Breaking News

ನಿರ್ಗಮನ ಪಥ ಸಂಚಲನದಲ್ಲಿಯೂ ಕನ್ನಡದಲ್ಲಿಯೇ ಕಮಾಂಡ್…

ಬೆಳಗಾವಿ: ಮಹಿಳಾ ನೂತನ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ಬೆಳಿಗ್ಗೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು.

ಐಜಿಪಿ ಡಾ. ರಾಮಚಂದ್ರರಾವ, ಕಮಿಷ್ನರ್ ಟಿ. ಜೆ. ಕೃಷ್ಣಭಟ್, ಎಸ್ ಪಿ ಡಾ. ರವಿಕಾಂತೇಗೌಡ, ಪ್ರಾಚಾರ್ಯ ಹಾಗೂ ಎಎಸ್ ಪಿ ರವೀಂದ್ರ ಗಡಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಜಿಪಿ ಡಾ. ಕೆ. ರಾಮಚಂದ್ರರಾವ್ಮಾತನಾಡಿ ಬೆಳಗಾವಿಯಲ್ಲಿ ಬಹಳ ಶಿಸ್ತಿನ ಮಹಿಳಾ ನಿರ್ಗಮನ ಪಥಸಂಚಲನ ನಡೆದಿದೆ ಎಂದು ಐಜಿಪಿ ಡಾ. ರಾಮಚಂದ್ರರಾವ ಅಭಿನಂದಿಸಿದರು.

ತಾತ್ಕಾಲಿಕ ಪೊಲೀಸ್ ತರಬೇತಿ ಕೇಂದ್ರ ಬೆಳಗಾವಿಯ ೧೫ ನೇ ಬ್ಯಾಚ್ ನ ನಿರ್ಗಮನ ಪಥಸಂಚಲನ ಇದಾಗಿದ್ದು ನಾಗರಿಕ  ಜನಜೀವನದ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಕೆಲಸ ಬಹಳವಿದೆ. ಬ್ರೀಟೀಷರಿಲ್ಲದ ಸ್ವತಂತ್ರ ಭಾರತದಲ್ಲಿ ನಾವೆಲ್ಲ ನಮ್ಮ ಸಾಂಸ್ಕತಿಕ ಭಿನ್ನತೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಹಿಂದಿ ಇಂಗ್ಲೀಷ್ ಏತರ ಕನ್ನಡದಲ್ಲಿ ಪರೇಡ್ ಕಮಾಂಡ್ ನೀಡುವ ಹೊಸ ಪದ್ಧತಿ ಅಭಿನಂದನಾರ್ಹ ಎಂದರು. ಪೊಲೀಸ್ ಕೆಲಸಕ್ಕೆ ಅತ್ಯುನ್ನತ ಪದವಿ ಪಡೆದ ಸಿಬ್ಬಂಧಿಯಾಗಿ ಇಲಾಖೆಗೆ ಬಂದಿರುವುದು ಬಹಳ ಸಂತಸ ತಂದಿದೆ. ಟ್ರೇನಿಂಗ್ ಈಜ್ ನಥಿಂಗ್ ಬಟ್ ಇಂಪ್ರೂವಮೆಂಟ್ ಆಫ್ ಓವರ್ ಆಲ್ ಹ್ಯೂಮನ ಸ್ಕಿಲ್ ಎಂದರು.

ಸಮಾಜದಲ್ಲಿ ನಿಷ್ಠೆ ದಕ್ಷತೆಯಿಂದ ಕೆಲಸ ಮಾಡಬೇಕು ಬಹಳಷ್ಟು ಜನ ಪ್ರಶಿಕ್ಷಣಾರ್ಥಿಗಳು ಪಧವಿಧರರಾಗಿದ್ದು ತಮ್ಮಲ್ಲಿರು ಜ್ಞಾನವನ್ನು ಉಪಯೋಗಿಸಿಕೊಂಡು ಪ್ರಮಾಣಿಕ ಸೇವೆ ಮಾಡಬೇಕು ಎಂದು ಕರೆ ನೀಡಿದರು ಇದಕ್ಕು ಮೊದಲ ತರಬೇತಿಯ ಸಂಧರ್ಭದಲ್ಲಿ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ಥಿಫಲಕ ನೀಡಿ ಗೌರವಿಸಲಾಯಿತು

ಬೆಂಗಳೂರು ಸಂಚಾರ ಪೂರ್ವ ವಿಭಾಗದ ಕುಮಾರಿ ಶಿಲ್ಪಾ ವಿ ಅವರು ಸರ್ವ ಶ್ರೇಷ್ಠ ಪ್ರಶಿಕ್ಷಣಾರ್ಥಿಯಾಗಿ ವಿಜೇತರಾದರು ಐಜಿಪಿ ರಾಮಚಂದ್ರ ರಾವ ಅವರು ತರಬೇತಿಯ ಸಂಧರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ಥಿ ಫಲಕ ನೀಡಿ ಗೌರವಿಸಿದರು

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.