ಬೆಳಗಾವಿ- ಬೆಳಗಾವಿ ಬೆಳಗಾವಿಯಲ್ಲಿ ಯಾವ ರೀತಿ ಗಣೇಶ ಉತ್ಸವ ಯಾವ ರೀತಿ ನಡೆಯುತ್ತದೆಯೋ ದೇಶದ ಯಾವ ಭಾಗದಲ್ಲೂ ಆ ರೀತಿ ಉತ್ಸವ ನಡೆಯೋದಿಲ್ಲ
ಯಾಕಂದ್ರೆ ಮಹಾರಾಷ್ಟ್ರದ ಪಕ್ಕದಲ್ಲಿರುವ ಬೆಳಗಾವಿ ಮಹಾನಗರದಲ್ಲಿ ಅತ್ಯಂತ ಅದ್ದೂರಿಯಾಗಿ ಉತ್ಸವ ಆಚರಿಸುತ್ತಾರೆ ಅದು ಮಹಾರಾಷ್ಟ್ರದ ಜನರಿಗೂ ಗೊತ್ತು ಇಲ್ಲಿಯ ಗಣೇಶ ವಿಸರ್ಜನೆ ಅಹೋರಾತ್ರಿ 40 ಗಂಟೆಗಳಗಳ ಕಾಲ ನಡೆಯುತ್ತದೆ.
ಪ್ರತಿ ವರ್ಷ ಯಾವ ಸಮಯಕ್ಕೆ ಗಣೇಶ ವಿಸರ್ಜನೆ ಆರಂಭ ವಾಗುತ್ತಿತ್ತೋ ಈ ವರ್ಷ ಆ ಸಮಯಕ್ಕೆ ಗಣೇಶ ವಿಸರ್ಜನೆ ಮುಗಿದಿದ್ದು ಬೆಳಗಾವಿಯ ಹೊಸ ಇತಿಹಾಸ.
ಬೆಳಗಾವಿಯ ಹುತಾತ್ಮ ಚೌಕನಲ್ಲಿ ಸಂಜೆ ಆರು ಗಂಟೆಗೆ ಗಣೇಶ ವಿಸರ್ಜನೆ ಆರಂಭವಾಗಿ ಮಾರನೇಯ ದಿನ ಸಂಜೆ ಮುಗಿಯುತ್ತಿತ್ತು ಆದ್ರೆ ಈ ವರ್ಷ ಇವತ್ತು ಬೆಳಿಗ್ಗೆ ಆರಂಭವಾಗಿ ಸಂಜೆ ಹೊತ್ತು ಆರಂಭವಾಗಿ ಸಾರ್ವಜನಿಕ ಗಣೇಶ ವಿಸರ್ಜನೆ ಮುಗಿಯುವ ಹೊಸ್ತಿಲಲ್ಲಿದೆ.
ಬೆಳಗಾವಿ ಯಲ್ಲಿ ಪ್ರತಿ ವರ್ಷ ಅಭೂತಪೂರ್ವ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತದೆ ಇಡೀ ರಾತ್ರಿ ಗಣೇಶ ವಿಸರ್ಜನೆ ಜಾತ್ರೆ ನಡೆಯುತ್ತದೆ ಆದ್ರೆ ಈ ವರ್ಷ ಮೆರವಣಿಗೆ ನಡೆಯಲಿಲ್ಲ,ಗಣೇಶ ಮಂಡಳದ ಯುವಕರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದರು.ಅದ್ದೂರಿ ಇಲ್ಲದಿದ್ದರೂ ಭಕ್ತಿಪೂರ್ವಕವಾಗಿ ವಿಘ್ನೇಶ್ವರನಿಗೆ ವಿದಾಯ ಹೇಳಿದರು
ಬೆಳಗಾವಿ ಮಹಾನಗ ಪಾಲಿಕೆ ಆಯುಕ್ತ ಜಗದೀಶ ಇಂದು ಮೋಬೈಲ್ ಹೊಂಡಗಳನ್ನು ಎಲ್ಲ ಪ್ರದೇಶಗಳಿಗೂ ಕಳುಹಿಸಿ ಇವತ್ತು ಬೆಳಗಾವಿ ಪಾಲಿಕೆ ಆಯುಕ್ತ ಜಗದೀಶ ಭಕ್ತರ ಪಾಲಿನ ಜೈ ಜಗದೀಶವಾದರು
ಈ ವರ್ಷ ಸಂಪ್ರದಾಯಿಕ ವಾದ್ಯಗಳು ಇರಲಿಲ್ಲ,ಪಟಾಕಿಕಳ ಸದ್ದು ಜೋರಾಗಿ ಕೇಳಲಿಲ್ಲ,ಮೆರವಣಿಗೆ ಹೊರಡಲಿಲ್ಲ,ಡಾಲ್ಬೀ ಕಾಣಿಸಲಿಲ್ಲ,ಜನ ಸೇರದಿದ್ದರೂ ಬೆಳಗಾವಿಯಲ್ಲಿ ಭಕ್ತಿಗೆ ಕೊರತೆ ಇರಲಿಲ್ಲ.