Breaking News

ಸಾವು ಬದುಕು ನಮ್ಮ ಕೈಯಲ್ಲಿಲ್ಲ- ಕೈಚಲ್ಲಿದ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ ಸಾವಿನ ಸಂಖ್ಯೆ ಹೆಚ್ಚಳ ಆಗ್ತಾ ಇದೆ ಇದನ್ನು ತಡೆಯೋಕೆ ಜಿಲ್ಲಾಡಳಿತದ ಕ್ರಮ ಏನು ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ,ಕೊರೋನಾ ದೊಡ್ಡ ರೋಗ ಅಲ್ಲ ಅದಕ್ಕೆ ಹೆದರಬೇಕಾಗಿಲ್ಲ ,ನಾವು ಕೋವೀಡ್ ಜೊತೆ ಬದುಕುವದನ್ನು ಕಲಿಯಬೇಕು.ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಹೋರಾಟ ಮಾಡಿ ಉಳಿಸುವ ಯತ್ನ ಮಾಡಬೇಕು ಎಂದು ಸಚವ ರಮೇಶ್ ಹೇಳಿದ್ದಾರೆ.

ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ವರ್ಷದ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಮಾಡಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,
ಮಾಧ್ಯಮದವರು ಸಹಕರಿಸಬೇಕು, ಮಾಧ್ಯಮದವರಿಗೆ ತಾವು ಕೋವಿಡ್ ವಾರ್ಡ್‌ನೊಳಗೆ ಹೋಗಿ ನೋಡಿ, ನಾವು ರೆಡಿ ತಾವು ಸಿದ್ಧರಿದ್ದಾರಾ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.

ಈ ವೇಳೆ ಬಿಮ್ಸ್ ಅವಾಂತರ ಬಗ್ಗೆ ಚರ್ಚಿಸುತ್ತೇನೆ ಎಂದ ರಮೇಶ್ ಜಾರಕಿಹೊಳಿ ಬಿಮ್ಸ್ ಬಳಿ ಆ್ಯಂಬುಲೆನ್ಸ್‌ ಸುಟ್ಟ ಪ್ರಕರಣ ಬಗ್ಗೆಯೂ ಚರ್ಚೆ ನಡೆಸುತ್ತೇವೆ. ಅಧಿಕಾರಿಗಳು ಯಾರಾದರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ.ಕೋವಿಡ್ ಜೊತೆ ಬದುಕೋದನ್ನು ನಾವು ಕಲಿಯಬೇಕು.ಕೋವಿಡ್ ಗಂಭೀರ ಖಾಯಿಲೆ ಅಲ್ಲ, ಜನ ಪ್ಯಾನಿಕ್ ಆಗಬಾರದು. ನಾವು ಸರಿಯಾಗಿ ಸ್ಪಂದನೆ ಮಾಡಿದ್ರೆ ರಿಕವರಿ ಆಗುತ್ತೆ. ಬಿಮ್ಸ್ ಆಡಳಿತ ಮಂಡಳಿ ಶೀಘ್ರ ಸರ್ಜರಿ ಮಾಡ್ತೇವೆ.ಅಲ್ಲಿಯ ವ್ಯೆವಸ್ಥೆ ಸುಧಾರಣೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

ಇಂತಹ ಸಂದರ್ಭದಲ್ಲಿ ವರ್ಗಾವಣೆ ಮಾಡಿದ್ರೆ ತಪ್ಪು ಸಂದೇಶ ಹೋಗುತ್ತೆ ಅಂತಾ ಬಿಟ್ಟಿದ್ದೀವಿ. ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಸಿಗೆ ಸೂಚನೆ ನೀಡಿದ್ದೇವೆ.ಎಂದರು

ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಗಟ್ಟಿಯಾದ ಲೀಡರ್,
ಅವರು ಬದಲಾವಣೆ ಆಗುವಂತಹ ಪ್ರಶ್ನೆಯೇ ಇಲ್ಲ.ಸಿಎಂ ಬದಲಾವಣೆ ಬಗ್ಗೆ ಯಾವುದೇ ಮಾತುಕತೆ ಇಲ್ಲ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಎಂಬುದು ಮಾಧ್ಯಮ ಸೃಷ್ಟಿ.
ಯಡಿಯೂರಪ್ಪ ‌ನೇತೃತ್ವದಲ್ಲೇ ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ. ನಿತಿನ್ ಗಡ್ಕರಿ ಭೇಟಿಯಾಗಲು ಡಿಸಿಎಂ ಲಕ್ಷ್ಮಣ್ ಸವದಿ ದೆಹಲಿಗೆ ಹೋಗಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ದೆಹಲಿ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಮ್ಮ ತಮ್ಮ ಕೆಲಸ ಮಾಡಲಿ. ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡೋದು ಒಳ್ಳೆಯದು ಎಂದ ರಮೇಶ್ ಜಾರಕಿಹೊಳಿ‌ ಹೇಳಿದ್ರು

ರಾಜ್ಯದ ಜನತೆ ಆಶೀರ್ವಾದದಿಂದ ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಿಶೇಷ ಸಂದರ್ಭದಲ್ಲಿ ಬಿಎಸ್‌ವೈ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.ಸರಣಿ ಸರಣಿ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಂತಿದ್ದಾರೆ. ರಾಜ್ಯದ ಜನರ ಮನಸ್ಸು ಗೆದ್ದು ಇಂದು ಒಂದು ವರ್ಷ ಪೂರೈಸಿದ್ದಾರೆ. ಮುಂದಿನ ಎರಡೂವರೆ ವರ್ಷ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತಾರೆ. 2023ರಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಎಲ್ಲಾ ತಯಾರಿ ನಡೆದಿದೆ, ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ, ನಾನು ಸಾಮಾನ್ಯಕಾರ್ಯಕರ್ತ,ಎಂದುಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು

Check Also

ಆಸ್ಪತ್ರೆ ಉದ್ಘಾಟನೆ ಮಾಡಿ,ಡೆಸ್ಕ್ ಖರೀಧಿ ಮಾಡಿ,ಡೆಂಗ್ಯು ಕಂಟ್ರೋಲ್ ಮಾಡಿ….!!

  ಚಿಕ್ಕೋಡಿ‌ ತಾಯಿ ಮಕ್ಕಳ ಆಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಕ್ರಮ‌ ಜರುಗಿಸಿ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ- ಜು.12: ಚಿಕ್ಕೋಡಿಯಲ್ಲಿ …

Leave a Reply

Your email address will not be published. Required fields are marked *