Breaking News

ಪ್ಲಾಸ್ಟಿಕ್ ಧ್ವಜ ಬಳಕೆ ಸಂಪೂರ್ಣವಾಗಿ ನಿಷೇಧಿಸಿ

ಬೆಳಗಾವಿ
ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಾಚಾರಣೆಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನವಾಗುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ‌ ಸೋಮವಾರ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸ್ವಾತಂತ್ರ್ಯ ದಿನಾಚಾರಣೆಯಲ್ಲಿ ಸ್ವಾಭಿಮಾನದಿಂದ ದೇಶಾಭಿಮಾನದ ಹಾಡುಗಳನ್ನು ಹಾಡುತ್ತೇವೆ. ಆದರೆ ಧ್ವಜಾರೋಹಣವಾದ ಕೆಲವೇ ಗಂಟೆಗಳಲ್ಲಿ ಅದು ಕಸದ ತೊಟ್ಟಿ, ಜನರ ಕಾಲ್ತುಳಿತಕ್ಕೆ ಸಿಲುಕಿ ಅವಮಾನ ಮಾಡುತ್ತಿರುವುದು ಈ‌ ಹಿಂದೆ ಕಂಡು ಬಂದಿದೆ. ನಮ್ಮ ರಾಷ್ಟ್ರ ಧ್ವಜದ ಪ್ರತಿಷ್ಠೆಯನ್ನು ಎತ್ತರಕ್ಕೆ ಏರಿಸಲು ಮಹಾಪುರುಷರು ತಮ್ಮ ಪ್ರಾಣವನ್ನೆ ಬಲಿದಾನವಾಗಿ ಅರ್ಪಿಸಿದ ಹುತಾತ್ಮರಿಗೆ ಅವಹೇಳನ ಮಾಡುವಂತಿದೆ. ಅದಕ್ಕೆ ಈ ಸಲದ ಸ್ವಾತಂತ್ರೋತ್ಸವದಲ್ಲಿ ಇಂಥ ಅವಮಾನಕ್ಕೆ ಆಸ್ಪದ ನೀಡಬಾರದೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಹಿಂದೂ ಜನಜಾಗೃತಿ ಕಾರ್ಯಕರ್ತರು ಉಪಸ್ಥಿತರಿದ್ದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *