ಬೆಳಗಾವಿ- ಇಂದು ಗುರು ಪೂರ್ಣಿಮೆ ಗುರುವನ್ನು ಅರಿವಿನ ಸಾಗರ ಸರ್ವರ ಹಿತ ಬಯಸುವ ಗುರುವನ್ನು ಸ್ಮರಿಸುವ ಮಹತ್ವದ ದಿನ ಜೊತೆಗೆ ಕುಂದಾನಗರಿ ಬೆಳಗಾವಿಯನ್ನು ಹಸಿರು ಮಾಡಲು ಸಂಕಲ್ಪ ಮಾಡಿದ ದಿನವೂ ಕೂಡ
ಇಂದು ಬೆಳಗಾವಿಯಲ್ಲಿ ಹಲವಡೆ ಗುರು ಪೂರ್ಣಿಮೆ ನಿಮಿತ್ಯ ಕೆಲವರು ತಮ್ಮ ಗುರುಗಳನ್ನು ಸ್ಮರಿಸುವ ಕಾರ್ಯದಲ್ಲಿ ತೊಡಗಿದ್ದರೆ ಇನ್ನು ಕೆಲವರು ತಮ್ಮ ತಮ್ಮ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳಗಾವಿ ನಗರವನ್ನು ಹಸಿರು ಮಾಡುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ
ಬೆಳಗಾವಿ ನಗರದ ಹನುಮಾನ ನಗರ,ಮಹಾಂತೇಶ ನಗರ ಕುಮಾರಸ್ವಾಮಿ ಲೇಔಟ್,ಆಂಜನೇಯ ನಗರ ಸೇರಿದಂತೆ ನಗರದ ಎಲ್ಲ ಪ್ರದೇಶಗಳಲ್ಲಿ ಸಸಿ ನೆಡುವ ದೃಶ್ಯಗಳು ಸಾಮಾನ್ಯವಾಗಿದೆ
ಅರಣ್ಯ ಇಲಾಖೆ,ಬೆಳಗಾವಿ ಮಹಾನಗರ ಪಾಲಿಕೆ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಯ ಸಹಯೋಗದಲ್ಲಿ ನಡೆಯುತ್ತಿರುವ ಹಸಿರು ಬೆಳಗಾವಿ ಅಭಿಯಾನದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಜೊತೆಗೆ ನೂರಾರು ಸಂಘಟನೆಗಳು ಕೈಜೋಡಿಸಿ ನಗರದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದ್ದು ಅವುಗಳನ್ನು ಪಾಲನೆ ಪೋಷಣೆ ಮಾಡುವ ಸಂಕಲ್ಪವನ್ನು ಬೆಳಗಾವಿಯ ನಡುವೆ ನಿವಾಸಿಗಳು ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ
ಅರಣ್ಯ ಇಲಾಖೆ ಉಚಿತವಾಗಿ ಒಂದು ದಿನ ಮೊದಲೇ ಸಾವಿರಾರು ಸಸಿಗಳನ್ನು ವಿತರಿಸಿದ್ದು ಒಂದೇ ದಿನದಲ್ಲಿ ಐವತ್ತು ಸಾವಿರ ಸಸಿಗಳನ್ನು ನೆಡುವ ಸಂಕಲ್ಪ ಮಾಡಲಾಗಿದ್ದು ಇಂದು ಸುರ್ಯೋದಯದ ನಂತರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ದೊರೆತಿದೆ
ಸಂಜೆ ಹೊತ್ತಿಗೆ ಐವತ್ತು ಸಾವಿರ ಸಸಿಗಳು ಬೆಳಗಾವಿ ನಗರದ ನೆಲದಲ್ಲಿ ಬೇರುಗಳನ್ನು ಬಿಟ್ಟು ನಗರವನ್ನು ಹಸಿರು ಮಾಡಲಿವೆ