Breaking News

ನಾಳೆ ಬಂದೋಬಸ್ತ…ಇಂದೇ ಹೋಲಿ..ಮಸ್ತ..ಮಸ್ತ.ಪೊಲೀಸರ ತ್ಯಾಗ ಜಬರದಸ್ತ..

ಬೆಳಗಾವಿ- ನಾಳೆ ಸೋಮವಾರ ಹೋಳಿ ಹಬ್ಬ ಬೆಳಿಗ್ಗೆ ಕೋಳಿ ಕೂಗುತ್ತಿದ್ದಂತೆಯೇ ಪೋಲೀಸರು ಬಂದೋಬಸ್ತಿಗೆ ಹೋಗಲೇ ಬೇಕು ಇವರಿಗೆ ಹಬ್ಬದ ದಿನ ರಜೆ ಸಿಗುವುದಿಲ್ಲ ಹಬ್ಬದ ಮಜಾ ಏನು ? ಅನ್ನೋದು ಪಾಪ ಇವರಿಗೆ ಗೊತ್ತಿಲ್ಲ ಹಬ್ಬದ ದಿನ ಜನ ಹಬ್ಬ ಆಚರಿಸಲಿ ನಾವು ಒಂದು ದಿನ ಮೊದಲೇ ಹಬ್ಬ ಆಚರಿಸೋಣ ಎಂದು ಒಂದು ದಿನ ಮುಂಚಿತವಾಗಿಯೇ ಖಡೇ ಬಝಾರ ಪೋಲೀಸರು ಬಣ್ಣದಾಟ ಆಡಿ ಎಲ್ಲರ ಗಮನ ಸೆಳೆದಿದ್ದಾರೆ

ಖಡೇಬಝಾರ ಸಿಪಿಐ ನೇತ್ರತ್ವದಲ್ಲಿ ಭಾನುವಾರ ಠಾಣೆಯ ಪರಿಸರದಲ್ಲಿ ಶ್ರಮದಾನದ ಮೂಲಕ ಸ್ಬಚಛತಾ ಕಾಮಗಾರಿ ನಡೆಸಿದ ಬಳಿಕ ಖಡೇಬಝಾರ ಸಿಪಿಐ ಸಾತೇನಹಳ್ಳಿ ತಮ್ಮ ಠಾಣೆಯ ಸಿಬ್ಬಂಧಿಗಳಿಗೆ ಸಿಹಿ ಹಂಚಿ ಅವರ ಜೊತೆ ಬಣ್ಣದಾಟವಾಡಿ ಹೋಳಿ ಹಬ್ಬದ ಸಂಬ್ರಮವನ್ನು ಒಂದು ದಿನ ಮುಂಚಿತವಾಗಿ ಸವಿದರು

ಸಮಾಜದ ಶಾಂತಿಗಾಗಿ ಸರ್ವತ್ಯಾಗ ಮಾಡುವ ಪೋಲೀಸರಿಗೆ ಬೆಳಗಾವಿ ಸುದ್ದಿ ಡಾಟ್ ಕಾಮ್ ಪರವಾಗಿ ಹೋಳಿ ಹಬ್ಬದ ಶುಭಾಶಯಗಳು

ಹೋಳಿ ಹಬ್ಬಕ್ಕೆ ಕುಂದಾನಗರಿ ಸಜ್ಜು

ಹೋಳಿ ಹಬ್ಬ ಆಚರಿಸಲು ಬೆಳಗಾವಿ ಸಜ್ಜಾಗಿದೆ ಕಂಡು ಕಂಡಲ್ಲಿ ಬಣ್ಣದ ಮಾರಾಟ ಢೋಲ್ ಗಳ ಮಾರಾಟ ಜೋರಾಗಿಯೇ ನಡೆದಿದೆ ಸಾಮೂಹಿಕ ಹೋಳಿ ಆಚರಣೆಗೆ ಅಭಯ ಪಾಟೀಲರ ಹೋಲಿ- ಮಿಲನ್ ಕಾರ್ಯಕ್ರಮಕ್ಕೆ ಲಿಲೇ ಮೈದಾನದಲ್ಲಿ ಸಕಲ ವ್ಯೆವಸ್ಥೆ ಮಾಡಲಾಗಿದ್ದು ಸಿಪಿಎಡ್ ಮೈದಾನದಲ್ಲಿ ಮಹಿಳೆಯರಿಗಾಗಿ ಲಕ್ಷ್ಮೀ ಹೆಬ್ಬಾಳಕರ ಅವರು ವುಮೇನಿಯಾ ಹೋಲಿ ಕಾರ್ಯಕ್ರಮ ಆಯೋಜಿಸಿದ್ದಾರೆ

ಜೊತೆಗೆ ಯುವ ಪಡೆ ಹೋಳಿ ಹಬ್ಬ ಆಚರಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು ನಾಳೆ ಸೋಮವಾರ ನಗರದಲ್ಲಿ ಸೌಹಾರ್ದತೆಯ ರಂಗು ರಂಗೇರಲಿದೆ

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *