Breaking News
Home / Breaking News / ಪೋಲೀಸರಿಂದ ನಝೀರ್ ನದಾಫ ವಿಚಾರಣೆ.

ಪೋಲೀಸರಿಂದ ನಝೀರ್ ನದಾಫ ವಿಚಾರಣೆ.

ಪೋಲೀಸರಿಂದ ನಝೀರ್ ನದಾಫ ವಿಚಾರಣೆ,ಆಪರೇಶನ್ ಮಲಬಾರಿ ಆರಂಭ

ಬೆಳಗಾವಿ- ಭೂಗತ ಪಾತಕಿ ರಶೀದ ಮಲಬಾರಿ ಬಲಗೈ ಬಂಟ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ನಜೀರ್ ನದಾಫ ಸೇರಿದಂತೆ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡ ಎಪಿಎಂಸಿ ಪೋಲೀಸರು ತೀವ್ರ ವಿಚಾರಣೆಯ ಒಳಪಡಿಸಿ ಮತ್ತೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ

ಶುಕ್ರವಾರ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡ ಎಪಿಎಂಸಿ ಪೋಲೀಸರು ನಜೀರ್ ನಧಾಪನನ್ನು ತೀವ್ರ ವಿಚಾರಣೆಗೊಳಪಡಿಸಿ ಭೂಗತ ಪಾತಕಿ ರಶೀದ ಮಲಬಾರಿಯ ಚಲನ ವಲನ ಮತ್ತು ಆತನ ಚಟುವಟಿಕೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ರಶೀದ ಮಲಬಾರಿ ಯನ್ನು ಭೇಟಿಯಾಗಲು ಯಾರ್ಯಾರು ಬರ್ತಾ ಇದ್ರು .ಆತನ ಕುಟುಂಬದವರ ಬಗ್ಗೆ ಪೋಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ
ನಜೀರ್ ನದಾಫ ಸೇರಿದಂತೆ ಮೂವರನ್ನು ಎರಡು ದಿನಗಳ ಕಾಲ ತೀವ್ರ ವಿಚಾರಣೆ ಮಾಡಿ ಶನಿವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ
ಭೂಗತ ಪಾತಕಿ ರಶೀದ ಮಲಬಾರಿ ಬೇಟೆಗೆ ಪೋಲೀಸರು ಕಾರ್ಯಾಚರಣೆ ಚುರುಕು ಗೊಳಿಸಿದ್ದು ಮಲಬಾರಿ ಗ್ಯಾಂಗ್ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿ ಪಾತಕಿಯನ್ನು ಬಲೆಗೆ ಬೀಳಿಸಲು ಬೆಳಗಾವಿ ಪೋಲೀಸರು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *