Breaking News

110 ಕೋಟಿ ಟೋಪಿ ಹಾಕಿದ ಝುಲ್ಫಿಗೆ ಥಳಿತ..!

ಬೆಳಗಾವಿ- ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ ಮತ್ತು ಕೆಲವು ನಗರ ಸೇವಕರಿಗೆ 110 ಕೋಟಿ ರೂ ಟೋಪಿ ಹಾಕಿದ ಭಟ್ಕಲ್ ಮೂಲದ ಝುಲ್ಫಿ ಖತೀಬ ಎಂಬಾತನನ್ನು ಒಂಚನೆಗೊಳಗಾದವರು ಝುಲ್ಫಿಗೆ ಮನಬಂದಂತೆ ಥಳಿಸಿದ ಚಿತ್ರಗಳು ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಲಭ್ಯವಾಗಿವೆ

ಚಿತ್ರ ನೋಡಿದರೆ ಆತನ ಮೇಲೆ ಯಾವ ರೀತಿಯ ಹಲ್ಲೆ ನಡೆದಿರಬಹುದು ಎನ್ನುವದು ಗೊತ್ತಾಗುತ್ರದೆ ಝುಲ್ಫಿಗೆ ಕೋಟ್ಯಾಂತರ ರೂ ಹಣ ನೀಡಿ ಮೋಸ ಹೋದವರು ಝುಲ್ಫಿಯನ್ನು ಹಿಡಿದು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಆತನಿಗೆ ಮನಬಂದಂತೆ ಥಳಿಸಿ,ದೇಹದ ತುಂಬೆಲ್ಲ ಬರೆ ಮೂಡಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ

ಝುಲ್ಫಿಯ ಪಾದಗಳಿಗೆ ಲೈಟರ್ ನಿಂದ ಬೆಂಕಿಯ ಬರೆ ಎಳೆದು ಆತನ ಬಟ್ಟೆಗಳನ್ನು ಕಳಚಿ ಎಲ್ಲರೂ ಸೇರಿಕೊಂಡು ಆತನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಗೊತ್ರಾಗಿದೆ ಹಲ್ಲೆಗೊಳಗಾದ ಝುಲ್ಫಿಯನ್ನು ಇನ್ನುವರೆಗೆ ಅಜ್ಞಾತ ಸ್ಥಳದಲ್ಲಿ ಇಡಲಾಗಿದೆಯೋ ಅಥವಾ ಥಳಿಸಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆಯೋ ಅನ್ನೋದು ಗೊತ್ತಾಗುತ್ತಿಲ್ಲ

ಝುಲ್ಫಿ ಬಳಿ ಹಣ ಹೂಡಿ ಮೋಸ ಹೋದವರು ಇನ್ನುವರೆಗೆ ಪೋಲೀಸರಿಗೆ ದೂರು ನೀಡಿಲ್ಲ ಹಲ್ಲೆಗೊಳಗಾದ ಝುಲ್ಫಿ ಕೂಡಾ ಪೋಲೀಸರಿಗೆ ದೂರು ನಿಡದೇ ಇರುವದರಿಂದ ಝುಲ್ಫಿ ಪ್ರಕರಣ ಇನ್ನುವರೆಗೆ ಗಾಳಿ ಸುದ್ಧಿಯಾಗಿದೆ ಈ ಪ್ರಕರಣದ ಕುರಿತು ಇಲ್ಲ ಸಲ್ಲದ ವದಂತಿಗಳು ಹರಡುತ್ತಿದ್ದು ಈ ಪ್ರಕರಣ ನಗರದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.