Breaking News

ಇಂದು ನಾರಾಯಣಗೌಡ್ರು ಬೆಳಗಾವಿಗೆ,ಪೀರಣವಾಡಿಗೆ

ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆ      ರಾಜ್ಯಾಧ್ಯಕ್ಷರಾದ ಟಿ.ಎ ನಾರಾಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಮಧ್ಯಾಹ್ನ 1-00 ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ಅವರು, ಪೀರನವಾಡಿಯ ಛತ್ರಪತಿ ಶಿವಾಜಿ ಮಹಾರಾಜ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಿದ್ದಾರೆ.

ಮದ್ಯಾಹ್ನ 1-00 ಗಂಟೆಗೆ ಬೆಳಗಾವಿಗೆ ಆಗಮಿಸುವ ಅವರು ಮದ್ಯಾಹ್ನ 2-00 ಗಂಟೆಗೆ ಪೀರನವಾಡಿಯಲ್ಲಿ ಇಬ್ಬರೂ ಮಹಾಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.

ಈ ಸಂಧರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು,ಕನ್ನಡದ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಮದ್ಯಾಹ್ನ 1-30 ಬೆಳಗಾವಿಯ ಚನ್ನಮ್ಮ ವೃತ್ತ ದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ,ನಾರಾಯಣ ಗೌಡ್ರು,ನೂರಾರು ಕಾರ್ಯಕರ್ತರ ಜೊತೆ ಪೀರನವಾಡಿಗೆ ತೆರಳಲಿದ್ದಾರೆ.ಎಂದು ತಿಳಿದು ಬಂದಿದೆ.

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.ನಾನು ಆಂಕಾಂಕ್ಷಿಯೂ ಅಲ್ಲ,ಸ್ಪರ್ದೆಯೂ ಮಾಡೋದಿಲ್ಲ…

ಬೆಳಗಾವಿ-ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ …

Leave a Reply

Your email address will not be published. Required fields are marked *