ಬೆಳಗಾವಿ- ಇಲೆಕ್ಷನ್ ಬಂದಾಗ ಅದು ಬಿಜೆಪಿ ಇರಲಿ ಅಥವಾ ಕಾಂಗ್ರೆಸ್ ಇರಲಿ ಇಬ್ಬರಿಗೂ ಅಧಿಕಾರ ಮುಖ್ಯ ,ಈ ಎರಡೂ ಪಕ್ಷಗಳು ಬೆಳಗಾವಿಯಲ್ಲಿ ಕನ್ನಡಿಗರು ಕಸಕ್ಕೆ ಸಮಾನ ಎಂದು ತಿಳಿದುಕೊಂಡಿದ್ದಾರೆ.
ಹೌದು ಈ ವಿಚಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಒಪ್ಪದಿದ್ದರೂ ಕನ್ನಡಿಗರಾದ ನಾವು ಒಪ್ಪಲೇ ಬೇಕು ,ಕನ್ನಡಿಗರು ಹೃದಯ ಶ್ರೀಮಂತರು ಇವರು ಯಾವಾಗಲೂ ಸೇಡು ತೀರಿಸಿಕೊಳ್ಳಲು ಮುಂದೆ ಬರುವದಿಲ್ಲ.ಇಲೆಕ್ಷನ್ ಬಂದಾದ ಕನ್ನಡ ಮರೆತು, ಜಾತಿ ನೆನಪಿಸಿಕೊಳ್ಳುತ್ತಾರೆ, ಜಾತಿ ನೋಡಿ ಮತ ಹಾಕುತ್ತಾರೆ ಅನ್ನೋದು ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಾಗಿ ಕನ್ನಡಿಗರು ನಂಬುವ ಜಾತಿಗೆ ಟಿಕೆಟ್ ಕೊಟ್ಟು ಮರಾಠಿಗರ ಓಲೈಕೆಗೆ ಅವರ ಕಾಲಿಗೆ ಬೀಳುತ್ತಾರೆ,ಅವರು ಹೇಳಿದ್ದನ್ನು ಕೇಳುತ್ತಾರೆ,ಅವರಿಗೆ ಗೌರವ ಕೊಡುತ್ತಾರೆ.
ಕನ್ನಡಿಗರು ಮತ ಹಾಕುವಾಗ ಅವರ ಕನ್ನಡತನ,ಕನ್ನಡ ಅಭಿಮಾನ ಎಲ್ಲವೂ ನಗನ್ಯ ಯಾಕಂದ್ರೆ ಮತ ಹಾಕುವಾಗ ಅಭಿಮಾನಿ ಕನ್ನಡಿಗರಿಗೆ ಜಾತಿಯೇ ಮುಖ್ಯ ಅಗಿರುತ್ತದೆ ಅನ್ನೋದು ರಾಜಕೀಯ ನಾಯಕರಿಗೆ ಗೊತ್ತಾಗಿದೆ.ಇದು ನಿಜವೂ ಹೌದು..
ಈಗ ನೋಡಿ ಬಿಜೆಪಿ ಲಿಂಗಾಯತ ಮಹಿಳೆಗೆ ಟಿಕೆಟ್ ಕೊಟ್ಟು,ಮರಾಠಿಗರ ಕಾಲಿಗೆ ಬಿದ್ದಿದೆ ಇದರ ವಿರುದ್ಧ ಲಿಂಗಾಯತ ಸಮುದಾಯ ತೆಲೆ ಕೆಡಿಸಿಕೊಳ್ಳುವದಿಲ್ಲ,ಕನ್ನಡ ಕಾಯುವ,ರಕ್ಷಣೆ ಮಾಡುವ ಯುವಕರು ಬಹುತೇಕ ಲಿಂಗಾಯತ ಸಮುದಾಯದವರೇ ಆಗಿರುವದರಿಂದ ಅವರು ಬಿಜೆಪಿ ಧೋರಣೆ ವಿರುದ್ಧ ಪ್ರತಿಭಟನೆ ಮಾಡುವದಿಲ್ಲ,ಅವರಿಗೆ ಅವರ ಸಮುದಾಯದ ಅಭ್ಯರ್ಥಿ ಗೆದ್ದರೆ ಸಾಕು ಎನ್ನುವ ಸಿದ್ಧಾಂತಕ್ಕೆ ತೆಲೆ ಬಾಗುತ್ತಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಇದನ್ನೇ ಮಾಡಿದೆ,ಈಗ ಬಿಜೆಪಿ ಅದನ್ನೇ ಮಾಡಿದೆ.ಕನ್ನಡಿಗರ ಜೊತೆಗೂ ಸಭೆ ಮಾಡಿ,ಅವರ ಸಮಸ್ಯೆಗಳನ್ನು ಆಲಿಸಿ ಅಂತಾ ಇವತ್ತು ಯಾವೊಬ್ನ ಶಾಸಕನೂ ಒತ್ತಾಯ ಮಾಡಲಿಲ್ಲ ಇದು ದುರಂತ
ಕೆಲವರು ಕನ್ನಡವೇ ಜಾತಿ,ಕನ್ನಡವೇ ಧರ್ಮ,ಕನ್ನಡವೇ ದೇವರು ಅಂತಾರೆ ಅವರು ಈಗ ಏನು ಮಾಡುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕು.
ಬಿಜೆಪಿ ಖಾತೆ ತೆರೆದ ಮಾಜಿ ಶಾಸಕನಿಂದ ಹೊಸ ಕ್ಯಾತೆ
ಮಾಜಿ ಶಾಸಕ ಮನೋಹರ ಕಡೋಲ್ಕರ್ ಅವರು ಇವತ್ತು ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಪಾಲಿಕೆ ಎದುರು ಹಾರಿಸಿರುವ ಕನ್ನಡದ ಧ್ವಜದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಬೆಳಗಾವಿಯಲ್ಲಿ ಮರಾಠಿಗರೇ ಬಹು ಸಂಖ್ಯಾತರು ಚುನಾವಣೆ ಯಲ್ಲಿ ನೀವು ಗೆಲ್ಲಲು ನಿಮಗೆ ನಮ್ಮ ಮತಗಳು ಬೇಕು,ಅದಕ್ಕಾಗಿ ನೀವು ನಾವು ಹೇಳಿದ ಮಾತು ಕೇಳಬೇಕು,ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಶಾಸಕನಾಗಿ ಗೆಲ್ಲುವ ಮೂಲಕ ನಾನು ಅಕೌಂಟ್ ಓಪನರ್ ಶಾಸಕ ಆಗಿದ್ದೇನೆ.ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ತೆಗೆಯಬಾರದು,ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಲೆ ಘೋಷಣೆ ಮಾಡಿರುವ ಅನುದಾನ ಬಿಡುಗಡೆ ಮಾಡಲೇಬೇಕು,ಈ ಪ್ರಾಧಿಕಾರಕ್ಕೆ ಶೀಘ್ರ ಅದ್ಯಕ್ಷ ನೇಮಕ ಆಗಲೇ ಬೇಕು ಎಂದು ಒತ್ತಾಯ ಮಾಡಿದ್ರು