ಆಗಮಿಸಿದ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದವು
ಬೆಂಕಿಗಾಹುತಿಯಾದ ಈ ಮನೆಯಲ್ಲಿ ಪರಶರಾಮ ಪೀರಾಜಿ ಜಾಂಬಳೆ,ಅರುಣ ಅಪ್ಪಾಜಿ ಜಾಂಬಳೆ,ಶೋಭಾ ಪ್ರಕಾಶ ಜಾಂಬಳೆ ,ಮೂರು ಕುಟುಂಬಗಳು ವಾಸವಾಗಿದ್ದರು ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಮುಗ್ರಿಗಳು ಭಸ್ಮವಾಗಿದ್ದು ಮೂರು ಕುಟುಂಬಗಳು ಬೀದಿ ಪಾಲಾಗಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ