Breaking News

ಸಾಮಾಜಿಕ ಪ್ರ,ಜ್ಞೆ ಮೂಡಿಸಿದ ಶಾಲಾ ಮಕ್ಕಳ ಪ್ರೊಜೆಕ್ಟ…!

ಬೆಳಗಾವಿ ಇಲ್ಲಿನ ಕ್ಯಾಂಪ ಪ್ರದೇಶದಲ್ಲಿರುವ ಮುಸ್ಲಿಂ ಎಜುಕೇಶನ ಸೊಸೈಟಿಯ ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ವಿಜ್ಞಾನ ಮತ್ತು ಕಲಾ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ಕಚ್ಚಾವಸ್ತುಗಳನ್ನು ಬಳಕೆ ಮಾಡಿ ನಿರ್ಮಿಸಿದ್ದ ಮಳೆ ನೀರು ಸಂಗ್ರಹಣೆ ಮತ್ತು ಶುದ್ಧೀಕರಣ ಘಟಕ, ಜೈವಿಕ ಇಂಧನ, ಗಾಳಿವಿದ್ಯುತ,  ಜಲ ವಿದ್ಯುತ, ಸೌರಶಕ್ತಿ, ಕುಡಿಯುವ ನೀರು ಸಂಗ್ರಹಿಸುವ ವಿಧಾನ, ಸಾವಯವ ಕೃಷಿ, ಗೊಬ್ಬರ ಬಳಕೆ ವಿಧಾನ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಇನ್ನು ಅನೇಕ ಮಾದರಿಗಳು ಜನಮನ ಸೂರೆಗೊಂಡವು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರು, ಸಾರ್ವಜನಿಕರು ಸೇರಿ ಕುತೂಹಲದಿಂದ ವಸ್ತು ಪ್ರದರ್ಶನ ವೀಕ್ಷಿಸಿ, ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನದ ಮಾದರಿ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಮತ್ತು ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಲ್ಹಾಜ ಅಬ್ದುಲ ರಸೀದ ಮುಜಾವರ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ, ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಸೂಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ಪ್ರದರ್ಶನ ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎ.ಎಂ. ಮಮದಾಪುರ,ಸಿಆರ್‌ಪಿ ಬಿ.ಕೆ.ಕಾಲಿಮಿರ್ಚಿ, ಮುಸ್ಲಿಂ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಖತಾಲ ಮನಿಯಾರ, ಪ್ರಾಚಾರ್ಯ ಐ.ಎಂ. ಪಾಳೇಗಾರ, ವಿಜ್ಞಾನ ಮತ್ತು ಕಲಾ ಪ್ರದರ್ಶನದ ಸಂಯೋಜಕಿ ಆಶಿಯಾ ಬುಕಾರಿ ಮೊದಲಾದವರು ಇದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *