ಬೆಳಗಾವಿ- ಕಿತ್ತೂರು ಸಮೀಪದ ಕುಲ್ಲಹಳ್ಳಿ ಜಂಗಲ್ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ತಲೆಮರಿಸಿಕೊಂಡಿದ್ದ ಬೇಟೆಗಾರನ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಳಗಾವಿಯ ಅಶೋಕ ನಗರದಲ್ಲಿ ಮೆಹಮೂದ್ ಅಲಿ ಖಾನ್ (50) ವರ್ಷದ ಬೇಟೆಗಾರನ ಮನೆಗೆ ದಾಳಿ ಮಾಡಿರುವ ಅರಣ್ಯ ಅಧಿಕಾರಿಗಳು ಬೇಟೆ ಆಡಲು ಬಳಿಸುವ ರೈಫಲ್,ಜೀವಂತ ಗುಂಡು,ಚಾಕೂ,ಚೂರಿ,ಟಾರ್ಚ್..ವಾಕಿ ಟಾಕಿ,ಮತ್ತು ದುರ್ಬಿನ್,ಮತ್ತು ವಾಹನಕ್ಕೆ ಅಳವಡಿಸುವ ಸರ್ಚ ಲೈಟ್ ,ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಇಂದು ಬೆಳಗ್ಗೆ ಬೇಟೆಗಾರನ ಮನೆಯಲ್ಲೇ ಅರಣ್ಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಇತ್ತೀಚಿಕೆ ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಮಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು,ಇಬ್ಬರು ಚಾಲಾಕಿ ಗಿರಾಕಿಗಳು ತಲೆಮರಿಸಿಕೊಂಡಿದ್ದರು,ನಾಗರಗಾಳಿ,ಮತ್ತು ಬೆಳಗಾವಿ ಉಪ ವಿಭಾಗದ ಅರಣ್ಯಾಧಿಕಾರಿಗಳು ಇಂದು ರೇಡ್ ಮಾಡಿ ಜಂಗಲ್ ನಲ್ಲಿ ಬೇಟೆಯಾಡುತ್ತಿದ್ದ ಬೇಟೆಗಾರ ಮೆಹಮೂದ್ ಅಲಿ ಖಾನ್ ಅರಣ್ಯ ಅಧಿಕಾರಿಗಳ ಕಣ್ಣು ತಪ್ಪಸಿ ಓಡಿ ಹೋಗಿದ್ದಾನೆ..ಬೇಟೆಯಾಡಲು ಆತ ಉಪಯೋಗಿಸುತ್ತಿದ್ದ ಸಾಮಾನುಗಳು ಮಾತ್ರ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿವೆ. ಬೇಟೆಗಾರ ಇವತ್ತೂ ಪರಾರಿಯಾಗಿದ್ದು ವಿಶೇಷ…
ಮೆಹಮೂದ್ ಅಲಿಖಾನ್ ಎಂಬ ಬೇಟೆಗಾರ ಜಿಂಕೆ ಬೇಟೆಯಾಡುವಾಗಲೂ ಅರಣ್ಯ ಅಧಿಕಾರಿಗಳಿಗೆ ಸಿಗಲಿಲ್ಲ,ಇವತ್ತೂ ಸಿಗಲಿಲ್ಲ,ಬೇಟೆಗಾರನನ್ನು ಬಂಧಿಸುವಲ್ಲಿ ಅಂದು ವಿಫಲವಾಗಿದ್ದ ಅರಣ್ಯ ಅಧಿಕಾರಿಗಳು ಇಂದೂ ವಿಫಲರಾಗಿದ್ದಾರೆ.