ಬೆಳಗಾವಿ- ಕ್ರಿಕೆಟ್ ಹೊರತುಪಡಿಸಿ,ಪುಟ್ ಬಾಲ್ ವ್ಹಾಲಿಬಾಲ್,ಹಾಕಿ,ಟೆನಿಸ್,ಜಿಮ್ನ್ಯಾಸ್ಟೀಕ್ ಅಥ್ಲೆಟಿಕ್ ಸೇರಿದಂತೆ ಉಳಿದ ಎಲ್ಲ ಕ್ರೀಡೆಗಳನ್ನು ಒಂದೇ ಸೂರಿನಲ್ಲಿ ಬೆಳಗಾವಿ ಜನತೆಗೆ ಕಲ್ಪಿಸಿಕೊಡುವ ಸಂಕಲ್ಪವನ್ನು ಶಾಸಕ ಅಭಯ ಪಾಟೀಲ ಮಾಡಿದ್ದಾರೆ.
ಮಹಾರಾಷ್ಟ್ರದ ಪೂನೆ ಮಾದರಿಯ ರಾಷ್ಟ್ರ ಮಟ್ಟದ ಇಂಡೋರ್ ಸ್ಟೇಡಿಯಂ ಬೆಳಗಾವಿಯಲ್ಲೂ ನಿರ್ಮಿಸಲು ಬೆಳಗಾವಿಯ ಮಿಸ್ಟರ್ ಡೆವಲಪ್ಮೆಂಟ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಚಿಂತನೆ ನಡೆಸಿದ್ದಾರೆ.
ಈಗಾಗಲೇ ಎರಡು ಬಾರಿ ಪೂನೆಯ ಇಂಡೋರ್ ಸ್ಟೇಡಿಯಂ ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿರುವ ಶಾಸಕ ಅಭಯ ಪಾಟೀಲ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಯಳ್ಳೂರ ಗ್ರಾಮದಲ್ಲಿ ಈ ಸ್ಟೇಡಿಯಂ ನಿರ್ಮಿಸಲು ನಿರ್ಧರಿಸಿದ್ದಾರೆ.
ಯಳ್ಳೂರು ಗ್ರಾಮದ ವ್ಯಾಪ್ತಿಯಲ್ಲಿ 40 ಎಕರೆ ಸರ್ಕಾರಿ ಜಾಗೆಯನ್ನು ಗುರುತಿಸಿದ್ದಾರೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸ್ಟೇಡಿಯಂ ನಿರ್ಮಿಸುವ ಯೋಜನೆ ರೂಪಿಸುವ ಕಾರ್ಯಕ್ಕೆ ಅಭಯ ಪಾಟೀಲ ಕೈಹಾಕಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಕ್ರೀಡಾ ಪ್ರತಿಭೆಗಳಿದ್ದು,ಅವರೆಲ್ಲರಿಗೂ ರಾಷ್ಟ್ರಮಟ್ಟದ ಈ ಇಂಡೋರ್ ಸ್ಟೇಡಿಯಂ ಕಲ್ಪವೃಕ್ಷವಾಗಲಿದೆ.ಟ್ರೇನಿಂಗ್ ಕೋಚಿಂಗ್ ಸ್ಪೋರ್ಟ್ಸ್ ಇವೆಂಟ್ಸ್ ಗಳನ್ನು ಮಾಡುವ ಮೂಲಕ ಒಂದೇ ಸೂರಿನಡಿಯಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವದೇ ನನ್ನ ಮುಖ್ಯ ಉದ್ದೇಶವಾಗಿದೆ,ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಭಾಗದಲ್ಲಿ ಸ್ವೀಮೀಂಗ್ ,ಸೈಕ್ಲೀಂಗ್ ,ಅಥ್ಲೆಟಿಕ್ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅವರಿಗೆ ಸರಿಯಾದ ತರಬೇತಿ ಮತ್ತು ಮಾರ್ಗದರ್ಶನ ದೊರಕಿದರೆ ಅವರು ಓಲಂಪಿಕ್ ಆಟಗಳಲ್ಲಿಯೂ ಸಾಧನೆ ಮಾಡುವ ಸಾಮರ್ಥ್ಯವಿದ್ದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಇಂಡೋರ್ ಸ್ಟೇಡಿಯಂ ನಿರ್ಮಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವದೇ ನನ್ನ ಮುಖ್ಯ ಉದ್ದೇಶ ವಾಗಿದೆ ಎಂದು ಅಭಯ ಪಾಟೀಲ ಹೇಳಿದ್ದಾರೆ.
ಡಿಸೆಂಬರ್ 4 ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳಗಾವಿಗೆ ಬರುತ್ತಿದ್ದು ಈ ಮಹತ್ವಾಕಾಂಕ್ಷೆಯ ಯೋಜನೆಯ ಕುರಿತು ಸಿಎಂ ಗಮನ ಸೆಳೆಯುತ್ತೇನೆ.ಅವರ ಜೊತೆ ಚರ್ಚೆ ಮಾಡಿ,ಕೇಂದ್ರ ಸರ್ಕಾರದ ಸಹಾಯ ಪಡೆದು ಈ ಯೋಜನೆಯನ್ನು ಅನುಷ್ಠಾನ ಮಾಡುವ ಸಂಕಲ್ಪ ಮಾಡಿದ್ದೇನೆ .ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಪೂನಾ ದಲ್ಲಿರುವ ರಾಷ್ಟ್ರಮಟ್ಟದ ಇಂಡೋರ್ ಸ್ಟೇಡಿಯಂ ಕೇಂದ್ರದ ಕ್ರೀಡಾ ಇಲಾಖೆಯೇ ನಿರ್ವಹಣೆ ಮಾಡುತ್ತಿದೆ.