ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಬೆಳಗಾವಿಯಲ್ಲಿ ಕರವೇ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ,ಕನ್ನಡ ನಾಮಫಲಕ ಕಡ್ಡಾಯದ ಕುರಿತು ಗಡುವು ನೀಡಿ ಬೆಂಗಳೂರಿಗೆ ತೆರಳುತ್ತಿದ್ದಂತೆಯೇ ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರುವಾಗಿದೆ.
ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳ ತಂಡ ಬೆಳಗಾವಿಯ ಗಲ್ಲಿ,ಗಲ್ಲಿಗಳಲ್ಲಿ ಸುತ್ತಾಡಿ,ಅನ್ಯಭಾಷಿಕ ಫಲಕಗಳನ್ನು ತೆರವುಗೊಳಿಸಲು ಸೂಚಿಸಿದೆ.ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಪಿ ಎನ್ ಲೋಕೇಶ್ ಅವರ ಕನ್ನಡದ ಇಚ್ಛಾಶಕ್ತಿಯ ಪರಿಣಾಮ ಬೆಳಗಾವಿಯಲ್ಲಿ ಕನ್ನಡದ ಅನುಷ್ಠಾನಕ್ಕೆ ಚಾಲನೆ ಸಿಕ್ಕಿದೆ.
ಪಾಲಿಕೆ ಆಯುಕ್ತ ಪಿ.ಎನ್ ಲೋಕೇಶ್ ಅವರ ಸೂಚನೆ ಮೇರೆಗೆ ಪಾಲಿಕೆ ಆರೋಗ್ಯಾಧಿಕಾರಿ ಸಂಜೀವ ನಾಂದ್ರೆ ನೇತ್ರತ್ವದ ತಂಡ ಇಂದು ಅನ್ಯಭಾಷಿಕ ಫಲಕಗಳನ್ನು ಗುರುತಿಸಿ ಅಂಗಡಿ ಮಾಲೀಕರಿಗೆ ಕನ್ನಡ ನಾಮಫಲಕ ಅಳವಡಿಸುವ ಎಚ್ಚರಿಕೆ ನೀಡಿದೆ. ಕನ್ನಡ ನಾಮಫಲಕ ಅಳವಡಿಸದಿದ್ದರೆ ಅಂಗಡಿಯ ಲೈಸನ್ಸ್ ರದ್ದು ಗೊಳಿಸುವ ಎಚ್ಚರಿಕೆ ನೀಡಿದ್ದು,ಕೆಲವು ಅಂಗಡಿಕಾರರು ಅನ್ಯಭಾಷಿಕ ಫಲಕಗಳನ್ನು ಸ್ವಯಂಪ್ರೇರಿತರಾಗಿ ಬದಲಾಯಿಸಿ ಕನ್ನಡದ ಫಲಕಗಳನ್ನು ಹಾಕುತ್ತಿರುವದು ಸಂತಸದ ಸಂಗತಿ….
ಜೈ..ಕರ್ನಾಟಕ…ಜೈ ಕನ್ನಡ…ಜೈ ತಾಯಿ ಭುವನೇಶ್ವರಿ…..