ಬೆಳಗಾವಿ – ಇಂದಿನ ಅಧುನಿಕ ಯುಗದಲ್ಲಿ ಅಂಧ ಶ್ರದ್ಧೆ ಎಷ್ಟೊಂದು ಹೆಚ್ಚಾಗಿದೆ ಅಂದರೆ ಜನ ನ್ಯಾಯಾಲಯದ ಆವರಣದಲ್ಲಿಯೂ ಮಾಟ ಮಂತ್ರ ಮಾಡಲು ಶುರು ಮಾಡಿದ್ದಾರೆ
ಮಹಾಲಯ ಅಮವಾಸ್ಯೆಯ ಮದ್ಯರಾತ್ರಿ ಕೆಲವರು ಬೆಳಗಾವಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿರುವ ಜೆ ಎಂ ಎಫ್ ಸಿ ನ್ಯಾಯಾಲಯದ ಮುಖ್ಯದ್ವಾರದಲ್ಲಿ ಕುಂಬುಳಕಾಯಿ ಟೆಂಗಿನಕಾಯಿ, ಮಾಟ ಮಂತ್ರದ ಗೊಂಬೆ ನಿಂಬೆಹಣ್ಣಿಗೆ ಕುಂಕುಮ ಹಚ್ಚಿ ಎಸೆದು ಹೋಗಿದ್ದಾರೆ
ನ್ಯಾಯಾಲಯದ ಆವರಣದಲ್ಲಿ ವಾಮಾಚಾರ ನಡೆದಿರುವದನ್ನು ನೊಡಿದ ಜನ ಕೆಲ ಕಾಲ ಆತಂಕ ವ್ಯೆಕ್ತಪಡಿಸಿ ನ್ಯಾಯಾಲಯದ ಆವರಣದ ಒಳಗೆ ಹೋಗಲು ಹಿಂಜರಿಯುತ್ತಿದ್ದರು
ಬಹುಶ ಕಕ್ಷಿದಾರರು ತಮ್ಮ ವಾಜ್ಯ ಬೇಗ ಬಗೆಹರಿಯಲಿ ಎಂದು ವಾಮಾಚಾರ ಮಾಡಿರಬಹುದು ಅಥವಾ ಎದುರಾಳಿಗೆ ಬೇಗ ಶಿಕ್ಷೆಯಾಗಲಿ ಎಂದು ಹುಚ್ಚಾಟ ಮಾಡಿರಬಹುದು ಎಂದು ಜನ ಮಾತನಾಡುತ್ತದ್ದರು
ಮಾಟ ಮಂತ್ರ ವಾಮಾಚಾರವನ್ನು ಕೆಲವರು ದಂಧೆಯನ್ನಾಗಿ ಮಾಡಿಕೊಂಡಿದ್ದು ವಾಮಾಚಾರಕ್ಕೆ ಇಂದಿಗೂ ಜನ ಜೋತು ಬಿದ್ದಿರುವದು ದುರ್ದೈವದ ಸಂಗತಿಯಾಗಿದೆ
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …