Breaking News

ವಿಘ್ನ ನಿವಾರಕನಿಗೆ ಭಕ್ತಿ ಪೂರ್ವಕ ವಿದಾಯ

ಬೆಳಗಾವಿ- ವಿಶಿಷ್ಟ, ವಿಭಿನ್ನ, ಅದ್ದೂರಿ ಗಣೇಶೋತ್ಸವ ಆಚರಣೆಗೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ಕುಂದಾ ನಗರಿಯಲ್ಲಿ ವಿಘ್ನ ನಿವಾರಕ,ವಿನಾಯಕನಿಗೆ ಭಕ್ತಿಪೂರ್ವಕ ವಿದಾಯ ಮಾಡಲಾಯಿತು

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಏಕದಂತನಿಗೆ ವಿಶೇಷ ಪೂಜೆ ನೆರವೇರಿಸಿ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಮೇಯರ್ ಚಿಕ್ಕಲದಿನ್ನಿ ಸಂಸದ ಸುರೇಶ ಅಂಗಡಿ,ಶಾಸಕರಾದ ಅಭಯ ಪಾಟೀಲ ,ಅನೀಲ ಬೆನಕೆ,ಜಿಲ್ಲಾಧಿಕಾರಿ ಬೊಮ್ಮನಹಳ್ಳಿ,ನಗರ ಪೋಲೀಸ್ ಆಯುಕ್ತ ರಾಜಪ್ಪ ,ಪಾಲಿಕೆ ಆಯುಕ್ತ ಶಶಿಧರ ಕುರೇರ,ಜಿಪಂ ಸಿಇಓ ರಾಮಚಂದ್ರ,ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಹಲವಾರು ಜನ ಗಣ್ಯರು ಗಣೇಶ ವಿಸರ್ಜನಾ ಮೆರವಣಿಗೆಯ ಮಹಾಪೂಜೆಗೆ ಸಾಕ್ಷಿಯಾದರು

ಗಣಪತಿ ಬಪ್ಪಾ ಮೋರಯಾ…ಪುಡಚೆ ವರ್ಷಿ ಲೌಕರ್ ಯಾ….ಎಕ್ ದೋ ತೀನ್ ಚಾರ್ ಗಣಪತಿ ಚಾ ಜೈ ಜೈಕಾರ ಎನ್ನುವ ಘೋಷಣೆಯೊಂದಿಗೆ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ವಾದ್ಯ ಮೇಳಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಪಟಾಕಿ ಸಿಡಿಸಿ ವಿನಾಯಕನಿಗೆ ಭಕ್ತಿಪೂರ್ವಕ ವಿದಾಯ ಹೇಳಿದರು

ನಗರದ ಹುತಾತ್ಮ ಚೌಕನಿಂದ ಆರಂಭವಾದ ಮೆರವಣಿಗೆ ಗಣೇಶ ಉತ್ಸವದ ಗತವೈಭವವನ್ನು ಬಿಂಬಿಸುತ್ತಾ ಸಮಾದೇವಿ ಗಲ್ಲಿ ಮಾರ್ಗವಾಗಿ ಕಾಲೇಜು ರಸ್ತೆಯ ಮೂಲಕ ಧರ್ಮವೀರ ಸಂಬಾಜಿ ರಸ್ತೆಯಿಂದ ಕಿರ್ಲೋಸ್ಕರ್ ರಸ್ತೆಯ ಮೂಲಕ ಕಪೀಲೇಶ್ವರ ಹೊಂಡ ತಲುಪಿ ಶ್ರೀ ಗಣೇಶನನ್ನು ವಿರ್ಜಿಸಲಾಯಿತು

ಬೆಳಗಾವಿ ನಗರದಲ್ಲಿ 350 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ಈ ಎಲ್ಲ ಗಣಪ ಮೂರ್ತಿಗಳು ಒಂದೊಂದಾಗಿ ಮೆರವಣಿಗೆಯಲ್ಲಿ ಭಾಗವಹಿಸಿ ಇಡೀ ರಾತ್ರಿ ಮೆರವಣಿಗೆ ಸಾಗುತ್ತದೆ ಸೋಮವಾರ ಮದ್ಯಾಹ್ನದವರೆಗೂ ಮೆರವಣಿಗೆ ಸಾಗುವದು ಬೆಳಗಾವಿ ಉತ್ಸವದ ವಿಶೇಷತೆಯಾಗಿದೆ

ಪಾಲಿಕೆಯಿಂದ ಸಕಲ ವ್ಯವಸ್ಥೆ

ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ವಿರ್ಜನಾ ಮೆರವಣಿಗೆಗೆ ಅಗತ್ಯವಿರುವ ಸಕಲ ವ್ಯವಸ್ಥೆ ಮಾಡಿದೆ ಗಣೇಶನ ಗತವೈಭವ ನೋಡಲು ಭಕ್ತ ಸಾಗರವೇ ಹರಿದು ಬರುತ್ತದೆ ಭಕ್ತರಿಗೆ ಗಣೇಶ ದರ್ಶನ ಮಾಡಿಸಲು ಪ್ರೇಕ್ಷಕರ ಗ್ಯಾಲರಿ, ಕುಡಿಯುವ ನೀರಿನ ವ್ಯವಸ್ಥೆ, ಮೋಬೈಲ್ ಟಾಯ್ಲೆಟ್, ಕಪೀಲೇಶ್ವರ ಹೊಂಡದಲ್ಲಿ ಕ್ರೇನ್ ವ್ಯವಸ್ಥೆ, ಸೇರಿದಂತೆ ಎಲ್ಲ ರೀತಿಯ ಅನಕೂಲತೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಕಲ್ಪಿಸಿ ದ್ದಾರೆ ಪಾಲಿಕೆ ಆಯುಕ್ತ ಶಶಿಧರ ಕುರೇರ,ಆರ್ ಎಸ್ ನಾಯಕ ,ಲಕ್ಷ್ಮೀ ನಿಪ್ಪಾಣಿಕರ,ನಾಡಗೌಡ್ರು,ಹಿರೇಮಠ,ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಮೆರವಣಿಗೆ ಸಾಗುವ ಮಾರ್ಗದಲ್ಲಿ ಮತ್ತು ಕಪಿಲೇಶ್ವರ ಹೊಂಡದ ಹತ್ತಿರ ಠಿಖಾನಿ ಹೂಡಿದ್ದು ನಾಳೆ ಮದ್ಯಾಹ್ನದವರೆಗೂ ಪಾಲಿಕೆ ಅಧಿಕಾರಿಗಳು ಉಪಸ್ತಿತರಿದ್ದು ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳುತ್ತಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *