ಬೆಳಗಾವಿ- ಗ್ಲಾಸ್ ತಯಾರಿಕೆಯಲ್ಲಿ ದೇಶದಲ್ಲಿಯೇ ಎರಡನೇಯ ಅತೀ ದೊಡ್ಡ ಕಂಪನಿಯಾಗಿರುವ ಗೋಲ್ಡ್ ಪ್ಲಸ್ ಫ್ಲೋಟ್ ಗ್ಲಾಸ್ ಕಂಪನಿ ಈಗ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಗ್ಲಾಸ್ ಉತ್ಪಾದನಾ ಘಟಕದ ನಿರ್ಮಾಣದ ಕಾಮಗಾರಿ ಆರಂಭಿಸಿದೆ.
ಬೆಳಗಾವಿ ಜಿಲ್ಲೆಯ ಗಡಿಯಲ್ಲಿರುವ ನಿಪ್ಪಾಣಿ ಬಳಿಯ ಕನಗಲಾ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರ್ನಾಟಕ ಸರ್ಕಾರ ಈ ಕಂಪನಿಗೆ ಘಟಕ ಸ್ಥಾಪಿಸಲು 200 ಎಕರೆ ಜಮೀನು ನೀಡಿದೆ, ಇಲ್ಲಿ ಗೋಲ್ಡ್ ಪ್ಲಸ್ ಕಂಪನಿ ಘಟಕ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದು 2024 ರಲ್ಲಿ ಘಟಕದ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಲ್ಲಿ ದೇಶದ ಪ್ರಸಿದ್ಧ ಕಂಪನಿ ಘಟಕ ಸ್ಥಾಪನೆ ಮಾಡುತ್ತಿರುವದರಿಂದ ಬೆಳಗಾವಿ ಜಿಲ್ಲೆಯ ಸುಮಾರು ಸಾವಿರಕ್ಕೂ ಹೆಚ್ವು ಜನರಿಗೆ ಉದ್ತೋಗ ಲಭಿಸಲಿದೆ.ಗಡಿ ಭಾಗದ ಬೆಳಗಾವಿಗೆ ಒಂದೊಂದಾಗಿ ಉದ್ಯಮಗಳು ಬರುತ್ತಿರುವದು ಉತ್ತಮ ಬೆಳವಣಿಗೆ ಆಗಿದೆ.
ಗೋಲ್ಡ್ ಪ್ಲಸ್ ಗ್ಲಾಸ್ ತಯಾರಿಕಾ ಕಂಪನಿಯು ಎಲ್ಲ ಬಗೆಯ ಗ್ಲಾಸ್ ಗಳನ್ನು ತಯಾರಿಸುತ್ತದೆ. ಬೆಳಗಾವಿ ಜಿಲ್ಲೆಯ ಕನಗಲಾ ಘಟಕದಲ್ಲಿ ಪ್ರತಿ ದಿನ 300 ಟನ್ ಸೋಲಾರ್ ಗ್ಲಾಸ್ ಹಾಗೂ 800 ಟನ್ ಇತರೆ ಗ್ಲಾಸ್ ತಯಾರಿಸುವ ಸಾಮರ್ಥ್ಯ ಇದೆ.