ಬೆಳಗಾವಿ-ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಲಿಕ್ಕಾಗದೇ ಕಂಗಾಲ್ ಆಗಿರುವ ಶಿವಸೇನೆ ಇವತ್ತು ಮತ್ತೆ ಪುಂಡಾಟಿಕೆ ನಡೆಸಿದ್ದು ಮಹಾರಾಷ್ಟ್ರದಲ್ಲಿರು ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡುವಂತೆ ಕರೆ ನೀಡಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಸವಾಲು ಹಾಕಿದೆ.
ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಶಿವಸೇನೆ ಮುಖಂಡ ವಿಜಯ ದೇವಣೆ ಮಾರ್ಚ್ 20 ರಂದು ಮಹಾರಾಷ್ಟ್ರದ ಸಾಂಗಲಿ ಮಿರಜ,ಕೊಲ್ಹಾಪೂರ ಸಾತಾರಾ,ಜಿಲ್ಲೆಗಳಲ್ಲಿ ಇರುವ ಕನ್ನಡಿಗರು ಅಂಗಡಿಗಳನ್ನು ಬಂದ್ ಮಾಡಿ,ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗರ ಬೆಂಬಲ ಸೂಚಿಸಬೇಕೆಂದು ಕರೆ ನೀಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ.
ಕೊಲ್ಹಾಪೂರ ಸಾಂಗಲಿ ಮಿರಜ,ಮತ್ತು ಸಾತಾರಾ ಜಿಲ್ಲೆಗಳಲ್ಲಿ ವ್ಯಾಪಾರ,ವಹಿವಾಟು ಮಾಡುತ್ತಿರುವ ಕನ್ನಡಿಗರು ತಮ್ಮ ಅಂಗಡಿಗಳನ್ನು ಮಾರ್ಚ್ 20 ರಂದು ಕಡ್ಡಾಯವಾಗಿ ಬಂದ್ ಮಾಡುವಂತೆ ಶಿವಸೇನೆ ಮುಖಂಡ ವಿಜಯ ದೇವಣೆ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡದ ಅಂಗಡಿಕಾರರಿಗೆ ಧಮಕಿ ಹಾಕಿದ್ದಾರೆ.
ಮಾರ್ಚ್ 20 ರೊಳಗಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಹಾರಿಸಿರುವ ಕನ್ನಡದ ಧ್ವಜ ತೆರವು ಮಾಡದೇ ಹೋದರೆ ಮಹಾರಾಷ್ಟ್ರದಲ್ಲಿರು ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡುತ್ತೇವೆ ಎಂದು ಶಿವಸೇನೆ ಬಹಿರಂಗವಾಗಿ ಧಮಕಿ ಹಾಕಿದೆ.
ಮಹಾರಾಷ್ಟ್ರದ ಕೊಲ್ಹಾಪೂರ ದಲ್ಲಿನ ಕನ್ನಡದ ನಾಮಫಲಕಗಳಿಗೆ ಮಸಿ ಬಳಿದು,ಪುಂಡಾಟಿಕೆ ನಡೆಸಿದ್ದ ಶಿವಸೇನೆ ಇವತ್ತು ಸಂಸತ್ತಿನಲ್ಲೂ ಗಡಿ ವಿವಾದ ಪ್ರಸ್ತಾಪಿಸಿ ಗದ್ದಲ ಮಾಡುವದರ ಜೊತೆಗೆ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡದ ಅಂಗಡೀಕಾರರಿಗೆ ಮಾರ್ಚ್ 20 ರಂದು ಅಂಗಡಿಗಳನ್ನು ಬಂದ್ ಮಾಡುವಂತೆ ಧಮಕಿ ಹಾಕಿದ್ದು,ಕರ್ನಾಟಕ ಸರ್ಕಾರ ಇದಕ್ಕೆ ಯಾವ ರೀತಿಯ ಉತ್ತರ ಕೊಡುತ್ತದೆ ಎನ್ನುವದನ್ನು ಕಾದು ನೋಡಬೇಕಾಗಿದೆ.