ಬೆಳಗಾವಿ- ICMR ಸಹಯೋಗದೊಂದಿಗೆ ಭಾರತ ಬಯೋಟೇಕ್ ನವರು ಸಿದ್ಧ ಪಡಿಸಿರುವ ಕೋವೀಡ್ ವ್ಯಾಕ್ಸೀನ್ ಪ್ರಯೋಗ ಮಾಡಲು ಕರ್ನಾಟಕದಲ್ಲಿಯೇ ಆಯ್ಕೆಯಾಗಿರುವ ಬೆಳಗಾವಿಯ ಏಕೈಕ ಆಸ್ಪತ್ರೆ,ಜೀವನ ರೇಖಾ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸೀನ್ ಪ್ರಯೋಗ ಶುರುವಾಗಿದೆ.
ಭಾರತ ಬಯೋಟೆಕ್ ಸಿದ್ಧ ಪಡಿಸಿರುವ ಈ ವ್ಯಾಕ್ಸೀನ್ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ಕೋವೀಡ್ ವೈರಸ್ ಹೊಂದಿರದ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.
ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯ ವೈದ್ಯರು ಈಗಾಗಲೇ ಬೆಳಗಾವಿಯ 40 ಜನರಿಗೆ ವ್ಯಾಕ್ಸೀನ್ ಪ್ರಯೋಗ ಮಾಡಿದ್ದಾರೆ.ಒಟ್ಟು 150 ಜನರ ಮೇಲೆ ಈ ವ್ಯಾಕ್ಸೀನ್ ಪ್ರಯೋಗ ಮಾಡುವ ಗುರಿ ಹೊಂದಿದ್ದಾರೆ.
ಕೋವಿಡ್ ಸೊಂಕು ಇಲ್ಲದ ವ್ಯೆಕ್ತಿಗಳಿಗೆ ಈ ವ್ಯಾಕ್ಸೀನ್ ಕೊಡಲಾಗುತ್ತದೆ,ಅವರಲ್ಲಿ ರೋಗ ನಿರೋಧಕ ಶಕ್ತಿ ಎಷ್ಟರ ಮಟ್ಟಿಗೆ ಉತ್ಪತ್ತಿಯಾಗುತ್ತಿದೆ ಎಂದು ಸುಮಾರು ಎರಡು ತಿಂಗಳ ಕಾಲ ಪರೀಕ್ಷೆ ಮಾಡಲಾಗುತ್ತದೆ ಎಂದು ಜೀವನ ರೇಖಾ ಆಸ್ಪತ್ರೆಯ ವೈದ್ಯ ಅಮೀತ ಭಾತೆ ತಿಳಿಸಿದ್ದಾರೆ.
ವ್ಯಾಕ್ಸೀನ್ ಕೊಟ್ಟ ವ್ಯೆಕ್ತಿಗಳನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳುವದಿಲ್ಲ ವ್ಯಾಕ್ಸೀನ್ ಕೊಟ್ಟು ಅವರನ್ನು ಬಿಡಲಾಗುತ್ತದೆ.
ಬೆಳಗಾವಿಯಲ್ಲಿ ಹೋಮ್ ಐಸೋಲೇಶನ್ ಆರಂಭ
ಬೆಳಗಾವಿಯಲ್ಲಿ ಕೋವೀಡ್ ಸೊಂಕಿತರಿಗೆ ಹೋಮ್ ಐಸೋಲೇಶನ್ ಮಾಡುವ ಪ್ರಕ್ರಿಯೆ ಬೆಳಗಾವಿಯಲ್ಲಿ ಶುರುವಾಗಿದೆ.
ಸೊಂಕಿತರು 57 ವರ್ಷದ ಒಳಗಿರಬೇಕು,ಅವರು ಬಿಪಿ,ಶುಗರ್ ಸೇರಿದಂತೆ ಇತರ ಸಿರೀಯಸ್ ಕಾಯಿಲೆಯಿಂದ ಬಳಲಬಾರದು,ಹೋಮ್ ಐಸೋಲೇಶನ್ ಆಗಬಯಸುವ ಸೊಂಕಿತರ ಮನೆಯಲ್ಲಿ ಅಟ್ಯಾಚ್ ಬಾತ್ ರೂಮ್ ಇರಬೇಕು.ಅಂತವರಿಗೆ ಮಾತ್ರ ಹೋಮ್ ಐಸೋಲೇಶನ್ ಮಾಡಲಾಗುತ್ತಿದೆ.
ಬೆಳಗಾವಿ ನಗರದಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ಜನರನ್ನು ಹೋಮ್ ಐಸೋಲೇಶನ್ ಮಾಡಲಾಗಿದೆ.ಸರ್ಕಾರಿ ವೈದ್ಯರು ಇವರ ಮನೆಗೆ ಹೋಗಿ ಚಿಕಿತ್ಸೆ ಕೊಡುತ್ತಿದ್ದಾರೆ.