Breaking News

ಗಣಪತಿ ಹಬ್ಬಕ್ಕೆ ಬೆಳಗಾವಿಯಲ್ಲಿ ನಡೆದಿದೆ ಭರ್ಜರಿ ತಯಾರಿ….

ಬೆಳಗಾವಿ- ಇಂದಿನಿಂದ ಶ್ರಾವಣ ಮಾಸ ಶುರುವಾಗಿದೆ.ಎಲ್ಲರೂ ಭಕ್ತಿಯ ಭಂಡಾರದಲ್ಲಿ ಮುಳುಗಿ,ಭಗವಂತನ ಧ್ಯಾನ ಮಾಡುತ್ತಿರುವ ಸಂಧರ್ಭದಲ್ಲಿ ಇನ್ನೊಂದು ಕಡೆ ಬೆಳಗಾವಿಯಲ್ಲಿ ಗಣಪತಿ ಹಬ್ಬದ ಭರ್ಜರಿ ತಯಾರಿ ನಡೆದಿದೆ.

ಪಕ್ಕದ ಮಹಾರಾಷ್ಟ್ರದ ಪೂನೆಯಲ್ಲಿ , ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಪೂನೆ ಹೊರತುಪಡಿಸಿದರೆ,ಬೆಳಗಾವಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಗಣಪತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ.ಬೆಳಗಾವಿಯ ಗಣೇಶ ಹಬ್ಬದ ವೈಶಿಷ್ಟ್ಯ ನೋಡಲು ದೂರ,ದೂರದ ನಗರಗಳಿಂದ ಹೊರ ರಾಜ್ಯಗಳಿಂದ ಬೆಳಗಾವಿಗೆ ಭಕ್ತರು ಬರ್ತಾರೆ.

ಬೆಳಗಾವಿ ಮಹಾನಗರದಲ್ಲಿ 350 ಕ್ಕೂ ಹೆಚ್ವು ಗಣೇಶ ಉತ್ಸವ ಮಂಡಳಗಳಿವೆ, ಬೆಳಗಾವಿಯ ಹಲವಾರು ಮಂಡಳಗಳು ಶತಮಾನದ ಇತಿಹಾಸ ಹೊಂದಿವೆ. ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಪ್ರತಿಷ್ಠಾಪಿಸಿದ ಗಣೇಶ ಉತ್ಸವ ಮಂಡಳ ಇವತ್ತಿಗೂ ಗಣೇಶ ಉತ್ಸವವನ್ನು ಆಚರಿಸುತ್ತಿದೆ‌.ಇದು ಬೆಳಗಾವಿಯ ಗಣೇಶ ಹಬ್ಬದ ಸ್ಪೇಶ್ಯಾಲಿಟಿ.

ಬೆಳಗಾವಿ ಮಹಾನಗರದ ಗಲ್ಲಿ,ಗಲ್ಲಿಗಳಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ,ಭಾರತದ ಸಂಸ್ಕೃತಿ ಮತ್ತು ದಾರ್ಮಿಕ ಪರಂಪರೆಯನ್ನು ಬಿಂಬಿಸುವ ರೂಪಕಗಳನ್ನು ಅನಾವರಣ ಮಾಡಿ,ಅಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ಆಚರಿಸುವದು ಬೆಳಗಾವಿಯ ವಿಶೇಷ.

ಒಂಬತ್ತು ದಿನಗಳ ಕಾಲ ಬೆಳಗಾವಿಯ ಶ್ರೀಗಣೇಶನ ದರ್ಶನ ಪಡೆಯಲು ಭಕ್ತರು ತಂಡೋಪ ತಂಡವಾಗಿ ಬಂದು ಇಡೀ ರಾತ್ರಿ ಬೆಳಗಾವಿ ಮಹಾನಗರದಲ್ಲಿ ಸಂಚರಿಸಿ ದರ್ಶನ ಪಡೆಯುತ್ತಾರೆ.

ಗಣೇಶ ಹಬ್ಬಕ್ಕೆ ಇನ್ನೂ ತಿಂಗಳು ಬಾಕಿ ಇದೆ,ಬೆಳಗಾವಿಯ ಮೂರ್ತಿಕಾರರು ವಿವಿಧ ಭಂಗಿಯಲ್ಲಿ ಗಣೇಶನನ್ನು ಅಲಂಕರಿಸುವ ಕಾರ್ಯ ಭರದಿಂದ ಸಾಗಿದೆ.ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗಳಿಗೆ ಭಾರೀ ಬೇಡಿಕೆ ಇದೆ.ಆದರೂ ಪಿಓಪಿ ಮೂರ್ತಿಗಳು ಸಹ ಸಿದ್ಧವಾಗುತ್ತಿವೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *