ಬೆಳಗಾವಿ- ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ವಿದ್ಯುತ್ತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಸಮೀಪದ ಅಲಾರವಾಡ ಗ್ರಾಮದಲ್ಲಿ ನಡೆದಿದೆ
ಇಂದು ಬೆಳಿಗ್ಗೆ ಸುಮಾರು 11 ಘಂಟೆಗೆ ಅಲಾರವಾಡ ಗ್ರಾಮದ ಅಪ್ಪಣ್ಣಾ ಜಿನ್ನಪ್ಪಾ ಶಂಕರಗೌಡ (55) ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ಮೇವಿನ ಪೆಂಡಿಯನ್ನು ಹೊರುವ ಸಂಧರ್ಭದಲ್ಲಿ ತಂತಿ ತಗುಲಿದ ಪರಿಣಾಮ ರೈತ ಅಸುನೀಗಿದ್ದಾನೆ
ಅಲಾರವಾಡ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿವೆ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ