Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ವೈರಸ್ ಕ್ರೌರ್ಯ ಇಂದು ಸಂಡೇ 163 ಸೊಂಕಿತರ ಪತ್ತೆ

ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ವೈರಸ್ ಕ್ರೌರ್ಯ ಇಂದು ಸಂಡೇ 163 ಸೊಂಕಿತರ ಪತ್ತೆ

ಬೆಳಗಾವಿ- ಜಿಲ್ಲೆಯಲ್ಲಿ ಕಿಲ್ಲರ್ ವೈರಸ್ ಕ್ರೌರ್ಯ ಮುಂದುವರೆದಿದೆ ಇಂದು ಸಂಡೇ ಲಾಕ್ ಡೌನ್ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 163 ಸೊಂಕಿತರು ಪತ್ತೆಯಾಗಿದ್ದಾರೆ.ಆದರೆ ಇವತ್ತು ಒಂದೇ ದಿನ 173 ಜನ ಡಿಸ್ಚಾರ್ಜ್ ಆಗಿದ್ದು ಸಂತಸದ ಸಂಗತಿ

ಇಂದು ಸಂಡೇ ಮಹಾಮಾರಿ ವೈರಸ್ ಗೆ 6 ಜನ ಬಲಿಯಾಗಿದ್ದುಬೆ ಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ನೂರುಗಟ್ಟಲೇ ಸೊಂಕಿತರು ಪತ್ತೆಯಾಗುತ್ತಿದ್ದಾರೆ.ಸಿಂಗಲ್ ,ಡಬಲ್,ತ್ರಿಬಲ್ ಸೆಂಚ್ಯುರಿ ಬಾರಿಸಿರುವ ಈ ಮಹಾಮಾರಿ ವೈರಸ್ ಇವತ್ತು ಭಾನುವಾರ ಒಂದೇ ದಿನ 163 ಜನರಿಗೆ ವಕ್ಕರಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿಗೆ ಸೊಂಕಿತರ ಸಂಖ್ಯೆ , 2000 ಸಾವಿರ ಗಡಿ ದಾಟಿ 2149 ಗೆ ತಲುಪಿದೆ

ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನ ಕೊರೋನಾ ಅಪ್ ಡೇಟ್ ಹೀಗಿದೆ ನೋಡಿ

Belagavi dist
Today’s report

Today positive cases found- 163

Today death- 6

Today discharge- 173

Total positive cases- 2149

Total discharge

Active cases- 1461

Total death-46

ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ 13 ಜನ ಆರೋಪಿಗಳಿಗೆ ವಕ್ಕರಿಸಿದ ಮಹಾಮಾರಿ

ಬೆಳಗಾವಿ- ಇತ್ತೀಚಿಗೆ ಜಿಲ್ಲಾ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ಮಾಡಿ ಬಂಧನಕ್ಜೊಳಗಾದ 13 ಜನ ಆರೋಪಿಗಳಿಗೆ ಕೊರೋನಾ ಸೊಂಕು ತಗಲಿದ್ದು ದೃಡವಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಮಂಧಿಸಿದಂತೆ 22 ಜನ ಆರೋಪಿಗಳನ್ನು ಬಂಧಿಸಲಾಗಿದೆ ಇವರನ್ನು ಹಿಂಡಲಗಾ ಜೈಲಿಗೆ ಕಳುಹಿಸುವ ಮುನ್ನ ಕೋವೀಡ್ ಟೆಸ್ಟ್ ಮಾಡಲಾಗಿತ್ತು

22 ಜನ ಆರೋಪಿಗಳ ಪೈಕಿ 13 ಜನರಿಗೆ ಸೊಂಕು ತಗಲಿದ್ದು ದೃಡವಾಗಿದೆ ದು ವಿಶ್ವಸನೀಯ ಮೂಲಗಳು ತಿಳಿಸಿವೆ

ಆಸ್ಪತ್ರೆ ಹಿಂಸಾಚಾರಕ್ಕೆ ಸಮಂಧಿಸಿದಂತೆ ಎಪಿಎಂಸಿ ಪೋಲೀಸರು ಆರೋಪಿಗಳನ್ನು ಬಂಧಿಸುವ ಕಾರ್ಯಚರಣೆ ಮುಂದುವರೆದಿದ್ದು,ಈ ವರೆಗೆ 22 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳಗಾವಿ ಎಪಿಎಂಸಿ ತರಕಾರಿ ಮಾರುಕಟ್ಟೆಗೂ ಹರಡಿದ ಸೊಂಕು

ಬೆಳಗಾವಿಯ ಎಪಿಎಂಸಿ ತರಕಾರಿ ಮಾರುಕಟ್ಟೆಗೂ ಮಹಾಮಾರಿ ಸೊಂಕು ಹರಡಿದೆ ಎಂದು ಅಲ್ಲಿಯ ಹೋಲ್ ಸೇಲ್ ತರಕಾರಿ ವ್ಯಾಪಾರಿಯೊಬ್ಬ ಮಾಡಿದ ಅಡಿಯೋ ವೈರಲ್ ಆಗಿದೆ.

ಆ ವ್ಯಾಪಾರಿ ಅಡಿಯೋ ಮಾಡಿ ನಮ್ಮ ತಂದೆಗೆ ಸೊಂಕು ತಗಲಿದೆ,ಮಾರ್ಕೆಟ್ ನಲ್ಲಿರುವ ಎಲ್ಲ ವ್ಯಾಪಾರಿಗಳು ಹುಷಾರಾಗಿರಿ,ಹದಿನೈದು ದಿನ ಮಾರ್ಕೆಟ್ ಬಂದ್ ಮಾಡಿ ಎಂದು ಅಡಿಯೋ ಮಾಡಿದ ವ್ಯಾಪಾರಿ ಒತ್ತಾಯಿಸಿದ್ದಾನೆ.

Check Also

52 ದಿನಗಳ ಬೀಗಕ್ಕೆ ಬ್ರೆಕ್,ಬೆಳಗಾವಿ ಇಂದಿನಿಂದ ಖುಲ್ಲಂ ಖುಲ್ಲಾ…!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಕೊರೋನಾ ಮಹಾಮಾರಿಯ ಕಾಟಕ್ಕೆ ತತ್ತರಿಸಿತ್ತು,ಜಿಲ್ಲೆಯ ಜನ ಬರೊಬ್ಬರಿ 52 ದಿನಗಳ ಅನುಭವಿಸಿದ ಮನೆವಾಸದಿಂದ ಇಂದು ಮುಕ್ತಿ …

Leave a Reply

Your email address will not be published. Required fields are marked *