ಬೆಳಗಾವಿ- ಬೆಳಗಾವಿಯ ತರಕಾರಿ ಬೇಡ ಎಂದು ಗೋವಾ ಸಿಎಂ ಹೇಳಿಕೆ ನೀಡಿದ ಬೆನ್ನಲ್ಲಿಯೇ ಗೋವಾ ಸರ್ಕಾರ ಈಗ ಮತ್ತೊಂದು ಕಿರಿಕ್ ಮಾಡಿದೆ.ಭಾರಿ ವಾಹನ ಪ್ರವೇಶಕ್ಕೆ ಗೋವಾ ಸರ್ಕಾರ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚೋರ್ಲಾ ಘಾಟ್ ಮೂಲಕ ಗೋವಾ ರಾಜ್ಯಕ್ಕೆ ತೆರಳುವ ಲಾರಿಗಳಿಗೆ ತಡೆಯಲಾಗಿದೆ. ಭಾರಿ ಲಾರಿಗಳಿಂದ ಸಂಚಾರ ದಟ್ಟಣೆ ಆಗುತ್ತೆ ಎಂದು ಗೋವಾ ರಾಜ್ಯದಲ್ಲಿ ಭಾರಿ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ.ಉತ್ತರ ಗೋವಾ ಟ್ರಾಫಿಕ್ ಎಸ್‌ಪಿ ಮನವಿ ಮೇರೆಗೆ ಉತ್ತರ ಗೋವಾ ಡಿಸಿ ಮಮು ಹಗೆ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಗೋವಾ ಉತ್ತರ ಜಿಲ್ಲಾಧಿಕಾರಿ ಗೋವಾ ರಾಜ್ಯದಲ್ಲಿ ಲಾರಿಗಳ ಪ್ರವೇಶ ನಿಷೇಧಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಚೋರ್ಲಾ ಘಾಟ್ ಮೂಲಕ ಗೋವಾ ಪ್ರವೇಶಿಸಲು ಭಾರಿ ಲಾರಿಗಳಿಗೆ ಅವಕಾಶ ಇಲ್ಲದಂತಾಗಿದೆ.
ಗೋವಾಗೆ ಸಂಪರ್ಕ ಕಲ್ಪಿಸುವ ರಾಮನಗರ ಗೋವಾ ರಸ್ತೆ ಕಳೆದ ಮೂರು ವರ್ಷಗಳಿಂದ ಬಂದ್ ಆಗಿದೆ.ಈ ಹಿನ್ನೆಲೆಯಲ್ಲಿ ಚೋರ್ಲಾ ಘಾಟ್ ಮೂಲಕ ತೆರಳುತ್ತಿದ್ದ ವಾಣಿಜ್ಯ ಲಾರಿಗಳು ಈಗ ಕೇರಿ – ಬೆಳಗಾವಿ ರಾಜ್ಯ ಹೆದ್ದಾರಿ 01ರಲ್ಲಿ ಭಾರಿ ವಾಹನಗಳು ಸಾಲಾಗಿ ನಿಂತಿವೆ.2023ರ ಮಾರ್ಚ್ 19ರವರೆಗೆ ಭಾರಿ ಲಾರಿಗಳ ಸಂಚಾರಕ್ಕೆ ನಿಷೇಧ ಹೇರಿರುವದರಿಂದ ಚೋರ್ಲಾ ಮೂಲಕ ಗೋವಾಕ್ಕೆ ಹೋಗಲಿದ್ದ ಲಾರಿಗಳು ಈಗ ಗೋವಾ ಗಡಿಯಲ್ಲಿ ನಿಂತಿವೆ.
ರಾಮನಗರ ಮೂಲಕ ಗೋವಾಗೆ ತೆರಳುವ ರಸ್ತೆ ದುರಸ್ತಿ ಆಗುವವರೆಗೂ ಈ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಲಿಸಲು ಲಾರಿ ಮಾಲೀಕರ ಆಗ್ರಹಿಸಿದ್ದಾರೆ.ಕಾರವಾರ ಮೂಲಕ ಗೋವಾಗೆ ತೆರಳಲು 250 ಕಿಲೋಮೀಟರ್ ಆಗುತ್ತದೆ,ಅಷ್ಟು ಬಾಡಿಗೆ ನಮಗೆ ಸಿಗಲ್ಲ ಎಂದು ಲಾರಿ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಹಾರ ಉತ್ಪನ್ನ, ಕಟ್ಟಡ ಕಾಮಗಾರಿ ವಸ್ತು ಸೇರಿ ವಿವಿಧ ಸರಕು ಸಾಗಿಸುತ್ತಿದ್ದ ಲಾರಿ ಸ್ಥಗಿತಗೊಂಡಿವೆ.
ನಿನ್ನೆ ರಾತ್ರಿಯಿಂದ ನಮ್ಮ ಚಾಲಕರು ಲಾರಿಗಳ ಜೊತೆ ನಿಂತಲ್ಲೇ ನಿಂತಿದ್ದಾರೆ.ಉತ್ತರ ಗೋವಾ ಜಿಲ್ಲಾಧಿಕಾರಿ ಅಧಿಸೂಚನೆಗೆ ಬೆಳಗಾವಿ ಲಾರಿ ಮಾಲೀಕರ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲಾ ಲಾರಿ ಸಂಘದ ಅಧ್ಯಕ್ಷ ವಿಜಯ ವಿಕ್ಕೋಡಿ,ನಂದಕುಮಾರ ಲಮಾನಿ,ಎಂಎಸ್ ಸೋಮನಟ್ಟಿ,ಸ್ವರೂಪ ಕಲಾದಗಿ,ಗಪೂರ ಮೊದಲಾದವರು ಉಪಸ್ಥಿತರಿದ್ದರು.