ಬೆಳಗಾವಿ
ಬಿಟ್ಟು ಬಿಡದೇ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಕಂಟೇನರ್ ಮುಗಿಚಿಬಿದ್ದ ಪರಿಣಾಮ ಕೆಲಕಾಲ.
ರಾಷ್ಟ್ರೀಯ ಹೆದ್ಧಾರಿಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆಯಿತು
ಕಂಟೇನರ್ ಮುಗಿಚಿ ಬಿದ್ದ ಪರಿಣಾಮವಾಗಿ
ಹೆದ್ದಾರಿಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ.ಗೊಂಡಿತ್ತು ಸರ್ವೀಸ್ ರಸ್ತೆ ಮೂಲಕ ವಾಹನ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು ಆದರೆ
ಸರ್ವೀಸ್ ರಸ್ತೆಯಲ್ಲೂ ಟಾಟಾಏಸ್ ವಾಹನ ಮುಗಿಚಿ ಬಿದ್ದಿತು ಇದರಿಂದ ಎರಡೂ ರಸ್ತೆ ಸಂಚಾರ ಸ್ಥಗಿತಗೊಂಡು ಗಂಟೆಗಳ ಕಾಲ ವಾಹನ ಸವಾರರು ಪರದಾಡಿದರು
ಟ್ರಾಫಿಕ್ ಸರಿಪಡಿಸಲು ಹಿರೇಬಾಗೇವಾಡಿ ಪೋಲಿಸರ ಹರಸಾಹಸ ನಡೆಸಿದರು ಕ್ರೇನ್ ಮೂಲಕ ಟಾಟಾ ಎಸ್ ವಾಹನವನ್ನು ತೆರವು ಮಾಡಲಾಗಿದ್ದು ಈಗ ಸಂಚಾರ ಸುಗಮಗೊಂಡಿದೆ ಹೈವೇಯಲ್ಲಿ ಸ್ಲೀಪಿಂಗ್ ಮೋಡ್ ನಲ್ಲಿರುವ ಕಂಟೇನರ್ ಎಬ್ಬಿಸುವ ಕಾರ್ಯಾಚರಣೆ ನಡೆಯುತ್ತಿದೆ
ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಜಿಲ್ಲೆಯ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ