ಬೆಳಗಾವಿ- ಬೆಳಗಾವಿಯ ಹೆಮ್ಮೆಯ ಸಂಸ್ಥೆ KLE ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಅಂಜುಮನ್ ಸಂಸ್ಥೆಯ ಸಹಯೋಗದಲ್ಲಿ ಅಂಜನ್ ಹಾಲ್ ನಲ್ಲಿ ಶನಿವಾರ ಬೃಹತ್ತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾಜು ಸೇಠ ತಿಳಿಸಿದ್ದಾರೆ
ಶನಿವಾರ ಬೆಳಿಗ್ಗೆ ೮ ಘಂಟೆಯಿಂದ ಮಧ್ಯಾಹ್ನ ಮೂರು ಘಂಟೆಯವರೆಗೆ ಶಿಬಿರ ನಡೆಯಲಿದ್ದು ಎರಡು ನೂರಕ್ಕು ಹೆಚ್ಚು ವೈಧ್ಯರು ಶಿಬಿರದಲ್ಲಿ ಎಲ್ಲ ರೀತಿಯ ಕಾಯಿಲೆಗಳನ್ನು ತಪಾಸಣೆ ಮಾಡಲಿದ್ದಾರೆ ಬಿಪಿ ಶುಗರ ಅಸ್ತಮಾ ಬೆನ್ನು ನೋವು ಎಲಬು ಕೀಲುಗಳ ತಪಾಸಣೆ ಹಾಗು ದಂತ ತಪಾಸಣೆ ಸೇರಿದಂತೆ ಎಲ್ಲ ರೀತಿಯ ತಪಾಸಣೆ ಮಾಡಲಾಗುತ್ತಿದೆ
ಶನಿವಾರ ನಡೆಯಲಿರುವ ಆರೋಗ್ಯ ಶಿಬಿರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಲಾಭ ಪಡೆಯಲು ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ
ಬೆಳಿಗ್ಗೆ ೮ ಘಂಟೆಗೆ ಶಾಸಕ ಫಿರೋಜ ಸೇಠ ಅವರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ