ಭಕ್ತಿ ಭಾವದ ಹೊಳೆಯಲ್ಲಿ ತೇಲಿ ಬಂದ.. ಪಾರ್ವತಿ ಕಂದ..!

ಬೆಳಗಾವಿ 05: ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ವಿಘ್ನ ನಿವಾರಕನಿಗೆ ಸಡಗರ ಸಂಬ್ರಮದಿಂದ ಸ್ವಾಗತಿಸಲಾಯಿತು. ಭಕ್ತಿ ಭಾವದ ಹೊಳೆಯಲ್ಲಿ ಪಾರ್ವತಿ ಕಂದ ತೇಲಿ ಬಂದ. ಭಕ್ತಾದಿಗಳು ಭಕ್ತಿ ಭಾವದ ಜಯಘೊಷಗಳೊಂದಿಗೆ ಶ್ರೀ ಗಣೇಶನನ್ನು ಸ್ವಾಗತಿಸಿದರು.
ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಗನಪತಿ ಬಪ್ಪಾ ಮೋರಯಾ ಎಂಬ ಜಯಘೋಷಗಳೊಂದಿಗೆ ಸಿಡಿಮದ್ದಿನ ಅರ್ಭಟದೊಂದಿಗೆ ಸಂಪ್ರದಾಯಕ ವಾದ್ಯಗಳ ನೀನಾದದೊಂದಿಗೆ ಗಣೇಶನನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಒಟ್ಟಾರೆ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಗಣೇಶಮಯವಾಗಿತ್ತು. ಸಾರ್ವಜನಿಕ ಗಣೇಶ ಮಂಡಳಗಳು ವಿನಾಯಕನನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಮಹಾರಾಷ್ಟ್ರದ ಪೂಣೆಯ ನಂತರ ಬೆಳಗಾವಿ ನಗರದಲ್ಲಿ ಅದ್ದೂರಿಯಾಗಿ ಗಣೇಶ ಉತ್ಸವವನ್ನು ಆಚರಿಸಲಾಗುತ್ತಿದೆ. ಬೆಳಗಾವಿ ನಗರದಲ್ಲಿ 300 ಕ್ಕೂ ಹೆಚ್ಚು ಗಣೇಶ ಮಂಡಳಗಳು ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಆರಾಧಿಸುತ್ತಾರೆ.
ವಿವಿಧ ಮಂಡಳಗಳು ಧಾರ್ಮಿಕ ಹಾಗೂ ಸಾಮಾಜಿಕ ಸಮ್ದೇಶ ಸಾರುವ ವಿವಿಧ ಬಗೆಯ ಮಂಟಪಗಳನ್ನು ಸಿದ್ಧಪಡಿಸಲಾಗಿದೆ.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *